ಕಲಬುರಗಿ: ಕಲ್ಯಾಣ ಕರ್ನಾಟಕದ (Kalyana Karnataka) ಪ್ರಯಾಣಿಕರಿಗೆ ಸಿಹಿಸುದ್ದಿ. ಕಲಬುರಗಿ ಟೂ ಬೀದರ್ (Kalburgi To Bidar) ಇದೀಗ ಇನ್ನು ರೈಲು ಓಡಲಿದೆ. ಕಲಬುರಗಿ-ಬೀದರ್ ಮಧ್ಯೆ ಮತ್ತೊಂದು ರೈಲಿಗೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಈ ಕುರಿತು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು ಕಲಬುರಗಿಯ ಸಂಸದ ಡಾ. ಉಮೇಶ ಜಾಧವ್ ಅವರಿಗೆ ಪತ್ರ ಬರೆಯುವ ಮೂಲಕ ರೈಲು (Train) ಬಿಡುವಂತೆ ಅನುಮೋದನೆ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಹೊಸ ರೈಲು ಓಡಾಟದಿಂದ ಪ್ರಯಾಣಿಕರ ಸಂಚಾರ ಬವಣೆ ತಪ್ಪಲಿದೆ.
ನಾಲ್ಕು ಬಾರಿ ಸಂಚಾರ
ಸದ್ಯ ಕಲಬುರಗಿ ಟೂ ಬೀದರ್ ಕೇವಲ ಒಂದು ಡೆಮೊ ರೈಲು ಮಾತ್ರ ಇದ್ದು, ನಿತ್ಯ ಎರಡು ಬಾರಿ ಸಂಚರಿಸುತ್ತದೆ. ಹೊಸದಾಗಿ ಆರಂಭವಾಗುವ ಡೆಮೊ ರೈಲು ದಿನಕ್ಕೆ ನಾಲ್ಕು ಬಾರಿ ಸಂಚರಿಸಲಿದೆ.
ಹೀಗಿರಲಿವೆ ಓಡಾಟ
ನೂತನ ರೈಲಿನ ಸಂಚಾರವು ನಿತ್ಯ ಬೆಳಗ್ಗೆ 7.30ಕ್ಕೆ ಕಲಬುರಗಿಯಿಂದ ಹೊರಟು ಬೆಳಗ್ಗೆ 10.15ಕ್ಕೆ ಬೀದರ್ ತಲುಪುತ್ತದೆ. 10.30ಕ್ಕೆ ಬೀದರ್‌ನಿಂದ ಹೊರಟು ಮಧ್ಯಾಹ್ನ 1.20ಕ್ಕೆ ಕಲಬುರಗಿಗೆ ವಾಪಾಸ್ ಆಗುತ್ತದೆ. 1.30ಕ್ಕೆ ಮತ್ತೆ ಕಲಬುರಗಿಯಿಂದ ಹೊರಟು ಸಂಜೆ 4.45ಕ್ಕೆ ಬೀದರ್ ತಲುಪಲಿದೆ. 5ಕ್ಕೆ ಬೀದರ್‌ನಿಂದ ಹೊರಟು ಸಂಜೆ 7.40ಕ್ಕೆ ಕಲಬುರಗಿಗೆ ಮರಳಲಿದೆ.
ಎಕ್ಸ್ ಪ್ರೆಸ್ ರೈಲಿಗೂ ಗ್ರೀನ್ ಸಿಗ್ನಲ್
ಕಲಬುರಗಿ, ಶಹಾಬಾದ್, ವಾಡಿ ಹಾಗೂ ನಾಲವಾರ ರೈಲು ನಿಲ್ದಾಣಗಳಲ್ಲಿ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ ಎಂಬುವುದು ತಿಳಿದುಬಂದಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ, ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪದವಿ ಕೋರ್ಸ್ಗಳಿಗೆ ಅರ್ಜಿ ಆಹ್ವಾನ
ಶಹಾಬಾದ್‌ನಲ್ಲಿ ಮುಂಬೈ-ನಾಗರಕೋಯಿಲ್ ಎಕ್ಸ್‌ಪ್ರೆಸ್, ಮುಂಬೈ-ತಿರುವನಂತಪುರ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆಗೆ ಒಪ್ಪಿಗೆ ನೀಡಲಾಗಿದೆ. ಕಲಬುರಗಿ ರೈಲು ನಿಲ್ದಾಣದಲ್ಲಿ ಅಹ್ಮದಾಬಾದ್-ಚೆನ್ನೈ, ಎಕ್ಸ್‌ಪ್ರೆಸ್, ಕೇವಾಡಿಯಾ-ಚೆನ್ನೈ ಎಕ್ಸ್‌ಪ್ರೆಸ್, ವಾಡಿ ನಿಲ್ದಾಣದಲ್ಲಿ ಮುಂಬೈ ಎಲ್‌ಟಿಟಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್ ಹಾಗೂ ನಾಲವಾರದಲ್ಲಿ ಯಶವಂತಪುರ-ಲಾಥೂರ್ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆಗೆ ಒಪ್ಪಿಗೆ ಸಿಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ