ಕಲಬುರಗಿ ಜಿಲ್ಲೆಯ ಚಿಂಚೋಳಿಯ ನಾಗರಾಳ ಜಲಾಶಯದಲ್ಲಿ ಅಪರೂಪದ ಮೀನು ಕಾಣಿಸಿಕೊಂಡಿದೆ. ಮೀನು ಹಿಡಿಯಲು (Kalaburagi Rare Fish) ಬಲೆ ಹಾಕಿದ್ದಾಗ ಮೀನುಗಾರರ ಬಲೆಗೆ ಮೀನು ಬಿದ್ದಿದ್ದು, ಇದು ನ್ಯೂಜಿಲೆಂಡ್ (New Zealand) ಮೂಲದ ಮೀನು ಎಂದು ಹೇಳಲಾಗುತ್ತಿದೆ. ಜಲಾಶಯದಲ್ಲಿ ಮೀನು ಹಿಡಿಯಲು ಹೋದಾಗ ಮೀನುಗಾರ ಈಶ್ವರ ಎಂಬ ಮೀನುಗಾರರ ಬಲೆಗೆ (rare Fish Found In Kalaburagi) ನ್ಯೂಜಿಲೆಂಡ್ ಮೂಲದ್ದು ಎನ್ನಲಾಗಿದೆ.
ಈ ಅಪರೂಪದ ಹಳದಿ ಬಣ್ಣದ 6 ಅಡಿ ಉದ್ದ, 13ಕೆಜಿ ತೂಕದ ಬೃಹತ್ ಮೀನು ಬಲೆಗೆ ಸಿಲುಕಿಕೊಂಡಿದೆ. ಇನ್ನು ಈ ಅಪರೂಪದ ವಿಚಿತ್ರ ಮೀನು ನೋಡಲು ಸ್ಥಳೀಯರು ಮೀನುಗಾರ ಈಶ್ವರ ಮನೆಗೆ ಧಾವಿಸುತ್ತಿದ್ದಾರೆ.
ಇದನ್ನೂ ಓದಿ: Positive Story: ಸರ್ಕಾರಿ ಶಾಲೆ ಕಟ್ಟಲು 21 ದಿನಗಳಲ್ಲಿ 60 ಲಕ್ಷ ಸಂಗ್ರಹಿಸಿದ ಸ್ವಾಮೀಜಿ
ಸಂಶೋಧನೆಗೆ ಸೂಚನೆ
ಇದೆ ಮೊದಲ ಬಾರಿಗೆ ರಾಜ್ಯದಲ್ಲಿ ಈ ರೀತಿಯ ಅಪರೂಪದ ಮೀನು ಕಾಣಿಸಿಕೊಂಡಿದೆ. ಇದು ಸೇವನೆಗೆ ಯೋಗ್ಯವೇ? ಯಾವ ಜಾತಿಯ ಮೀನು? ಇದರ ಹಿನ್ನಲೆ ಏನು? ಎಂಬುದರ ಕುರಿತು ಸಾಕಷ್ಟು ಅನುಮಾನಗಳಿವೆ.
ಈಲ್ ಮೀನು ಎಂಬ ಅಂದಾಜು
ಮೇಲ್ನೋಟಕ್ಕೆ ಕಲಬುರಗಿಯಲ್ಲಿ ಸಿಕ್ಕಿದ ಅಪರೂಪದ ಮೀನು ಈಲ್ ಮೀನು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Success Story: ಕಾಲಿಲ್ಲದಿದ್ರೂ ಕೃಷಿ ಮಾಡ್ತಾರೆ! ಸಮಸ್ಯೆಗಳಿಗೆ ಸವಾಲ್ ಹಾಕಿರೋ ಸ್ವಾಭಿಮಾನಿ
ಸ್ಪಷ್ಟತೆಗಾಗಿ ಮೀನನ್ನು ಸಂಶೋಧನೆ ಒಳಪಡಿಸಲು ಇಲಾಖೆ ಮುಂದಾಗಿದೆ. ಸಂಶೋಧನೆ ನಂತರವೆ ಮೀನನ್ನು ಮಾರಾಟ ಮಾಡುವಂತೆ ಅಭಿಪ್ರಾಯ ಕೇಳಿಬಂದಿದೆ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ