Mahashivaratri 2023: ಶೇಂಗಾದಲ್ಲೂ ಅವತರಿಸಿದ ಶಿವ! ನೆಲಗಡಲೆಯಿಂದ ರೂಪಗೊಂಡ 25 ಅಡಿ ಮಹಾದೇವ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

Shivaratri 2023: ಸುಮಾರು 8 ಕ್ವಿಂಟಲ್ ಶೇಂಗಾ ಬಳಸಿ ಶಿವಲಿಂಗ ರೂಪಿಸಿ ಅರಿಶಿನ ಹಾಗೂ ಕುಂಕುಮದಿಂದ ರಂಗು ತುಂಬಲಾಗಿದೆ.

  • News18 Kannada
  • 5-MIN READ
  • Last Updated :
  • Gulbarga, India
  • Share this:

    ಕಲಬುರಗಿ: ಡ್ರೈ ಫ್ರೂಟ್​ನಿಂದ ರೂಪುಗೊಂಡ ಶಿವಲಿಂಗ, ಬರ್ತ್​ಡೇ ಕೇಕ್​ನಂತೆ ಕಾಣೋ ಶಿವಲಿಂಗ! ಕಾನನನ ಮಧ್ಯೆ ಅಕ್ಕಮಹಾದೇವಿ ಜೊತೆಗಿರೋ ಶಿವಲಿಂಗ, ಇನ್ನೊಂದೆಡೆ ಬಂಗಾರ ವರ್ಣದ ಶಿವಲಿಂಗ! ಇಷ್ಟೆಲ್ಲ ಅಂದ ಚೆಂದದ ವರ್ಣಮಯ ಶಿವಲಿಂಗಗಳು (Shiva lingam Varieties)  ಒಂದೆಡೆಯಾದರೆ ಬೃಹತ್ತಾಗಿರೋ ಕೆಂಪು-ಹಳದಿ ಬಣ್ಣದಲ್ಲಿ ಕನ್ನಡ ತೇರಿನಂತೆ ಕಂಗೊಳಿಸೋ ಶಿವಲಿಂಗ ಇನ್ನೊಂದೊಡೆ. ಇದಂತೂ ಈ ಬಾರಿಯ ಶಿವಪೂಜೆಯ ಸ್ಪೆಷಲ್. ಅಷ್ಟಕ್ಕೂ ಈ ಶಿವಲಿಂಗ (Shiva Linga) ರೂಪುಗೊಂಡಿರೋದು ಯಾವುದರಿಂದ ಅನ್ನೋದು ಗೊತ್ತಾದ್ರೆ ನೀವು ಖುಷಿಪಡ್ತೀರ.




    ಶೇಂಗಾದಿಂದ ಶಿವಲಿಂಗ!
    ಯೆಸ್, ಬಿಸಿಲನಗರಿ ಕಲಬುರಗಿ ಹೊರವಲಯದಲ್ಲಿರುವ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಅಮೃತ ಸರೋವರ ಆವರಣದಲ್ಲಿ ಆಕರ್ಷಕ ಶಿವಲಿಂಗದೊಂದಿಗೆ ಕಂಗೊಳಿಸ್ತಿದೆ. ಅಷ್ಟಕ್ಕೂ ಇದನ್ನ ಯಾವುದ್ರಿಂದ ಮಾಡಲಾಯಿತು ಗೊತ್ತಾ? ಹೌದು, ನಾರ್ಮಲ್ ಆಗಿ ಕಾಣೋ ಈ ಶಿವಲಿಂಗವನ್ನ ಶೇಂಗಾದಿಂದ ರೂಪಿಸಿರೋದು ವಿಶೇಷ.




    ಅರಿಶಿನ, ಕುಂಕುಮದ ರಂಗು
    ಸುಮಾರು 8 ಕ್ವಿಂಟಲ್ ಶೇಂಗಾ ಬಳಸಿ ಶಿವಲಿಂಗ ರೂಪಿಸಿ ಅರಿಶಿನ ಹಾಗೂ ಕುಂಕುಮದಿಂದ ರಂಗು ತುಂಬಲಾಗಿದೆ. ಹೀಗೆ ಕಲಬುರಗಿಯ ಬ್ರಹ್ಮಕುಮಾರಿ ಆಶ್ರಮದ ಆವರಣದಲ್ಲಿ ಕಂಡು ಬರುತ್ತಿರೋ ಈ 25 ಅಡಿ ಎತ್ತರದ ಬೃಹತ್ ಶೇಂಗಾ ಶಿವಲಿಂಗವು ಈ ಬಾರಿಯ ಮಹಾ ಶಿವರಾತ್ರಿಯಲ್ಲಿ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ.




    ವಿಭಿನ್ನ-ವಿಶಿಷ್ಟ ಶಿವರಾತ್ರಿ ಆಚರಣೆ
    ಕಲಬುರಗಿಯ ಬ್ರಹ್ಮಕುಮಾರಿ ಆಶ್ರಮ ಸಾರ್ವಜನಿಕರನ್ನು ಆಧ್ಯಾತ್ಮದ ಕಡೆಗೆ ಸೆಳೆಯಲು ಪ್ರತಿವರ್ಷ ಮಹಾ ಶಿವರಾತ್ರಿಯಂದು ವಿಭಿನ್ನ ಹಾಗೂ ವಿಶೇಷವಾಗಿ ಶಿವರಾತ್ರಿ ಪೂಜೆಯನ್ನು ಆಚರಿಸುತ್ತಿದೆ. ಅದರಂತೆ ಈ ಬಾರಿ ಶೇಂಗಾದಿಂದ ಬೃಹತ್ ಶಿವಲಿಂಗವನ್ನು ತಯಾರಿಸುವ ಮೂಲಕ ಗಮನ ಸೆಳೆದಿದೆ.


    ಇದನ್ನೂ ಓದಿ: Nagavi Yellamma Temple: ಪ್ರಾಚೀನ ವಿಶ್ವವಿದ್ಯಾಲಯ ಈಗ ಹಾಳುಕೊಂಪೆ! ಹೇಳ್ತೀವಿ ಕೇಳಿ ಪುಣ್ಯತಾಣದ ವಿಚಿತ್ರ ಕಥೆ


    ಈ ಹಿಂದೆ ತೆಂಗಿನಕಾಯಿ, ತೊಗರಿ, ಮುತ್ತು, ಅಡಿಕೆ ಹೀಗೆ ನಾನಾ ರೀತಿಯ ಶಿವಲಿಂಗ ರೂಪಿಸಲಾಗಿತ್ತು. ಇದೀಗ ಸ್ವತಃ ಆಶ್ರಮವಾಸಿಗಳೇ ಈ ಶೇಂಗಾ ಶಿವಲಿಂಗ ರೂಪಿಸಿರೋದು ವಿಶೇಷ.




    ಹತ್ತು ದಿನಗಳ ದರ್ಶನ ಅವಕಾಶ
    ಇದರ ಜೊತೆಗೆ ಆಶ್ರಮದ ಪ್ರಾಂಗಣದಲ್ಲಿ ನಾಣ್ಯ, ಕಲ್ಲು ಸಕ್ಕರೆ, ಗೋಡಂಬಿ, ಸಿರಿಧಾನ್ಯ ಹೀಗೆ ಚಿಕ್ಕ ಗಾತ್ರದ 12 ಜ್ಯೋತಿರ್ಲಿಂಗಗಳನ್ನ ಸ್ಥಾಪಿಸಲಾಗಿದೆ. ಇನ್ನು ಫೆಬ್ರವರಿ 18ಕ್ಕೆ ಆರಂಭವಾಗಿ ಹತ್ತು ದಿನಗಳ ಕಾಲ ಈ ಶೇಂಗಾ ಶಿವಲಿಂಗದ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.




    ಇದನ್ನೂ ಓದಿ: Kalaburagi: ಕಿಡ್ನಿ ರೋಗಿಗಳಿಗೆ ಆಸರೆಯಾದ ಕಲಬುರಗಿಯ ಉದ್ಯಮಿ, ಇಲ್ಲಿ ಸಿಗುತ್ತೆ ಉಚಿತ ಡಯಾಲಿಸಿಸ್


    ಒಟ್ಟಿನಲ್ಲಿ ಶಿವರಾತ್ರಿ ನೆನಪಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಪ್ರಮುಖ ಬೆಳೆಗೆ ಮಹತ್ವ ನೀಡಿದ್ದಲ್ಲದೇ, ರೈತರಿಗೂ, ಶಿವ ಭಕ್ತರಿಗೂ ಖುಷಿಯಾಗುವಂತಹ ವಾತಾವರಣವನ್ನ ಬ್ರಹ್ಮಕುಮಾರಿ ಆಶ್ರಮವು ನಿರ್ಮಿಸಿದೆ.


    ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: