North Karnataka Film: ಈತ ಗಿರಿನಾಡ್ ಪ್ರೇಮಿ! ಉತ್ತರ ಕರ್ನಾಟಕದ ಪ್ರತಿಭೆಗಳ ಹೊಸ ಸಿನಿಮಾ

ಮನರಂಜನೆಗೆ ಗಡಿ, ಭಾಷೆಯ ಹಂಗಿಲ್ಲ ಅಂತೀವಿ. ಆದರೆ ಬಹುತೇಕ ಕನ್ನಡ ಸಿನೆಮಾಗಳು ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳನ್ನಷ್ಟೇ ಕೇಂದ್ರೀಕೃತವನ್ನಾಗಿಸಿದೆ. ಇದೀಗ ಇದಕ್ಕೆ ಅಪವಾದ ಎಂಬಂತೆ ಉತ್ತರ ಕರ್ನಾಟಕ ಭಾಗದಲ್ಲೂ ಸಿನೆಮಾವೊಂದು ಸೆಟ್ಟೇರಿದೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

 • Share this:
  ಕಲಬುರಗಿ: ಸಿನಿಮಾ ಅಂದ್ ತಕ್ಷಣ ನೆನಪಾಗೋದು ಬೆಂಗ್ಳೂರು, ಮೈಸೂರು ಮಂಡ್ಯ ಕಡೆ ಭಾಷೆ, ಜನ. ಆದ್ರೆ ಈ ಸಿನಿಮಾ ಸುದ್ದಿ ಇದ್ಯಾವ್ದ್ರ ಬಗ್ಗೆನೂ ಅಲ್ಲ. ಅಂದಹಾಗೆ ಕಲಬುರಗಿ ಹಾಗೂ ಯಾದಗಿರಿ ಜನ ಸೇರ್ಕೊಂಡು ಲಕ್ಷಾಂತರ ರೂಪಾಯಿ ಇನ್ವೆಸ್ಟ್ ಮಾಡಿ ಸಿನಿಮಾ ಮಾಡಿದ್ದಾರೆ. ಇಡೀ ಫಿಲ್ಮ್ ಶೂಟಿಂಗನ್ನೂ ಉತ್ತರ ಕರ್ನಾಟಕದಲ್ಲೇ (North Karnataka) ಮಾಡಿದ್ದಾರೆ. ಸಿನಿಮಾ ಹೆಸರು ‘ಗಿರಿನಾಡ್ ಪ್ರೇಮಿ' (Girinada Premi Film) ಅಂತ. ಈ ಸಿನಿಮಾದಿಂದ ಉತ್ತರ ಕರ್ನಾಟಕದಲ್ಲೂ ಪ್ರತಿಭೆಗಳಿಗೆ ಭರವಿಲ್ಲ (Uttara Karnataka Talents) ಎಂಬುವುದನ್ನು ಮತ್ತೆ ಸಾಬೀತು ಮಾಡೋಕೆ ಹೊರಟಿದ್ದಾರೆ. ಸದ್ಯ 'ಗಿರಿನಾಡ್ ಪ್ರೇಮಿ' ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಕೂಡಾ ಮಾಡ್ತಿದೆ.  ದಸರಾ ಹಬ್ಬಕ್ಕೆ ರಿಲೀಸ್
  ಯಾದಗಿರಿಯ ಯುವ ಪ್ರತಿಭೆ ಶರಣು ಪಟ್ಟೆದಾರ ಅವರೇ ಈ ಸಿನಿಮಾ ಹೀರೋ. ನಾಯಕಿ ಸೌಮ್ಯ ಬೆಂಗಳೂರು ಮೂಲದವರು ಅನ್ನೋದನ್ನ ಹೊರತುಪಡಿಸಿದ್ರೆ, ಮಿಕ್ಕೆಲ್ಲರು ಬಹುತೇಕ ಉತ್ತರ ಕರ್ನಾಟಕ ಭಾಗದವರೇ ಇರೋದು ವಿಶೇಷ. ಜನರು ಕೂಡಾ ಶೂಟಿಂಗ್ ಸ್ಥಳಗಳಿಗೆ ತೆರಳಿ ಚಿತ್ರೀಕರಣ ದೃಶ್ಯವನ್ನು ಕಣ್ತುಂಬಿಕೊಳ್ಳೋ ಕಾತರ ತೋರುತ್ತಿದ್ದಾರೆ. ಬೆಂಗಳೂರು ಕೇಂದ್ರೀಕೃತವಾಗಿದ್ದ ಚಿತ್ರರಂಗವನ್ನು ಉತ್ತರ ಕರ್ನಾಟಕ ಭಾಗದಲ್ಲೇಕೆ ಹೆಚ್ಚು ಕ್ರಿಯಾಶೀಲವನ್ನಾಗಿಸಬಾರದು ಅನ್ನೋದು ಸಿನೆಮಾ ತಂಡದ ಯೋಜನೆ.

  ಇದನ್ನೂ ಓದಿ: Kalaburagi Ganapati: ಬದುಕು ಕಟ್ಟಿಕೊಟ್ಟ ಗಣಪ! ಇದು ನಿಜಕ್ಕೂ ದೇವರು ನೀಡಿದ ವರ!

  ಟ್ರೈಲರ್, ಸಾಂಗ್ ಹಿಟ್
  ಒಟ್ಟಾರೆಯಾಗಿ ಕಲಬುರಗಿ ಭಾಗದ ಯುವ ಪ್ರತಿಭೆಗಳು ಸೇರಿಕೊಂಡು ಮಾಡಿರುವ ಈ ಸಿನಿಮಾಕ್ಕೆ ನಿರೀಕ್ಷೆಗೂ ಮೀರಿ ಪ್ರಚಾರ ದೊರೆಯುತ್ತಿದೆ. ಚಿತ್ರದ ಹಾಡು, ಟ್ರೈಲರ್ ಈಗಾಗಲೇ ಯೂಟ್ಯೂಬ್ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

  ಇದನ್ನೂ ಓದಿ: Kalaburagi: ಮರವೇ ದವಾಖಾನೆ! ಕಲಬುರಗಿಯಲ್ಲೊಂದು ಸಂಜೀವಿನಿ ಮರ!

  ನೂರಾರು ಥಿಯೇಟರ್​ಗಳಲ್ಲಿ ರಿಲೀಸ್
  ದಸರಾ ವೇಳೆಗೆ ನೂರಕ್ಕೂ ಅಧಿಕ ಚಿತ್ರಮಂದಿರದಲ್ಲಿ ಪ್ರದರ್ಶಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಒಂದು ವೇಳೆ ಸಿನೆಮಾ ಗೆದ್ದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇನ್ನಷ್ಟು ಸಿನೆಮಾಗಳು ಹೊರಬರಲು ಈ ಸಿನೆಮಾ ವೇದಿಕೆಯಾದೀತು ಅನ್ನೋದು ಮರೆಯುವಂತಿಲ್ಲ.

  ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ
  Published by:guruganesh bhat
  First published: