• Home
 • »
 • News
 • »
 • kalburgi
 • »
 • Karnataka Rajyotsava: ಕನ್ನಡ ತಾಯಿಯ ಚಿತ್ರ ಬಿಡಿಸಿ ಉಚಿತವಾಗಿ ಹಂಚುವ ಕಲಬುರಗಿ ಕಲಾವಿದ!

Karnataka Rajyotsava: ಕನ್ನಡ ತಾಯಿಯ ಚಿತ್ರ ಬಿಡಿಸಿ ಉಚಿತವಾಗಿ ಹಂಚುವ ಕಲಬುರಗಿ ಕಲಾವಿದ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಅದ್ಬುತ ಹಾಗೂ ಅಪರೂಪದ ಕನ್ನಡದ ಕಲಾವಿದರಾಗಿರೋ ನರಸಿಂಹಲು, ಹೈದರಾಬಾದಿನ ಬಹುದೊಡ್ಡ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ರು. ಮುಂದೆ ಅವರು ಕನ್ನಡ ಸೇವೆಗೆ ಮುಂದಾಗಿದ್ದು ಹೀಗೆ!

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ಚಂದ ಚಂದದ ಚಿತ್ರಗಳು, ಬಣ್ಣಗಳಲ್ಲಿ ಭೂಲೋಕವನ್ನೇ ಮರೆಸುವಂಥಾ ಸೌಂದರ್ಯ. ಈ ಚಿತ್ರಗಳನ್ನು ನೋಡಿ ಆ ರವಿವರ್ಮನೂ ಶಭಾಷ್ ಹೇಳಬಹುದೇನೋ. ಅಷ್ಟು ಅದ್ಭುತ! ಅಮೋಘ! ಕಲಬುರಗಿ ಈ ಚಿತ್ರ ಕಲಾವಿದ (Kalaburagi Artist) ಚಿತ್ರ ಬಿಡಿಸೋದಂದೇ ಅಲ್ಲ, ಅವುಗಳ ಮೂಲಕ ಕನ್ನಡ ನಾಡು ನುಡಿಯ ಸೇವೆಯನ್ನೂ ಮಾಡ್ತಿದ್ದಾರೆ. ಕಲಬುರಗಿಯ (Kalaburagi News) ಚಿತ್ತಾಪುರದ ನಿವಾಸಿ ನರಸಿಂಹಲು ಓರ್ವ ಅತ್ಯುತ್ತಮ ಚಿತ್ರ ಕಲಾವಿದ, ಜೊತೆಗೆ ಅಪ್ಪಟ ಕನ್ನಡಾಭಿಮಾನಿ.


  ಚಿತ್ತಾಪುರ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿರೋ ಇವ್ರು ಕಲಬುರಗಿ ಜಿಲ್ಲೆಯಲ್ಲಿ ನಡೆಯುವ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ನೆಲಜಲ ಕಾರ್ಯಕ್ರಮಗಳಿಗೆ ಉಚಿತ ಕಲಾಸೇವೆಯನ್ನು ಮಾಡ್ತಾರೆ. ಕನ್ನಡಾಂಬೆಯ ಭಾವಚಿತ್ರ, ನಾಣ್ಣುಡಿ, ಬಾವುಟ ಸೇರಿದಂತೆ ಎಲ್ಲವನ್ನೂ ಉಚಿತವಾಗಿಯೇ ಚಿತ್ರಮುಖೇನ ಮಾಡಿಕೊಡ್ತಾರೆ.


  ಖಾಸಗಿ ಕಂಪನಿ ಕೆಲಸ ಬಿಟ್ಟು ಶಿಕ್ಷಕರಾದ್ರು
  ಅದ್ಬುತ ಹಾಗೂ ಅಪರೂಪದ ಕನ್ನಡದ ಕಲಾವಿದರಾಗಿರೋ ನರಸಿಂಹಲು, ಹೈದರಾಬಾದಿನ ಬಹುದೊಡ್ಡ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ರು. ಆದ್ರೆ, ಅಲ್ಲಿ ಕೇವಲ ದುಡ್ಡಿಗಾಗಿ ದುಡಿಯಬೇಕು, ನಾಡಸೇವೆ ಸಾಧ್ಯವಿಲ್ಲ ಎಂದು ತಿಳಿದು ಲಕ್ಷಾಂತರ ರೂಪಾಯಿ ವೇತನದ ಕೆಲಸ ಬಿಟ್ಟು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಜೊತೆಯಲ್ಲಿ ತಾಯಿ ಭುವನೇಶ್ವರಿ ಸೇವೆ ನಿಸ್ವಾರ್ಥತೆಯಿಂದ ಮಾಡ್ತಿದ್ದಾರೆ.


  ಇದನ್ನೂ ಓದಿ: Rajyotsava Award: ಸಾಲುಮರದ ನಿಂಗಣ್ಣ, ಭೂಮಾಲಿಕ ಮೋಸ ಮಾಡಿದರೂ ಕೈ ಬಿಡಲಿಲ್ಲ ಪ್ರಕೃತಿ ಮಾತೆ!


  ಮನೆಯೇ ಮ್ಯೂಸಿಯಂ!
  ಇನ್ನು ಅವರು ಎಲ್ಲಾ ರೀತಿಯ ಕಲೆಗಳಲ್ಲಿ ಮಾಸ್ಟರ್ ಆಗಿದ್ದು ದೇಶ-ವಿದೇಶಗಳಲ್ಲಿಯೂ ಅವರ ಚಿತ್ರಕಲೆಗಳು ಪ್ರದರ್ಶನಗೊಂಡಿವೆ. ಜೊತೆಗೆ ಮಾರಾಟ ಕೂಡ ಆಗಿವೆ. ಸಾಕಷ್ಟು ಪ್ರಶಸ್ತಿಗಳು ಕೂಡ ಅರಸಿ ಬಂದಿವೆ. ಆದ್ರೆ ಇದುವರೆಗೂ ಕನ್ನಡ ಭಾಷೆ, ನಾಡು, ನುಡಿ ಚಿತ್ರಗಳನ್ನು ಬಿಡಿಸಿಕೊಡಲು ಮಾತ್ರ ಯಾರಿಂದಲೂ ಹಣ ಪಡೆದಿಲ್ಲ. ತಮ್ಮ ಮನೆಯನ್ನೇ ಮ್ಯೂಸಿಯಂ ಆಗಿ ಮಾಡಿಕೊಂಡಿರೋ ಇವ್ರ ಮನೆಲಿ ಎಲ್ಲಿ ನೋಡಿದ್ರೂ ಪೇಂಟಿಂಗ್​ಗಳೇ ಕಾಣಿಸುತ್ತವೆ.


  ಇದನ್ನೂ ಓದಿ: Rajyotsava Award: ಓದಿದ್ದು 7ನೇ ಕ್ಲಾಸ್, ರಾಜ್ಯೋತ್ಸವ ಪ್ರಶಸ್ತಿಯೇ ಒಲಿದು ಬಂತು!


  ಒಟ್ಟಾರೆಯಾಗಿ ಚಿತ್ರಕಲೆಗಳ ಮೂಲಕವೇ ಕನ್ನಡ ನಾಡು, ನುಡಿ ಸೇವೆ ಮಾಡುತ್ತಿರೋ ನರಸಿಂಹಲು ಅವರ ಕಾರ್ಯ ನಿಜಕ್ಕೂ ಮಾದರಿ ಅಂತಿದ್ದಾರೆ ಕಲಬುರಗಿಯ ಕಲಾ ರಸಿಕರು.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: