Kalaburagi Rotti Mahadevi: ರೊಟ್ಟಿ ಮಾಡೋ ಮಹಾತಾಯಿ ಕಲಬುರಗಿಯ ಮಹಾದೇವಿ! ಇವರ ಸಕ್ಸಸ್ ಕಥೆ ಕೇಳಿ

ಈಸಬೇಕು ಇದ್ದು ಜಯಿಸಬೇಕು ಅನ್ನೋ ಮಾತಿದೆ. ಹಾಗೆಯೇ ಜೀವನದಲ್ಲೂ ಕಷ್ಟ ಬಂದಾಗ ಅದನ್ನ ಎದುರಿಸಿ ಗೆಲ್ಲುವ ಆತುರತೆ ಬೇಕು. ಆಗಲೇ ನೋಡಿ ಇತಿಹಾಸದಲ್ಲಿ ಬರೆದಿಡಬಹುದಾದ ವ್ಯಕ್ತಿತ್ವ ನಮ್ಮದಾಗುತ್ತದೆ. ಅಂತಹದ್ದೇ ಕಷ್ಟ ಕೋಟಲೆಯ ವಿರುದ್ಧ ಜಯಿಸಿ ಬದುಕು ಕಟ್ಟಿಕೊಂಡ ಮಹಿಳೆಯ ಕಥೆಯಿದು.

ರೊಟ್ಟಿ ಮಹಾದೇವಮ್ಮನ ಪರಿಚಯ ಮಾಡಿಕೊಳ್ಳಿ

"ರೊಟ್ಟಿ ಮಹಾದೇವಮ್ಮನ ಪರಿಚಯ ಮಾಡಿಕೊಳ್ಳಿ"

  • Share this:
    ಕಲಬುರಗಿ: ಅವಳು ಕಷ್ಟಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಆದ್ರೆ, ಆಕೆಗೆ ದೈರ್ಯ ತುಂಬಿದ್ದು ಒರ್ವ ಸ್ವಾಮಿಜೀ. ಒಂದು ರೂಪಾಯಿಗೊಂದು ರೊಟ್ಟಿ ಮಾರಿ ಬದುಕು (Life Success Story) ಅಂತ ಹೇಳಿದ್ರು. ಅದನ್ನೇ ದೈರ್ಯವಾಗಿ ತೆಗೆದುಕೊಂಡ ಮಹಿಳೆ ಈಗ ಎರಡು ನೂರು ಜನರಿಗೆ ಕೆಲಸ ನೀಡಿದ್ದಾಳೆ. ದಿನಕ್ಕೆ ಸಾವಿರಾರು ರೊಟ್ಟಿ ತಯಾರಿಸಿ ಹಂಚುವ ಮೂಲಕ ಆಕೆ ಅನ್ನದಾತೆ ಆಗಿದ್ದಾಳೆ.ಕಷ್ಟ, ಹಸಿವು ಮನುಷ್ಯನಿಗೆ ಪಾಠ ಕಲಿಸಿಕೊಡುತ್ತವೆ. ಜತೆಗೆ ಬದುಕನ್ನು ಕಟ್ಟಿಕೊಳ್ಳಲು ದಾರಿ ತೋರಿಸುತ್ತವೆ ಎನ್ನೋದಕ್ಕೆ ಇಲ್ಲೊಬ್ಬಳು ಮಹಿಳೆ ಸಾಕ್ಷಿಯಾಗಿದ್ದಾಳೆ. ಆಕೆಯ ಹೆಸರು ಮಹಾದೇವಿ. ಕಲಬುರಗಿಯ ಮಾಣಿಕೇಶ್ವರಿ (Kalaburagi Rotti Mahadevi) ಕಾಲೋನಿ ನಿವಾಸಿ ಮಹಾದೇವಿ.

    ರೊಟ್ಟಿ ಮಹಾದೇವಿಯಾದ ಕಥೆ
    ತನ್ನ ಯೌವನದಲ್ಲಿಯೇ ಸಾಕಷ್ಟು ನೋವನ್ನು ಉಂಡಿದ್ದಾಳೆ. ವಯಸ್ಸಲ್ಲದ ವಯಸ್ಸಲ್ಲಿ ಗಂಡನನ್ನು ಕಳೆದುಕೊಂಡು ಇಬ್ಬರ ಮಕ್ಕಳನ್ನು ಸಾಕಾಲಾಗದೇ ಒದ್ದಾಡಿ ಹೋಗಿದ್ದಳು. ಇನ್ನೆನು ಆತ್ಮಹತ್ಯೆ ಒಂದೇ ದಾರಿ ಎಂದು ಕೈಯಲ್ಲಿ ಹಗ್ಗ ಹಿಡಿದಿದ್ದಳು. ಆಗ ಆಕೆಗೆ ಮುಗಳಖೋಡದ ಶ್ರೀಗಳು ದೈರ್ಯ ಹೇಳಿ, ರೊಟ್ಟಿ ಮಾರಿ ಬದುಕು ಎಂದಿದ್ದರಂತೆ. ಅದರಂತೆ ರೊಟ್ಟಿ ಮಾರಿ ಬದುಕು ಕಟ್ಟಿಕೊಂಡಿರೋ ಮಹಾದೇವಿ ಈಗ ಮಹಿಳೆಯರು ಸೇರಿ 200 ಜನರಿಗೆ ಕೆಲಸ ನೀಡಿದ್ದಾಳೆ.

    ಕಡಿಮೆ ರೇಟಿಗೆ ಸಿಗುತ್ತೆ ರೊಟ್ಟಿ
    ಮಹಾದೇವಿಯ ಅಡುಗೆ ಮನೆಯಲ್ಲಿ ಪ್ರತಿನಿತ್ಯ ಸಾವಿರಾರು ರೊಟ್ಟಿ, ಚಪಾತಿ, ಧಪಾಟಿ, ಶೇಂಗಾ ಹೋಳಿಗೆ, ಪೆಂತ್ಯಾ ರೊಟ್ಟಿಗಳು ಸಿದ್ದವಾಗುತ್ತವೆ. ಇದಲ್ಲದೇ ಶೇಂಗಾ ಹಿಂಡಿ, ಅಗಸಿ ಹಿಂಡಿ, ಖಾರಾ, ಮಸಾಲಿ ಕೂಡ ಇಲ್ಲಿ ಸಿಗುತ್ತದೆ. 10-12 ರೂಪಾಯಿಗೆ ಸಿಗುವ ರೊಟ್ಟಿ ಮಾಹಾದೇವಿ ಕೇವಲ 3 ರೂಪಾಯಿಗೆ ನೀಡ್ತಾಳೆ. ಚಪಾತಿ ಕೇವಲ 2 ರೂ ನೀಡ್ತಾಳೆ.

    ಇದನ್ನೂ ಓದಿ: Kalaburagi Karate King: ಕರಾಟೆ ಕಿಂಗ್ ಅಂಬ್ರೇಶ್! ಕಲಬುರಗಿಯಲ್ಲಿ ಈಗ ಇವರದ್ದೇ ಹೆಸರು!

    ವ್ಯಾಪಾರದಲ್ಲೂ ಸೇವೆ
    ಕಳೆದ ಇಪ್ಪತೈದು ವರ್ಷಗಳಿಂದ ರೊಟ್ಟಿ ಮಾಡುತ್ತಿರೋ ಮಹಾದೇವಿ ಇದನ್ನು ಸೇವೆ ಎಂತಲೇ ತಿಳಿದಿದ್ದಾಳೆ. ತಾನು ಹಸಿವಿನಿಂದ ನೋವುಂಡಿದ್ದೇವೆ. ಇನ್ನೊಬ್ಬರು ಹಸಿವೆನ್ನಬಾರದು ಎನ್ನೋ ಮಹಾಗುಣ ಆಕೆಯದ್ದು. ಜೊತೆಗೆ 200 ಜನರಿಗೆ ಕೆಲಸ ನೀಡುವ ಮೂಲಕ ಅವರ ಬದುಕಿಗೂ ಆಸರೆಯಾದವರು.

    Rotti Mahadevi Kalaburagi
    ರೊಟ್ಟಿ ಸವಿಯಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಇದನ್ನೂ ಓದಿ: Indian Flag in Kalaburagi: ಅಬ್ಬಬ್ಬಾ! ರಾಷ್ಟ್ರಧ್ವಜದ ಗಾತ್ರವೇ ಅಚ್ಚರಿ ಹುಟ್ಟಿಸುತ್ತೆ! ವಿಡಿಯೋ ನೋಡಿ

    ಮಹಾದೇವಿ ರೊಟ್ಟಿಗೆ ಡಿಮ್ಯಾಂಡ್
    ಮಹಾದೇವಿ ಕೈಯಲ್ಲಿ ಸಿದ್ದವಾದ ರೊಟ್ಟಿಗಳು ಮಹಾರಾಷ್ಟ್ರ ಸೇರಿ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತವೆ. ಅಮೇರಿಕಾ, ದುಬೈಗಳಿಗೆ ಸೇರಿದಂತೆ ಹತ್ತಾರು ದೇಶಗಳಿಗೂ ಇಲ್ಲಿಂದ ಹೋಗುವ ಜನ ತೆಗೆದುಕೊಂಡು ಹೋಗುತ್ತಾರೆ. ಇನ್ನೂ ಮಹಾದೇವಿ ಅವರು ವಿದ್ಯಾರ್ಥಿಗಳಿಗೆ ಕನ್ಸಿಷೇನ್ ದರದಲ್ಲಿ ರೊಟ್ಟಿ ನೀಡ್ತಾರೆ. ಹಸಿವು, ಹಣವಿಲ್ಲ ಎಂದು ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ಕೊಟ್ಟು ಕಳುಹಿಸುತ್ತಾಳೆ. ಒಟ್ಟಿನಲ್ಲಿ ತಾನು ಅನ್ನಕ್ಕಾಗಿ ಪರದಾಡಿದ ನೋವು ಇನ್ನೊಬ್ಬರ ಕಣ್ಣಲ್ಲಿ ನೋಡಲು ಇಷ್ಟಪಡದ ಆಕೆಯ ಕಾರ್ಯಕ್ಕೆ ನಮ್ಮದೊಂದು ಸೆಲ್ಯೂಟ್...

     ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ

    Published by:guruganesh bhat
    First published: