Qawwali Family: ಮನೆಯವರೆಲ್ರೂ ಕಲಾವಿದರು, ಕವಾಲಿ ಲೋಕದಲ್ಲಿ ತೇಲಾಡಿಸುವ ಕುಟುಂಬವಿದು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಒಬ್ರು ಹಾಡ್ತಿದ್ರೆ, ಇನ್ನೊಬ್ರು ತಬಲಾ ನುಡಿಸ್ತಾರೆ, ಮತ್ತೊಬ್ರು ಡೊಲಕ್ ಬಾರಿಸ್ತಾರೆ, ಉಳಿದವರು ಕೈ ಚಪ್ಪಾಳೆಯೊಂದಿಗೆ ಕೊರಸ್ ಕೊಡ್ತಾರೆ. ಹೀಗೆ ಈ ಫ್ಯಾಮಿಲಿ ಹಾಡಲು ಶುರುವಾಯಿತೆಂದರೆ ತಲೆದೂಗದವರೇ ಇಲ್ಲ.

  • Share this:

ಕಲಬುರಗಿ: ಹಾರ್ಮೋನಿಯಂ ನುಡಿಸುತ್ತಾ ಮನೆಯಲ್ಲೇ ಸಂಗೀತ ಕಛೇರಿ. ಮಕ್ಕಳಿಂದ ಹಿಡಿದು ಹಿರಿಯರ ತನಕ ಮೊಳಗಿಸುವರು ಸಂಗೀತ ಸುಧೆ. ಈ ಮನೆತನದ (Kalaburagi Qawwali Family)ಕವ್ವಾಲಿ ಹಾಡಿಗೆ ತಲೆದೂಗದವರೇ ಇಲ್ಲ. ಹಾಡಿನ ಮೂಲಕ ಜನರನ್ನ ಫಿದಾ ಮಾಡೋ ಕವಾಲಿ (Qawwali) ಹಾಡುಗಾರರ ಈ ಕುಟುಂಬ ಇರೋದಾದ್ರೂ ಎಲ್ಲಿ ಅಂತೀರ? ಈ ಸ್ಟೋರಿ ನೋಡಿ.!


ಯೆಸ್, ಕವ್ವಾಲಿ ಅಂದ್ರೆ ನೆನಪಾಗೋದು ಪಾಕಿಸ್ತಾನ, ಉತ್ತರ ಭಾರತದ ಉರ್ದು ಗಾಯಕರು. ಇಂದಿಗೂ ತನ್ನದೇ ಆದ ವೈಶಿಷ್ಟ್ಯತೆ ಹೊಂದಿರೋ ಕವ್ವಾಲಿ ಹಾಡಿಗೆ ತಲೆದೂಗದವರಿಲ್ಲ. ಅಂತಹದ್ದೇ ಕವ್ವಾಲಿ ಕುಟುಂಬವೊಂದು ಕಲಬುರಗಿಯಲ್ಲಿದೆ.




ಇಲ್ಲಿನ ಸರಫ್ ಬಜಾರ್ ನಲ್ಲಿರೋ ಈ ಕುಟುಂಬ ಶಾಲೆ ಮುಖ ನೋಡ್ದೇ ಹೋದ್ರೂ, ಅದೆಷ್ಟು ನೀಟಾಗಿ ಹಾರ್ಮೋನಿಯಂ ನುಡಿಸ್ತಾ ಅದೆಂತಹದ್ದೇ ಹಾಡನ್ನು ಹಾಡುತ್ತೆ. ಕುಟುಂಬದ ಹಿರಿತಲೆಗಳಿಂದ ಹಿಡಿದು ಕಿರಿತಲೆವರೆಗೂ ಕವ್ವಾಲಿ ಸಾಲಿನಲ್ಲಿ ಕೂತು ಹಾಡು ಗುನುಗಿಸಬಲ್ಲರು. ಹೀಗೆ ಇಡೀ ಮನೆಯೇ ಕವ್ವಾಲಿ ಕುಟುಂಬವಾಗಿರುವುದು ವಿಶೇಷ.




ತಂದೆಯ ಹಾದಿಯಲ್ಲಿ ಮಕ್ಕಳು
ಇವರೆಲ್ಲರಿಗೂ ಸದ್ಯ ಸೀನಿಯರ್ ಈ ರುಕ್ಮೋದ್ದೀನ್. ಇವ್ರು ಹಾಡ್ತಿದ್ರೆ, ಇನ್ನೊಬ್ರು ತಬಲಾ ನುಡಿಸ್ತಾರೆ, ಮತ್ತೊಬ್ರು ಡೊಲಕ್ ಬಾರಿಸ್ತಾರೆ, ಉಳಿದವರು ಕೈ ಚಪ್ಪಾಳೆಯೊಂದಿಗೆ ಕೊರಸ್ ಕೊಡ್ತಾರೆ. ಹೀಗೆ ಈ ಫ್ಯಾಮಿಲಿ ಹಾಡಲು ಶುರುವಾಯಿತೆಂದರೆ ತಲೆದೂಗದವರೇ ಇಲ್ಲ. ತಮ್ಮ ತಂದೆ ಉಮರ್ ನಿಯಾಜ್ ಅವರಿಂದ ಸಂಗೀತ ಬಳುವಳಿಯಾಗಿ ಪಡೆದಿರುವ ರುಕ್ಮೋದ್ದೀನ್, ಕಳೆದ 60 ವರ್ಷಗಳಿಂದ ಕವ್ವಾಲಿ ಹಾಡಿನ ಸಂಗೀತ ಕಛೇರಿಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ಇವರ ಮಕ್ಕಳಿಗೂ ಸಂಗೀತ ಶಾರದೆ ಒಲಿದಿದ್ದು, ಅವರು ಕೂಡಾ ತಂದೆ ಹಾದಿಯಲ್ಲೇ ಮುಂದುವರೆದಿದ್ದಾರೆ.




ಸಂಗೀತ ವಾದ್ಯಗಳ ಅಂಗಡಿ
ಇನ್ನು ಸ್ವಂತ ಸಂಗೀತ ವಾದ್ಯಗಳ ಅಂಗಡಿ ಹೊಂದಿರುವ ಇವರು, ವಾದ್ಯಗಳ ರಿಪೇರಿಯನ್ನು ಮಾಡಬಲ್ಲರು. ತಬಲಾ, ಡಗ್ಗ, ಡೋಲಕ್, ದಪಡಿ, ಹಲಗಿ, ಮೃದಂಗ, ಡೊಳ್ಳು, ನಗಾರಿ ಸೇರಿದಂತೆ ಸಂಗೀತದ ಪ್ರತಿಯೊಂದು ವಾದ್ಯಗಳು ಇವರ ಅಂಗಡಿಯಲ್ಲಿ ಸಿಗುತ್ತವೆ. ಕಲಬುರಗಿಯ ಬೇರೆಲ್ಲೂ ಸಿಗದ ಸಂಗೀತ ವಾದ್ಯಗಳು ಇಲ್ಲಿವೆ.




ಇದನ್ನೂ ಓದಿ: Kalaburagi: ಪಕ್ಷಿಗಳ ದಾಹ ಇಂಗಿಸಲು ಕಲಬುರಗಿ ಯುವಕರ ಹೊಸ ಉಪಾಯ!


ಹೀಗಿದೆ ಫ್ಯಾಮಿಲಿ ಟೀಂ!
ಅರ್ಹವಾಗಿಯೇ ರುಕ್ಮೋದ್ದೀನ್ ಅವರಿಗೆ ಗಾನಕೋಗಿಲೆ ಗಂಗೂಬಾಯಿ ಹಾನಗಲ್, ಪುಟ್ಟರಾಜ್ ಗವಾಯಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿವೆ. ಇನ್ನು ಇವರ ನಾಲ್ಕು ಮಕ್ಕಳಲ್ಲಿ ಹಿರಿಯ ಮಗ ತನ್ವೀರ್ ನಿಯಾಜ್ ಖವಾಲಿ ಹಾಡು ಹಾಡಿದ್ರೆ, ಮಹ್ಮದ್ ಯಾಸೀನ್, ಮಹ್ಮದ್ ಹಬೀದ್ ಡೋಲಕ್ ಬಾರಿಸುತ್ತಾರೆ. ನಾಲ್ಕನೇ ಮಗ ಉಮರ್ ಖುಸ್ರೋ ಹಾರ್ಮೋನಿಯಂ ಎಕ್ಸಪರ್ಟ್.




ಇದನ್ನೂ ಓದಿ: Cooker Dhaba: ಈ ಡಾಬಾದಲ್ಲಿ ಎಲ್ಲಾ ಕುಕ್ಕರ್​ನಲ್ಲೇ ರೆಡಿಯಾಗುತ್ತೆ! 10 ನಿಮಿಷ ಕಾದರೆ ಸಾಕು ಊಟ ರೆಡಿ!


ಮಹಿಳೆಯರೂ ಹಾಡುತ್ತಾರೆ
ಇನ್ನು ಇವರು ರಾಜ್ಯದ ಯಾವುದೇ ಭಾಗಕ್ಕೆ ಹೋದ್ರೂ ಇಡೀ ಕುಟುಂಬ ಸಮೇತರಾಗಿ ಹೋಗಿ ಸಂಗೀತ ಕಛೇರಿಗಳನ್ನು ನಡೆಸಿಕೊಡುತ್ತಾರೆ. ಅಲ್ಲದೇ ಈ ಮನೆಯಲ್ಲಿ ಮಹಿಳೆಯರೂ ಕೂಡ ಸಂಗೀತಗಾರರಾಗಿದ್ದಾರೆ. ರುಕ್ಮೋದ್ದೀನ್ ಅವರ ಕುಟುಂಬ ರಾಜ್ಯವಲ್ಲದೇ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಖವಾಲಿ ಹಾಡಿ ಸೈ ಎನಿಸಿಕೊಂಡಿದೆ. ಒಟ್ಟಿನಲ್ಲಿ ರುಕ್ಮೋದ್ದೀನ್ ಕವ್ವಾಲಿ ಕಂಪಿಗೆ ಕಲಬುರಗಿ ಅಷ್ಟೇ ಅಲ್ದೇ ಇಡೀ ರಾಜ್ಯವೇ ತಲೆದೂಗುತ್ತೆ.


ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ

top videos
    First published: