• Home
 • »
 • News
 • »
 • kalburgi
 • »
 • Rajyotsava Award: ಓದಿದ್ದು 7ನೇ ಕ್ಲಾಸ್, ರಾಜ್ಯೋತ್ಸವ ಪ್ರಶಸ್ತಿಯೇ ಒಲಿದು ಬಂತು!

Rajyotsava Award: ಓದಿದ್ದು 7ನೇ ಕ್ಲಾಸ್, ರಾಜ್ಯೋತ್ಸವ ಪ್ರಶಸ್ತಿಯೇ ಒಲಿದು ಬಂತು!

ಕಲಾವಿದ ಗುರುನಾಥ್ ಹೂಗಾರ್

ಕಲಾವಿದ ಗುರುನಾಥ್ ಹೂಗಾರ್

ಓದಿದ್ದು ಕೇವಲ 7ನೇ ತರಗತಿಯಾದರೂ ನಾಟಕದ ಡೈಲಾಗ್​ಗಳನ್ನ ಸರಾಗವಾಗಿ ಹೇಳುತ್ತಿದ್ದ ಇವರ ಚಾತುರ್ಯಕ್ಕೆ ಇಡೀ ರಂಗಭೂಮಿಯ ಫಿದಾ ಆಗಿತ್ತು.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ಇವರು ಓದಿದ್ದು ಏಳನೇ ತರಗತಿ ಮಾತ್ರ, ವಿದ್ಯೆ ಅಷ್ಟೇನೂ ತಲೆಗೆ ಹತ್ತಿಲ್ಲ ಎಂದು ಶಾಲೆ ಬಿಟ್ರೂ ಕಲೆಯನ್ನು ಮೈಗೂಡಿಸಿಕೊಂಡ ಇವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಿದೆ.  ಈ ಬಾರಿಯ ಕರ್ನಾಟಕ ರಾಜ್ಯೋತ್ಸವ (Karnataka Rajyotsava Award) ಪ್ರಶಸ್ತಿಗೆ ಆಯ್ಕೆಯಾದ ಕಲಬುರಗಿ ತಾಲೂಕಿನ ಖಣದಾಳ ಗ್ರಾಮದ ನಿವಾಸಿ ಹುಟ್ಟು ರಂಗಭೂಮಿ ಕಲಾವಿದ ಗುರುನಾಥ್ ಹೂಗಾರ (Gurunath Hoogar) ಅವರ ರಂಗಭೂಮಿ ಕ್ಷೇತ್ರದಲ್ಲಿ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.


  ಗುರುನಾಥ ಹೂಗಾರ್ ಅವರು ಜನಿಸಿದ್ದು, ಅತ್ಯಂತ ಬಡ ಕೃಷಿ ಕುಟುಂಬದಲ್ಲಿ‌. ಅತಿ ಚಿಕ್ಕ ವಯಸ್ಸಿನಲ್ಲಿ ಕಲಾವಿದನಾಗಬೇಕೆಂದು ಅವರು ಕಂಡ ಕನಸು, ಪಟ್ಟ ಶ್ರಮ ಇವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ವೃತ್ತಿ ರಂಗಭೂಮಿ ಕಲಾವಿದರಾಗಿ ಹಲವು ನಾಟಕಗಳಲ್ಲಿ ನಾಯಕ ನಟನಾಗಿ, ಖಳನಟನಾಗಿ, ಹಾಸ್ಯ ಕಲಾವಿದನಾಗಿಯು ಸಹ ಬಣ್ಣ ಹಚ್ಚಿದ್ದಲ್ಲದೇ, ಹತ್ತಾರು ನಾಟಕಗಳಿಗೆ ನಿರ್ದೇಶಕರಾಗಿಯೂ ವಸ್ತ್ರವಿನ್ಯಾಸಕಾರರಾಗಿಯೂ ಗುರುನಾಥ್ ಅವರು ಸೇವೆ ಸಲ್ಲಿಸಿದ್ದಾರೆ.


  ಅಕಾಡೆಮಿ ಪ್ರಶಸ್ತಿಗೂ ಭಾಜನ
  ಗುರುನಾಥ ಅವರು ಬಾಲನಟನಾಗಿ ರಂಗಭೂಮಿಗೆ ಪ್ರವೇಶಿಸಿ ಈವರೆಗೆ ನೂರಾರು ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ರಂಗಭೂಮಿಗೆ ಇವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಹಾಗೂ ಗುರುನಾಥ್ ಹೂಗಾರ ಅವರ ಬಹುಮುಖ ಪ್ರತಿಭೆಗೆ 2017ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ.


  ಇದನ್ನೂ ಓದಿ: Banana Farming: ಕಲಬುರಗಿ ಬಾಳೆ ಇರಾಕ್​ಗೆ ರಫ್ತು! 20 ಲಕ್ಷ ಆದಾಯ ಗಳಿಸಿದ ರೈತ


  ಈ ಪ್ರಸಿದ್ಧ ನಾಟಕಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ
  ಗುರನಾಥ ಅವರು ಕಳೆದ 6 ದಶಕಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಈವರೆಗೆ ನೂರಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿ ಸೈನಿಸಿಕೊಂಡಿದ್ದಾರೆ. ಚೀನಾ ದುರಾಕ್ರಮಣ, ನನ್ನ ಭೂಮಿ, ಗರೀಬಿ ಹಠವ್, ಸಂಪತ್ತಿಗೆ ಸವಾಲ್, ಹಾರಕೂಡು ಚನ್ನಬಸವೇಶ್ವರ ಮಹಾತ್ಮ, ಬಾಳಬೇಕಾದರೆ ತಾಳಬೇಕು, ನೀತಿಗೆಲ್ಲಿದೆ ಜಾತಿ ಹೀಗೆ ನೂರಕ್ಕೂ ಅಧಿಕ ಸಾಮಾಜಿಕ ನಾಟಕಗಳಲ್ಲಿ ನಟಿಸಿಲ್ಲದೆ ತಾವೇ ಸ್ವತಃ ನಿರ್ದೇಶಿಸಿದ್ದಾರೆ.


  ಇದನ್ನೂ ಓದಿ: Puneeth Rajkumar Temple: ಅಭಿಮಾನಿಯಿಂದ ಅಪ್ಪು ದೇವಸ್ಥಾನ ನಿರ್ಮಾಣ! ಬ್ರಹ್ಮ, ವಿಷ್ಣು, ಮಹೇಶ್ವರ ಎಲ್ಲಾ ನೀವೇ ಎಂದ ಫ್ಯಾನ್ಸ್


  ಓದಿದ್ದು ಕೇವಲ 7ನೇ ತರಗತಿಯಾದರೂ ನಾಟಕದ ಡೈಲಾಗ್​ಗಳನ್ನ ಸರಾಗವಾಗಿ ಹೇಳುತ್ತಿದ್ದ ಇವರ ಚಾತುರ್ಯಕ್ಕೆ ಇಡೀ ರಂಗಭೂಮಿಯ ಫಿದಾ ಆಗಿತ್ತು. ಇಂತಹ ಹಿರಿಯ ಮೇರು ನಟನಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದ್ದು ಕಲ್ಬುರ್ಗಿ ಮಾತ್ರವಲ್ಲ ಕಲ್ಯಾಣ ಕರ್ನಾಟಕ ಭಾಗಕ್ಕೆ ಖುಷಿ ತಂದಿದೆ.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: