Kalyana Karnataka Utsava: ಕಲ್ಯಾಣ ಉತ್ಸವಕ್ಕೆ ಭರದ ಸಿದ್ದತೆ, ಅದ್ದೂರಿ ಕಾರ್ಯಕ್ರಮದ ವಿವರ ಇಲ್ಲಿದೆ

ಉತ್ಸವಕ್ಕಾಗಿ ನಡೆದ ಸಭೆ

ಉತ್ಸವಕ್ಕಾಗಿ ನಡೆದ ಸಭೆ

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಜನ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. 40 ಸಾವಿರಕ್ಕೂ ಅಧಿಕ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ.

  • Share this:

    ಕಲಬುರಗಿ: ಕಲ್ಯಾಣ ಕರ್ನಾಟಕದ ಕಲೆ ಸಂಸ್ಕೃತಿ ಹಾಗೂ ಪರಂಪರೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಲ್ಯಾಣ ಕರ್ನಾಟಕ ಉತ್ಸವ ಆಯೋಜಿಸಲಾಗಿದೆ.  ಇದೇ ಫೆಬ್ರವರಿ 24 ರಿಂದ 26 ರವರೆಗೆ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ.‌


    ಒಂದು ಲಕ್ಷ ಜನ ಸೇರುವ ನಿರೀಕ್ಷೆ
    ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಜನ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. 40 ಸಾವಿರಕ್ಕೂ ಅಧಿಕ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಬೇರೆ ಜಿಲ್ಲೆಗಳಿಂದ ಆಗಮಿಸಿದ ಜನರಿಗೆ ಹಾಗೂ ಕಲಾವಿದರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೀರು ಹಾಗೂ ರಸ್ತೆ ವ್ಯವಸ್ಥೆ ಸೂಕ್ತವಾಗಿ ನಿಭಾಯಿಸುವಂತೆ ಸೂಚನೆಯನ್ನು ನೀಡಲಾಗಿದೆ.


    ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ
    ಉತ್ಸವದ ಯಶಸ್ವಿಗಾಗಿ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಅನಿರುದ್ದ ಶ್ರವಣ ಅವರ ನೇತೃತ್ವದಲ್ಲಿ ಸಮಿತಿಗಳನ್ನ ರಚನೆ ಮಾಡಲಾಗಿದೆ. ಇನ್ನು ಕಲಬುರಗಿಯ ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳದಲ್ಲಿಯೇ ಉತ್ಸವ ನಡೆಸಲು ಏರ್ಪಾಡು ಮಾಡಲಾಗುತ್ತಿದೆ. ಉತ್ಸವದ ಸಂಪೂರ್ಣ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವಹಿಸಿಕೊಳ್ಳಲಿದೆ.


    ಬೃಹತ್ ವೇದಿಕೆಗೆ ಸಿದ್ದತೆ
    ಉತ್ಸವಕ್ಕಾಗಿ 100+60 ಚದರ್ ಅಡಿ ಮುಖ್ಯ ವೇದಿಕೆ ಜೊತೆಗೆ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಬಯಲು ರಂಗ ಮಂದಿರದಲ್ಲಿ ಉಪ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಸಾಂಸ್ಕೃತಿಕ ಹಾಗೂ ಜನಪದ ಕಾರ್ಯಕ್ರಮಗಳ ರೂಪುರೇಷೆ ನಡೆಸಲಾಗುತ್ತಿದೆ.


    ಇದನ್ನೂ ಓದಿ: Malkhed Fort: ಮಾನ್ಯಖೇಟದ 3 ಸುತ್ತಿನ ಕೋಟೆ ಹೊಕ್ಕಿ ಬನ್ನಿ!


    ಊಟ, ವಸತಿ ವ್ಯವಸ್ಥೆ
    ಉಸ್ತವಕ್ಕೆ ರಾಜ್ಯದ ಹಲವು ಜಿಲ್ಲೆಗಳಿಂದ ಜನ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಗಣ್ಯರು, ಕಲಾವಿದರು, ಬಾಲಿವುಡ್ ಹಾಗೂ ಸ್ಯಾಂಡಲ್​ವುಡ್ ನಟರಿಗೆ ಸೌಕರ್ಯ ಕಲ್ಪಿಸಲು ಸಮಿತಿ ರಚಿಸಲಾಗಿದೆ. 


    ಇದನ್ನೂ ಓದಿ: Kalaburagi: ಮನೆಯೊಂದು 101 ಬಾಗಿಲು! ಕಲಬುರಗಿಯಲ್ಲೊಂದು ವಿಶಿಷ್ಟ ಮನೆ


    ಭವ್ಯ ಮೆರವಣಿಗೆ
    ಇನ್ನು ಉತ್ಸವದ ಮೊದಲನೇ ದಿನ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಯ ಸಾಂಸ್ಕೃತಿಕ ಹಾಗೂ ಜಾನಪದ ಕಲಾತಂಡಗಳು ಕುಂಭಮೇಳದೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ಜಾನಪದ ಶೋಭಾಯಾತ್ರೆ ನಡೆಸಲಾಗುತ್ತದೆ. ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಸರ್ಕಾದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಕಲಬುರಗಿ ಜಿಲ್ಲೆಯಲ್ಲಿ ಸಂಭ್ರಮ ಕಳೆಗಟ್ಟಿದೆ.


    ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: