• Home
  • »
  • News
  • »
  • kalburgi
  • »
  • Education News: ವಿದ್ಯಾರ್ಥಿಗಳೇ ಗಮನಿಸಿ, ರಾಷ್ಟ್ರಮಟ್ಟದ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸಲು ಹೀಗೆ ರಿಜಿಸ್ಟರ್ ಮಾಡಿ

Education News: ವಿದ್ಯಾರ್ಥಿಗಳೇ ಗಮನಿಸಿ, ರಾಷ್ಟ್ರಮಟ್ಟದ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸಲು ಹೀಗೆ ರಿಜಿಸ್ಟರ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿಷ್ಠಿತ  ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ಸಮಾವೇಶದಲ್ಲಿ ಭಾಗವಹಿಸಲು ಇಚ್ಚಿಸುವವರು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

  • Share this:

    ರಾಜ್ಯ ವಿಜ್ಞಾನ ಪರಿಷತ್ತು ಆಯೋಜಿಸಿರುವ 30ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲು ಒಳ್ಳೆಯ ಅವಕಾಶವೊಂದು ಇಲ್ಲಿದೆ.  ಆಸಕ್ತಿ ಹೊಂದಿದವರಿಗೆ ಇದೊಂದು ಉತ್ತಮ ಅವಕಾಶವಾದ್ದು, ಕೂಡಲೆ ನೋಂದಣಿ‌ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು (Students) ಅವಕಾಶವನ್ನು ಬಳಸಿಕೊಳ್ಳುವಂತೆ ರಾಜ್ಯ ವಿಜ್ಞಾನ ಪರಿಷತ್ (Karnataka Vijnana Parishat)  ಕೋರಿಕೊಂಡಿದೆ. ಡಿಸೆಂಬರ್  ತಿಂಗಳಿನಲ್ಲಿ ನಡೆಯಲಿರುವ ಪ್ರತಿಷ್ಠಿತ  ವಿಜ್ಞಾನ ಸಮಾವೇಶದಲ್ಲಿ (Science Events)  ಭಾಗವಹಿಸಲು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ಸಮಾವೇಶದಲ್ಲಿ ಭಾಗವಹಿಸಲು ಇಚ್ಚಿಸುವವರು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.


    ವಿದ್ಯಾರ್ಥಿಗಳು ಏನು ಮಾಡಬೇಕು?
    ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ‘ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಜೀವಿ ಪರಿಸರ ವ್ಯವಸ್ಥೆ ಅರ್ಥಮಾಡಿಕೊಳ್ಳೋಣ’ ಎಂಬ ವಿಷಯದ ಕುರಿತು ವೈಜ್ಞಾನಿಕ ಯೋಜನಾ ಮಾದರಿ ಸಿದ್ಧಪಡಿಸಬೇಕು. ಜಿಲ್ಲಾ ಮಟ್ಟದ ಸ್ಪರ್ಧೆಯು ಡಿಸೆಂಬರ್ ಮೊದಲನೇ ವಾರದ ಒಳಗೆ ರಾಜ್ಯದೆಲ್ಲೆಡೆ ನಡೆಯಲಿದೆ. ಪ್ರತಿ ಜಿಲ್ಲೆಯಿಂದ 10 ತಂಡಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ರಾಜ್ಯಮಟ್ಟದ ಸ್ಪರ್ಧೆಯು ಡಿಸೆಂಬರ್ ಮಧ್ಯಭಾಗದಲ್ಲಿ ನಡೆದು, 30 ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದು ಪರಿಷತ್ತಿನ ಅಧ್ಯಕ್ಷ ತಿಳಿಸಿದ್ದರೆ.


    ರಾಷ್ಟ್ರಮಟ್ಟದ ಸ್ಪರ್ಧೆ
    ಇನ್ನು ಗುಜರಾತ್‌ನಲ್ಲಿ ಡಿಸೆಂಬರ್ 27 ರಿಂದ 31ರವರೆಗೆ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು  ಇಲ್ಲಿ ಕ್ಲಿಕ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 99807 59704 ಅಥವಾ 94486 24070 ಯನ್ನು ಸಂಪರ್ಕಿಸಬಹುದಾಗಿದೆ.


    ರೈತರಿಗೆ ಡೀಸೆಲ್ ಸಬ್ಸಿಡಿ ಘೋಷಣೆ; ಅರ್ಜಿ ಹಾಕಬೇಕಂತಲೂ ಇಲ್ಲ!
    ಕರ್ನಾಟಕ ಸರ್ಕಾರ ರೈತರ ಬ್ಯಾಂಕ್ ಖಾತೆಗೆ ಡೀಸೆಲ್ ಸಬ್ಸಿಡಿಯನ್ನು ಜಮಾ ಮಾಡಲು ನಿರ್ಧರಿಸಿದೆ. ಆದರೆ ಈ ಸಹಾಯಧನ ಪಡೆಯಲು ರೈತರು ಅರ್ಜಿ ಸಲ್ಲಿಸಬೇಕಾದ ಅವಶ್ಯಕತೆಯೇ ಇಲ್ಲ. ಹಾಗಾದ್ರೆ ಸಬ್ಸಿಡಿ ಪಡೆಯುವುದು ಹೇಗೆ ಎಂಬ ಗೊಂದಲಕ್ಕೆ ಇಲ್ಲಿದೆ ಸ್ಪಷ್ಟನೆ. ಹೌದು, ರೈತರು ಡೀಸೆಲ್ ಸಬ್ಸಿಡಿಯನ್ನು (Diesel Subsidy To Farmers) ಪಡೆಯಲು, ಕೃಷಿ ಇಲಾಖೆ ಕಚೇರಿಗೆ ಅಲೆದಾಡಬೇಕಾಗಿಲ್ಲ, ಸರ್ಕಾರ ತನ್ನ ಬಳಿ ಲಭ್ಯವಿರುವ ಕಿಸಾನ್ ಸಮ್ಮಾನ್ ನಿಧಿ ದತ್ತಾಂಶ ಆಧರಿಸಿ ನೇರವಾಗಿ ರೈತರ ಖಾತೆಗೆ ಹಣ ಜಮಾ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ (Karnataka Agriculture Minister BC Patil) ಅವರು ತಿಳಿಸಿದ್ದಾರೆ.


    ಬಜೆಟ್​ನಲ್ಲಿ ಘೋಷಿಸಿದಂತೆ 'ರೈತ ಶಕ್ತಿ ಯೋಜನೆ'(Karnataka Raitha Shakti Scheme 2022) ಅಡಿ ಈ ಸಹಾಯಧನ ನೀಡಲಾಗುತ್ತದೆ. ಪ್ರತಿ ರೈತರಿಗೆ ಮೊದಲ ಬಾರಿಗೆ ಪ್ರತಿ ಎಕರೆಗೆ 250 ರೂ. ಗಳಂತೆ ಗರಿಷ್ಠ 5 ಎಕರೆಗೆ ಡೀಸೆಲ್ ಸಹಾಯಧನ ನೀಡಲು ಸರ್ಕಾರ ಅಗತ್ಯ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಂಡಿದೆ.


    5 ಎಕರೆವರೆಗೆ ಜಮೀನು ಹೊಂದಿರುವ ಅರ್ಹ ರೈತರಿಗೆ ಡೀಸೆಲ್ ಸಬ್ಸಿಡಿ
    ಈಗಾಗಲೇ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಧನಕ್ಕಾಗಿ ರಾಜ್ಯದ 53 ಲಕ್ಷ ರೈತರಿಂದ ದಾಖಲೆಗಳನ್ನು ಕೂಡ ಸಂಗ್ರಹಿಸಲಾಗಿದೆ. ಜಮೀನು ಪಹಣಿ, ಆಧಾರ್ ಜೋಡಣೆಯೂ ಆಗಿದೆ. ಇದರ ಆಧಾರದ ಮೇಲೆ 5 ಎಕರೆವರೆಗೆ ಜಮೀನು ಹೊಂದಿರುವ ಅರ್ಹ ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲಾಗುವುದು ಸಚಿವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: