Temples In Kalaburagi: ರಾಷ್ಟ್ರಕೂಟರ ಆರಾಧ್ಯ ದೇವಿಗೆ ಕಮಾನುಗಳ ದೇವಾಲಯ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಪವಾಡಕ್ಕೆ ಹೆಸರುವಾಸಿಯಾಗಿರುವ ರಾಷ್ಟ್ರಕೂಟರ ಆರಾಧ್ಯ ದೇವಿಯಾಗಿರುವ ನಾಗಾವಿ ಯಲ್ಲಮ್ಮ ಇಂದಿಗೂ ಭಾರೀ ಪ್ರಸಿದ್ಧಿ ಪಡೆದಿದೆ.

  • News18 Kannada
  • 2-MIN READ
  • Last Updated :
  • Gulbarga, India
  • Share this:

ಕಲಬುರಗಿ: ಕಪ್ಪು ವರ್ಣದ ಮೂರ್ತಿ, ಅದ್ರ ಮುಂದೆ ಎರಡು ಜೋಡಿ ಪಾದುಕೆ. ಎಡ, ಬಲದಲ್ಲಿ ಹಸ್ತದ ಪ್ರತಿರೂಪ. ಇದುವೇ ರಾಷ್ಟ್ರಕೂಟರ (Rashtrakuta) ಶಕ್ತಿದೇವತೆ ನಾಗಾವಿ ಯಲ್ಲಮ್ಮ ದೇವಿಯ (Nagavi Yellamma devi) ದೃಶ್ಯರೂಪ. ಅಷ್ಟಕ್ಕೂ ಎಲ್ಲಿದೆ ಗೊತ್ತಾ ಈ ಶಕ್ತಿದೇವತೆಯ ದೇಗುಲ ಅನ್ನೋದಕ್ಕೆ ಈ ಸ್ಟೋರಿ ನೋಡಿ!


ಯೆಸ್‌, ಕಲಬುರಗಿ ಚಿತ್ತಾಪುರ ಪ್ರದೇಶವನ್ನು ಆಳಿದ ರಾಷ್ಟ್ರಕೂಟರು ಇಲ್ಲಿನ ಪ್ರಸಿದ್ಧ ನಾಗಾವಿ ದೇವಿಯನ್ನು ತಮ್ಮ ಕುಲದೇವತೆ ಎಂದು ಪೂಜಿಸುತ್ತಿದ್ದರು. ಅಂದಿನಿಂದ ಇಲ್ಲಿಯವರೆಗೂ ನಾಗಾವಿ ಯಲ್ಲಮ್ಮ ‌ಭಕ್ತರ ಇಷ್ಟಾರ್ಥಗಳನ್ನ ಈಡೇರಿಸುತ್ತಾ ಬಂದಿದ್ದು, ಈ ದೇವಸ್ಥಾನವು ಇಂದಿಗೂ ಐತಿಹಾಸಿಕವಾಗಿ ಪ್ರಸಿದ್ದಿಯನ್ನು ಪಡೆದಿದೆ.


ಕಮಾನುಗಳಿಂದ ನಿರ್ಮಾಣ
ಎಲ್ಲ ದೇವಾಲಯಗಳಂತೆ ನಾಗಾವಿ ದೇವಸ್ಥಾನವು ಗೋಪುರದಿಂದ ನಿರ್ಮಾಣವಾದಂತಹ ದೇವಸ್ಥಾನವಲ್ಲ. ಈ ದೇವಸ್ಥಾನವನ್ನು ಕಮಾನುಗಳಿಂದ ನಿರ್ಮಾಣ ‌ಮಾಡಲಾಗಿದೆ. ಪ್ರತಿ ಅಮವಾಸ್ಯೆ, ಹುಣ್ಣಿಮೆ ಹಾಗೂ ಪ್ರತಿ ಮಂಗಳವಾರದಂದು ದೇವಿಯ ಸನ್ನಿಧಾನಕ್ಕೆ ಭಕ್ತರ ಸಮೂಹ ಹರಿದು ಬರುತ್ತದೆ.




ದೇವಿಗೆ ಸಂಭ್ರಮದ ಜಾತ್ರೆ
ಇನ್ನು ಸೀಗೆ ಹುಣ್ಣಿಮೆಯಂದು ಪ್ರತಿ ವರ್ಷ ಅದ್ದೂರಿಯಾಗಿ ಜಾತ್ರೆ ನೆರವೇರಿಸಲಾಗುತ್ತೆ.‌ ದೇವಿಯ ಜಾತ್ರೆಗೆ ರಾಜ್ಯ ಮಾತ್ರವಲ್ಲದೆ ಪಕ್ಕದ ತೆಲಂಗಾಣ, ಮಹಾರಾಷ್ಟ್ರ, ಆಂದ್ರಪ್ರದೇಶದಿಂದ ಸಾಗರೋಪಾದಿಯಲ್ಲಿ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಜೊತೆಗೆ ನವರಾತ್ರಿಯಲ್ಲೂ ಈ ದೇಗುಲ ವಿಶೇಷ ಪೂಜೆಗೆ ಸಾಕ್ಷಿಯಾಗುತ್ತೆ.


ಇದನ್ನೂ ಓದಿ: Kalaburagi Ganapati Temple: ಬಣ್ಣ ಬದಲಿಸ್ತಾನೆ ಈ ಗಣಪ, ಇವತ್ತಿದ್ದ ಕಲರ್ ನಾಳೆ ಇರಲ್ಲ!




ಪಾದುಕೆಗೆ ಪೂಜೆ
ಚಿತ್ತಾಪುರದ ನಾಗಾವಿ ಯಲ್ಲಮ್ಮ ದೇವಿಯನ್ನು ಯಲ್ಲಾಂಬಿಕೆ‌ ಅಂತಲೂ ಕರೆಯಲಾಗುತ್ತೆ. ‌ಈ ದೇವಿಯ ಮೂತಿಯೂ ಕಪ್ಪು ವರ್ಣದಿಂದ ಕೂಡಿದ್ದು, ವಿಗ್ರಹದ ಎದುರು ಪಾದುಕೆಗಳಿದ್ದು, ಭಕ್ತರು ಪಾದುಕೆಗಳಿಗೆ ವಿಶೇಷ ಪೂಜೆ ‌ಸಲ್ಲಿಸುತ್ತಾರೆ. ಇನ್ನು ಗರ್ಭಗುಡಿಯ ಎಡ ಹಾಗೂ ಬಲಭಾಗದಲ್ಲಿ ಪುಷ್ಕರಣಿಗಳಿದ್ದು, ಈ ಪುಷ್ಕರಣಿಯಲ್ಲಿರುವ ನೀರು ಬೇಸಿಗೆಯಲ್ಲೂ ಬತ್ತದಿರುವುದು ಇಲ್ಲಿನ ಇನ್ನೊಂದು ವಿಶೇಷತೆ.


ಇದನ್ನೂ ಓದಿ: Kalaburagi: ಕುಸ್ತಿ ಕಾಳಗದಲ್ಲಿ ಗೆದ್ದವರಿಗೆ ಚಿನ್ನದ ಉಂಗುರ!


ಪ್ರವಾಸಿ ತಾಣ
ಒಟ್ಟಿನಲ್ಲಿ ರಾಷ್ಟಕೂಟರ ಕುಲ ದೇವತೆ ನಾಗಾವಿ ಯಲ್ಲಮ ದೇವಸ್ಥಾನವು ಪವಾಡಗಳಿಂದ ಪ್ರಖ್ಯಾತಿ ಪಡೆದಿದೆ. ಜೊತೆಗೆ ಇದೊಂದು ಪ್ರವಾಸಿ ತಾಣವೂ ಆಗಿದ್ದು ಹೊರ ರಾಜ್ಯ, ಹೊರ ದೇಶದಿಂದಲ್ಲೂ ಪ್ರವಾಸಿಗರು ಆಗಮಿಸಿ ದೇವಿಯ ದರ್ಶನವನ್ನು ಪಡೆಯುತ್ತಲೇ ಇರುತ್ತಾರೆ.


ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ

top videos
    First published: