Kalaburagi: ಕಲಬುರಗಿಯ ಸಿದ್ಧಲಿಂಗೇಶ್ವರ ಸಂಸ್ಥಾನ ಮಠಕ್ಕೆ ಹೊಸ ಪೀಠಾಧಿಪತಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹೊನಗುಂಟಾ ಹಾಗೂ ಗೊಳಾ ಗ್ರಾಮದ ಭಕ್ತರು 28 ಲಕ್ಷ ರೂ. ಮೌಲ್ಯದ ಹೊಸ ಕಾರನ್ನು ನೂತನ ಸ್ವಾಮೀಜಿಗೆ ದೇಣಿಗೆಯಾಗಿ ನೀಡಿದರೆ, ರಾವೂರಿನ ತೋಟದ್ ಕುಟುಂಬ 30 ಗ್ರಾಂ. ಚಿನ್ನದ ಕೊರಳ ಲಿಂಗವನ್ನು ಸ್ತಾಮೀಜಿಗೆ ಅರ್ಪಿಸಿ ಭಕ್ತಿ ಮೆರೆದರು.

  • News18 Kannada
  • 5-MIN READ
  • Last Updated :
  • Gulbarga, India
  • Share this:

    ಕಲಬುರಗಿ: ಊರಿಡೀ ಜಾತ್ರೆಯಂತಹ ಸಂಭ್ರಮ. ಅರಿಶಿನ ಬಣ್ಣ ಮೆತ್ತಿಕೊಂಡು ಆಸೀನರಾಗಿರುವ ವ್ಯಕ್ತಿಯೇ ಇಲ್ಲಿ ಪ್ರಧಾನ. ಸುತ್ತಲೂ ಇರುವ ಸ್ವಾಮೀಜಿಗಳಿಂದ (Swamiji) ಕ್ಷೀರಾಭಿಷೇಕ ನಡೆಸಿ ಅದ್ಧೂರಿಯ ಸ್ವಾಗತ. ಸುತ್ತಲೂ ಸುತ್ತುವರಿದಿರುವ ಭಕ್ತರ ಹರ್ಷೋದ್ಘಾರ. ಹಾಗಿದ್ರೆ ಏನಿದು ವಿಶೇಷ? ಅಂತೀರಾ? ಹೇಳ್ತೀವಿ ನೋಡಿ. ಇಂತಹ ಸಂಭ್ರಮ ಕಂಡು ಬಂದಿದ್ದು ಕಲಬುರಗಿಯ (Kalaburagi News) ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದಲ್ಲಿ.


    ಕಳೆದ ಮೂರು ವರ್ಷಗಳಿಂದ ಪೀಠಾಧ್ಯಕ್ಷರು ಇಲ್ಲದೇ ಅನಾಥವಾಗಿದ್ದ ಕಲಬುರಗಿಯ ಸುಪ್ರಸಿದ್ಧ ಕ್ಷೇತ್ರಕ್ಕೆ ನೂತನ ಪೀಠಾಧಿಪತಿಯ ನೇಮಕ ಮಾಡಲಾಗಿದೆ. ಇದರಿಂದ ಇಡೀ ಊರಿನಲ್ಲಿ ಹಬ್ಬದ ವಾತಾವರಣ ಮೂಡಿದೆ.




    ಅದ್ದೂರಿ ಮೆರವಣಿಗೆ, ವಿದ್ಯಾರ್ಥಿಗಳ ಪಥ ಸಂಚಲನ
    ಮಠದ ಸಾವಿರಾರು ಭಕ್ತರ ಸಮ್ಮುಖದಲ್ಲಿ 13ನೇ ಪೀಠಾಧಿಪತಿಯಾಗಿ ಶ್ರೀಸಿದ್ಧಲಿಂಗ ದೇವರ ನಿರಂಜನ ಅವರ ಪಟ್ಟಾಧಿಕಾರ ನಡೆಯಿತು. ಪಟ್ಟಾಧಿಕಾರ ಮುನ್ನ ಷಟಸ್ಥಲ ಬ್ರಹ್ಮೋಪದೇಶ ಹಾಗೂ ಚಿನ್ಮಯಾನುಗ್ರಹ, ಶೂನ್ಯ ಸಿಂಹಾಸನಾರೋಹಣ, ಜಂಗಮ ಉತ್ಸವವಂತೂ ಭಾರೀ ಅದ್ಧೂರಿಯಾಗಿ ನಡೆಯಿತು. ನೂರಾರು ಜನ ಮುತ್ತೈದೆಯರು ಕುಂಬ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಪಟ್ಟಾಧಿಕಾರ ಸಮಾರಂಭಕ್ಕೆ ಮೂರು ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಸಮಾರಂಭದಲ್ಲಿ ವಿದ್ಯಾರ್ಥಿಗಳ ಪಥಸಂಚಲನ ಗಮನ ಸೆಳೆಯಿತು.


    ಹಲವು ಸ್ವಾಮೀಜಿಗಳ ಉಪಸ್ಥಿತಿ
    ಗದಗ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಅವರು ಶ್ರೀಸಿದ್ಧಲಿಂಗ ದೇವರ ಪಟ್ಟಾಧಿಕಾರದ ಧಾರ್ಮಿಕ ಆಚರಣೆಗಳನ್ನು ಪೂರೈಸಿದರು. ಶ್ರೀಬಸವಲಿಂಗ ಪಟ್ಟದೇವರು ಭಾಲ್ಕಿ, ಶ್ರೀಚಿಕ್ಕಗುರುನಂಜೇಶ್ವರ ಮಹಾಸ್ವಾಮೀಜಿ ಭರತನೂರ, ಶ್ರೀಚನ್ನವೀರ ಶಿವಾಚಾರ್ಯ ಹಾರಕೂಡ, ಡಾ.ಶಿವಾನಂದ ಮಹಾಸ್ವಾಮೀಜಿ ಸೊನ್ನ ಸೇರಿದಂತೆ ನಾಡಿನ ವಿವಿಧ ಮಠಗಳ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.




    ಇದನ್ನೂ ಓದಿ: Kalaburagi: ಊರು ಕಾಯುವ ಆಂಜನೇಯನಿಗೆ ಇಲ್ಲಿ ವೃದ್ಧರೊಬ್ಬರೇ ಆಸರೆ!


    ಹೊಸ ಕಾರು, 30 ಗ್ರಾಂ. ಚಿನ್ನದ ಕೊರಳ ಲಿಂಗ ಅರ್ಪಣೆ!
    ರಾವೂರ ಮಠದ ನೂತನ ಪೀಠಾಧಿಪತಿ ಶ್ರೀಸಿದ್ಧಲಿಂಗ ಮಹಾಸ್ವಾಮೀಜಿ ಅವರಿಗೆ ವಿವಿಧೆಡೆಯಿಂದ ಭಕ್ತಿಯ ಕಾಣಿಕೆ ಹರಿದು ಬಂತು. ಶ್ರೀಮಠಕ್ಕೆ ಬಣ್ಣ ಹಚ್ಚುವ ಸಂಪೂರ್ಣ ಜವಾಬ್ದಾರಿ ಮತ್ತು ಬೃಹತ್ ವೇದಿಕೆ ನಿರ್ಮಿಸುವ ಹೊಣೆ ಭಕ್ತರೇ ನಿರ್ವಹಿಸಿದರು. ಹೊನಗುಂಟಾ ಹಾಗೂ ಗೊಳಾ ಗ್ರಾಮದ ಭಕ್ತರು 28 ಲಕ್ಷ ರೂ. ಮೌಲ್ಯದ ಹೊಸ ಕಾರನ್ನು ನೂತನ ಸ್ವಾಮೀಜಿಗೆ ದೇಣಿಗೆಯಾಗಿ ನೀಡಿದರೆ, ರಾವೂರಿನ ತೋಟದ್ ಕುಟುಂಬ 30 ಗ್ರಾಂ. ಚಿನ್ನದ ಕೊರಳ ಲಿಂಗವನ್ನು ಸ್ತಾಮೀಜಿಗೆ ಅರ್ಪಿಸಿ ಭಕ್ತಿ ಮೆರೆದರು.


    ಇದನ್ನೂ ಓದಿ: Kalaburagi: ವೀರಭದ್ರೇಶ್ವರ ಜಾತ್ರೆ ಸಂಭ್ರಮದಲ್ಲಿ ರೋಮಾಂಚಕ ಕೆಂಡ ಸೇವೆ




    ಒಟ್ಟಿನಲ್ಲಿ ರಾವೂರಿನ ಮಠದಲ್ಲಿ ಮೂರು ವರ್ಷಗಳ ಬಳಿಕ ಸಂಭ್ರಮದ ವಾತಾವರಣ ಕಂಡು ಬಂತು. ಮಠದ ಭಕ್ತರಂತೂ ನೂತನ ಪೀಠಾಧಿಪತಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದರು.


    ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು