ಕಲಬುರಗಿ: ಕಣ್ಣು ಹಾಯಿಸಿದಲ್ಲೆಲ್ಲ ಕಲ್ಲಿನ ಕೋಟೆ. ನೂರಾರು ವರ್ಷಗಳ ಇತಿಹಾಸ ಹೇಳುವ ಒಂದೊಂದು ಕಟ್ಟಡ. ಉದ್ದಾನುದ್ದ ಹರಡಿಕೊಂಡಿದೆ ನೋಡಿ ರಾಜ ಮನೆತನದ ಈ ಭವ್ಯ ಕೋಟೆ. ಹಾಗಿದ್ರೆ ಈ ಕೋಟೆ (Manyakheta Fort) ಯಾವುದು? ಏನಿದರ ವಿಶೇಷ? ಅದೆಲ್ಲವನ್ನೂ ಹೇಳ್ತೀವಿ ನೋಡಿ. ಹೌದು, ಇದು ಅಂತಿಂತ ಕೋಟೆಯಲ್ಲ ಮಾನ್ಯಖೇಟದ (Manyakheta ) ಕೋಟೆ. ನಿಜ, ಮಾನ್ಯಖೇಟ ಅಂದಾಗ ನೆನಪಿಗೆ ಬರುವುದೇ ರಾಷ್ಟ್ರಕೂಟರ ನೆನಪು.
ಇಂದಿನ ಕಲಬುರಗಿಯ ಸೇಡಂ ತಾಲೂಕಿನಲ್ಲಿರುವ ಮಳಖೇಡವೇ ಅಂದಿನ ಮಾನ್ಯಖೇಟವಾಗಿತ್ತು. ಇದು ರಾಷ್ಟ್ರಕೂಟರ ರಾಜಧಾನಿಯೂ ಆಗಿತ್ತು. ಅಂತಹ ಮಾನ್ಯಖೇಟದ ಮೂರು ಸುತ್ತಿನ ಕೋಟೆ ಇಂದಿಗೂ ಭಾರೀ ಫೇಮಸ್. ಮಾನ್ಯಖೇಟವು ಕಲಬುರಗಿಯಿಂದ ಸುಮಾರು 40 ಕಿಲೋ ಮೀಟರ್ ದೂರದಲ್ಲಿದ್ದು, ಕಾಗಿಣಾ ನದಿಯ ದಂಡೆಯ ಈ ಭವ್ಯ ಕೋಟೆಯಿದೆ.
ಕೋಟೆಯ ಸುತ್ತಲೂ ಹಳ್ಳ!
ಮಳಖೇಡ ಕೋಟೆಯ ಸುತ್ತಲೂ ಹಳ್ಳಗಳು, ಉಪಹಳ್ಳಗಳು ಹರಿಯುತ್ತವೆ. ಈ ಹಳ್ಳಗಳೇ ಈ ಕೋಟೆಗಳ ರಕ್ಷಣಾ ಕವಚ. ಇದರಲ್ಲಿ ಹೊರಕೋಟೆ ಮತ್ತು ಒಳಕೋಟೆ ಎಂಬ ಎರಡು ಭಾಗಗಳಿವೆ. ಹೊರಕೋಟೆ ಒಳಕೋಟೆಯನ್ನು ಸಂಪೂರ್ಣವಾಗಿ ಸುತ್ತುವರೆದಿಲ್ಲ. ಒಳಕೋಟೆಯನ್ನು ಚಿಕ್ಕ-ಚಿಕ್ಕ ಕಲ್ಲುಗಳಿಂದಲೂ, ಹೊರಕೋಟೆಯನ್ನು ದಪ್ಪ ಕಲ್ಲುಗಳಿಂದಲೂ ರಚಿಸಲಾಗಿದೆ.
ಇದನ್ನೂ ಓದಿ: Kalaburagi: ಮನೆಯೊಂದು 101 ಬಾಗಿಲು! ಕಲಬುರಗಿಯಲ್ಲೊಂದು ವಿಶಿಷ್ಟ ಮನೆ
ಶ್ವೇತಾಂಬರ ಪಂಥದ ನೆಲೆ
ರಾಷ್ಟ್ರಕೂಟರ ರಾಜಧಾನಿಯಾಗುವುದಕ್ಕೂ ಮುನ್ನ ಕ್ರಿಸ್ತ ಶಕ ಒಂದನೇ ಶತಮಾನದಲ್ಲಿ ಈ ಮಳಖೇಡ ಶ್ವೇತಾಂಬರ ಪಂಥದ ನೆಲೆಯಾಗಿತ್ತೆಂದು ಕೆಲವು ದಾಖಲೆಗಳು ಹೇಳುತ್ತವೆ. ಈಗಲೂ ಕೋಟೆಯೊಳಗೆ ಜೈನ ಬಸದಿ, ಗುಡಿಗಳು, ಮೂರ್ತಿ ಶಿಲ್ಪಗಳು, ಕೆಲವು ಮನೆಗಳನ್ನೂ ಕಾಣಬಹುದಾಗಿದೆ.
ಇದನ್ನೂ ಓದಿ: Bhagyavanti Temple: ಭಾಗ್ಯವಂತಿ ದೇವಿಯ ದರ್ಶನದಿಂದ ಅದೃಷ್ಟ ಒಲಿಯುತ್ತಂತೆ!
ಈ ಕೋಟೆಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಇಷ್ಟು ಅದ್ಭುತವಾಗಿರೋ ಈ ಮಳಖೇಡದ ಕೋಟೆ ಚೋಳರು, ಮುಸಲ್ಮಾನ ದೊರೆಗಳ ದಾಳಿಗೆ ಸಿಕ್ಕು ನಾಶಹೊಂದಿದೆ. ಆಗಾಗ ಜೀರ್ಣೋದ್ಧಾರ ಕಾರ್ಯಗಳೂ ಸರ್ಕಾರದಿಂದ ನಡೆದಿವೆ. ಒಟ್ಟಿನಲ್ಲಿ ಶತಮಾನಗಳ ಇತಿಹಾಸ ಕಂಡಿರುವ, ಹಲವು ಸಾಮ್ರಾಜ್ಯಗಳಿಂದ ದಾಳಿ ಎದುರಿಸಿದ್ರೂ ಮಾನ್ಯಖೇಟದ ಈ ಕೋಟೆ ಇಂದಿಗೂ ಅಜರಾಮರವಾಗಿ ಕಂಗೊಳಿಸುತ್ತಿದೆ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ