Airport: ತೊಗರಿನಾಡಿನ ಏರ್‌ಪೋರ್ಟ್‌ ನಲ್ಲಿ ಇನ್ಮುಂದೆ ರಾತ್ರಿನೂ ವಿಮಾನ ಲ್ಯಾಂಡಿಂಗ್!

X
ಕಲಬುರಗಿಯಲ್ಲಿ ನೈಟ್‌ ಲ್ಯಾಂಡಿಂಗ್

"ಕಲಬುರಗಿಯಲ್ಲಿ ನೈಟ್‌ ಲ್ಯಾಂಡಿಂಗ್"

Kalburgi Airport: ಕಲಬುರಗಿಯಲ್ಲಿ ರಾತ್ರಿ ಲ್ಯಾಂಡಿಂಗ್ ಗೆ ಇದ್ದ ಸಮಸ್ಯೆ ನಿವಾರಣೆ ಆಗಿದೆ. ಇನ್ಮುಂದೆ ರಾತ್ರಿಯೂ ವಿಮಾನವನ್ನು ಲ್ಯಾಂಡ್ ಮಾಡಬಹುದು ಅಂತಾ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ದಿಂದ ಅನುಮತಿ ಪಡೆದಿದೆ.

  • Share this:

ಕಲಬುರಗಿ: ಇನ್ಮುಂದೆ ಕಲಬುರಗಿಯಿಂದಲೂ (Kalaburagi) ರಾತ್ರಿ ಹೊತ್ತಲೇ ಗಗನ ಯಾನ ನಡೆಸಬಹುದು. ಇದುವರೆಗೂ ಮುಂಜಾನೆಯಿಂದ ಮುಸ್ಸಂಜೆವರೆಗೂ ಇದ್ದ ವಿಮಾನ ಲ್ಯಾಂಡಿಂಗ್ (Flight Landing) ಈಗ ನೈಟ್ ಲ್ಯಾಂಡಿಂಗ್ ಆಗಿ ಬದಲಾಗಿದೆ. ಹೀಗೆ ದಿನದ 24 ಗಂಟೆಯೂ ಇನ್ನು ತೊಗರಿನಾಡಿನಲ್ಲಿ ವಿಮಾನ ಲ್ಯಾಂಡ್ ಆಗಲಿದೆ. ನೈಟ್ ಲ್ಯಾಂಡಿಂಗ್ ಅನುಭವ ಹೇಗಿರುತ್ತೆ ಅನ್ನೋದನ್ನ ನೋಡೋಣ ಬನ್ನಿ


ಡಿಜಿಸಿಎ ಅನುಮತಿ


ಯೆಸ್, ಕಲಬುರಗಿಯಲ್ಲಿ ರಾತ್ರಿ ಲ್ಯಾಂಡಿಂಗ್ ಗೆ ಇದ್ದ ಸಮಸ್ಯೆ ನಿವಾರಣೆ ಆಗಿದೆ. ಇನ್ಮುಂದೆ ರಾತ್ರಿಯೂ ವಿಮಾನವನ್ನು ಲ್ಯಾಂಡ್ ಮಾಡಬಹುದು ಅಂತಾ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ದಿಂದ ಅನುಮತಿ ಪಡೆದಿದೆ. ಇದ್ರಿಂದಾಗಿ ಮುಂದಿನ ದಿನಗಳಲ್ಲಿ ಕಲಬುರಗಿ ಜಿಲ್ಲೆಗೆ ರಾತ್ರಿ ಹೊತ್ತಲ್ಲೂ ವಿಮಾನ ಬಂದು ಇಳಿಯಲಿದೆ.




ಅಪರೂಪದ ಸಾಧನೆ


ಇದು ತೊಗರಿ ನಾಡಿನ ಮಟ್ಟಿಗೆ ಅಪರೂಪದ ಸಾಧನೆಯೇ ಸರಿ. ಇದುವರೆಗೂ ಮುಂಜಾನೆಯಿಂದ ಮುಸ್ಸಂಜೆಯವರೆಗೆ ವಿಮಾನಗಳು ಇಲ್ಲಿ ಹಾರಾಟ ನಡೆಸುತ್ತಿದ್ದವು. ಸೂರ್ಯಾಸ್ತದ ನಂತರವೂ ಎಲ್ಲವೂ ಸ್ತಬ್ಧಗೊಳ್ಳುತ್ತಿತ್ತು. ಆದ್ರೀಗ ಸಿಕ್ಕ ಹೊಸ ಅನುಮತಿಯಿಂದ ರಾತ್ರಿಯೂ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಗಳು ನಡೆಸುವಂತಾಗಿದೆ.


ಸತತ ಪ್ರಯತ್ನದ ಪ್ರತಿಫಲ


ರನ್ ವೇ 27 ರ ಸಮೀಪದಲ್ಲಿ ಯಾವುದೇ ಸಂಭಾವ್ಯ ಎತ್ತರದ ನಿರ್ಬಂಧಗಳಿಲ್ಲದ ಕಾರಣ ಡಿಜಿಸಿಎ ರನ್ವೇ 27 ಕ್ಕೆ ರಾತ್ರಿ ಲ್ಯಾಂಡಿಂಗ್ ಅನುಮತಿಯನ್ನು ನೀಡಿದೆ. ರನ್ವೇ 9 ರಲ್ಲಿ ರನ್ವೇ ಥ್ರೆಶೋಲ್ಡ್ ಶಿಫ್ಟ್ ಅನ್ನು ಕೈಗೊಳ್ಳಲು ಡಿಜಿಸಿಎ ಹೇಳಿದೆ. ಈ ಸೌಲಭ್ಯದಿಂದ ಮುಂಬರುವ ದಿನಗಳಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ಕಲ್ಬುರ್ಗಿಯಿಂದ ದೇಶದ ವಿವಿಧ ಕಡೆ ಸೇವೆ ಆರಂಭಿಸುವ ನಿಟ್ಟಿನಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆಯಾಗಿದೆ.


ಇದನ್ನೂ ಓದಿ: ಬಸವಣ್ಣನ ಪಾದುಕೆಗೆ ಇಲ್ಲಿ ಪ್ರತಿನಿತ್ಯ ನಡೆಯುತ್ತೆ ಪೂಜೆ!


ಸುಮಾರು ಎರಡು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಾಗಿದ್ದ ಈ ಸೌಲಭ್ಯವು ಕೋವಿಡ್ ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿತ್ತು. ಒಟ್ಟಿನಲ್ಲಿ ಕಲಬುರಗಿ ಸಂಸದರ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರ ಸತತ ಪ್ರಯತ್ನದಿಂದಾಗಿ ರಾತ್ರಿಯಲ್ಲೂ ವಿಮಾನ ಲ್ಯಾಂಡಿಂಗ್ ಗೆ ಅವಕಾಶ ಪಡೆದಿದೆ.


ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

First published: