ಕಲಬುರಗಿ: ಭಕ್ತಿಯೇ ಮೈವೆತ್ತಂತೆ ಉರುಳು ಸೇವೆ (Urulu Seva) ಮಾಡ್ತಿರೋ ಮಹಿಳೆ, ಆದ್ರೆ ಈ ಉರುಳು ಸೇವೆ ದೇವಸ್ಥಾನದ (Temple) ಪ್ರಾಂಗಣದಲ್ಲೂ ಅಲ್ಲ, ಹೊರಾಂಗಣದಲ್ಲೂ ಅಲ್ಲ! ಬದಲಿಗೆ ಬಸ್, ಕಾರು ಓಡಾಡೋ ರಸ್ತೇಲಿ! ಈ ಮಹಿಳೆಯದ್ದು ಅಂತಿಂಥಾ ಉರುಳು ಸೇವೆಯಲ್ಲ, ಬರೋಬ್ಬರಿ 300 ಕಿಲೋ ಮೀಟರ್ ದೂರದ ಹರಕೆಯ ಉರುಳು ಸೇವೆ. ಅಷ್ಟಕ್ಕೂ ಈ ಮಹಿಳೆ ಯಾರು ಅಂತೀರಾ? ಹೀಗೆ ರಸ್ತೆಲಿ ಉರುಳು ಸೇವೆ (Urulu Seva In Roads) ಮಾಡ್ತಿರೋದು ಯಾಕೆ ಅಂತೀರಾ? ಅಲ್ಲೇ ಇದೆ ಲೋಕ ಕಲ್ಯಾಣದ ಹರಕೆ!
ಯೆಸ್, ಹೆಮ್ಮಾರಿ ಕೊರೊನಾ ಅದೆಷ್ಟೋ ಜನರು ಪ್ರಾಣ ತೆಗೆದು ಇಡಿ ವಿಶ್ವವನ್ನೇ ತಲ್ಲಣ ಗೊಳಿಸಿದ್ದು ಯಾರೂ ಮರೆತಿಲ್ಲ. ಕೊರೊನಾ ಆಘಾತದಿಂದ ಜನ ಇನ್ನೂ ಹೊರಗೆ ಬಂದಿಲ್ಲ. ಸಂಕಟ ಬಂದಾಗ ವೆಂಕಟರಮಣ ಅನ್ನೋ ಹಾಗೆ ಜನರೆಲ್ಲ ದೇವರ ಮೊರೆಯಿಟ್ಟ ಮಹಿಳೆಯೊಬ್ಬರು ಈಗ ಉರುಳು ಸೇವೆ ಮಾಡ್ತಿರೋ ಈ ಶಶಿಕಲಾ ಮಾತೆ.
ಹೆದ್ದಾರಿಯಲ್ಲೇ ಉರುಳು ಸೇವೆ!
ಕೊರೊನಾ ಕಡಿಮೆಯಾದ್ರೆ ಕಲಬುರಗಿಯ ಘತ್ತರಗಿ ಭಾಗಮ್ಮ ತಾಯಿಗೆ ಉರುಳು ಸೇವೆ ಮಾಡೋದಾಗಿ ಶಶಿಕಲಾ ಮಾತ್ರೆ ಹರಕೆ ಹೊತ್ತಿದ್ದರು. ಇದೀಗ ಆ ಹರಕೆ ಫಲಿಸಿದ್ದಾಗಿ ನಂಬಿರುವ ತೆಲಂಗಾಣದ ಜಹೀರಾಬಾದ್ನ ಧನುಶ್ರೀ ಗ್ರಾಮದ ಈ ಮಹಿಳೆ ಅಲ್ಲಿಂದಲೇ ಉರುಳು ಸೇವೆ ಆರಂಭಿಸಿದ್ದರು. ಹೆದ್ದಾರಿಯಲ್ಲೇ ಉರುಳು ಸೇವೆ ಮಾಡ್ತಾ ಕಲಬುರಗಿ ಕಡೆ ಉರುಳುರುಳಿ ಬಂದಿದ್ದಾರೆ.
ಇದನ್ನೂ ಓದಿ: Swachh Bharat: ಕಲಬುರಗಿಯಲ್ಲಿ ಕಂಡ ಕಂಡಲ್ಲಿ ಕಸ ಎಸೆಯುವವರಿಗೆ ಹೊಸ ಲಗಾಮು
ಮಹಿಳೆ ಹಿಂದೆ ನೂರಾರು ಭಕ್ತರ ಹೆಜ್ಜೆ!
ಶಶಿಕಲಾ ಮಾತೆ ನವೆಂಬರ್ 11 ರಂದು ತೆಲಂಗಾಣದಿಂದ ಉರುಳು ಸೇವೆ ಆರಂಭಿಸಿದ್ದಾರೆ. ಇದೀಗ ಕರ್ನಾಟಕದ ಕಲಬುರಗಿ ತಲುಪಿದ್ದು, ಇನ್ನೇನು ಘತ್ತರಗಿಯ ಭಾಗಮ್ಮ ದೇವಿ ಮುಂದೆ ಉರುಳು ಸೇವೆಯನ್ನು ಪೂರ್ಣಗೊಳಿಸಲಿದ್ದಾರೆ. ಈ ಮಹಿಳೆಯ ಉರುಳು ಸೇವೆಯಲ್ಲಿ ನೂರಾರು ಭಕ್ತರು ಕೂಡಾ ಹೆಜ್ಜೆ ಹಾಕ್ತಿದ್ದಾರೆ. ಉರುಳು ಸೇವೆ ಉದ್ದಕ್ಕೂ ಭಜನೆ, ಕೀರ್ತನೆ, ಸತ್ಸಂಗ ನಡೆಸಲಾಗ್ತಿದೆ.
ಇದನ್ನೂ ಓದಿ: Positive Story: ಸರ್ಕಾರಿ ಶಾಲೆ ಕಟ್ಟಲು 21 ದಿನಗಳಲ್ಲಿ 60 ಲಕ್ಷ ಸಂಗ್ರಹಿಸಿದ ಸ್ವಾಮೀಜಿ
300 ಕಿಲೋಮೀಟರ್ ಉರುಳು ಸೇವೆ
ಕೊರೊನಾ ಕಡಿಮೆಯಾಗಲಿ ಲೋಕ ಕಲ್ಯಾಣವಾಗಲಿ ಅಂತ 300 ಕಿಲೋಮೀಟರ್ ಉರುಳು ಸೇವೆ ಮಾಡಿದ ಈ ಮಹಿಳೆಯಂತೂ ಭಾರೀ ಫೇಮಸ್ ಆಗ್ತಿದ್ದಾರೆ. ಏನೇ ಆಗಲಿ, ಈ ಮಹಿಳೆಯ ದೈವಭಕ್ತಿ ಕಂಡು ಹಲವರು ಮಾರು ಹೋಗಿರುವುದಂತೂ ಸತ್ಯ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ