ಕಲಬುರಗಿ: ಸಿಂಗಾರಗೊಂಡ ಎತ್ತಿನಗಾಡಿಯಲ್ಲಿ ಅಧಿಕಾರಿಗಳು. ಹಲಗೆ ಸದ್ದಿನ ಗೌಜಿ ಗದ್ದಲದ ಜೊತೆ ಮಕ್ಕಳ ಕೇಕೆ. ಭಿತ್ತಪತ್ರದ ಮೂಲಕ ಅದೇನೋ ಜಾಗೃತಿ ಸಾರೋ ಸಂದೇಶ. ನೋಡೋದಕ್ಕೆ ಮದುವೆ ದಿಬ್ಬಣದಂತೆ (Voting) ಕಂಡ್ರೂ ಇದು ಅದ್ಯಾವುದೂ ಅಲ್ಲ. ಬದಲಿಗೆ, ಇದು ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಯ (Karnataka Elections 2023) ಮತದಾನ ಜಾಗೃತಿಯ ಝಲಕ್.
ಯೆಸ್, ಮುಂದಿನ ವಾರ ರಾಜ್ಯಾದ್ಯಂತ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗವು ಭಾರೀ ಜನಜಾಗೃತಿ ಮೂಡಿಸುತ್ತಿದೆ. ಆಯಾಯ ಪ್ರದೇಶಕ್ಕನುಗುಣವಾಗಿ ಜಾಗೃತಿ ಮೂಡಿಸುತ್ತಿದೆ. ಅಂತೆಯೇ ಕಲಬುರಗಿಯಲ್ಲಿ ಸ್ವೀಪ್ ತಂಡ, ಜಿಲ್ಲಾಡಳಿತವು ಎತ್ತಿನ ಚಕ್ಕಡಿಗಳಿಗೆ ಶೃಂಗಾರ ಮಾಡಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು.
ಮತದಾನ ತಪ್ಪಿಸಬೇಡಿ
ಕಮಲಾಪುರ ತಾಲೂಕಿನ ಜಿವಣಗಿ ಗ್ರಾಮದಲ್ಲಿ ಮತದಾನ ಕುರಿತು ಜಾಗೃತಿ ಸಂದೇಶ ಬಿತ್ತರಿಸಿದರು. ಎಲ್ಲ ಮತದಾರರೂ ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: Kalaburagi News: ಕಲಬುರಗಿಯ 500ಕ್ಕೂ ಹೆಚ್ಚು ಮರಗಳಲ್ಲಿ ನೇತಾಡುತ್ತಿದೆ ಮಡಿಕೆ!
ಮತದಾನ ಜಾಗೃತಿ
ಜಿವಣಗಿ ಗ್ರಾಮದಲ್ಲಿ ಇಪ್ಪತ್ತಕ್ಕೂ ಅಧಿಕ ಎತ್ತಿನ ಬಂಡಿಗಳಿಗೆ ಮಾವಿನ ತೋರಣ ತೆಂಗಿನ ಗರಿಯನ್ನು ಕಟ್ಟಿ ಸ್ವತಃ ಅಧಿಕಾರಿಗಳೇ ಅದರಲ್ಲಿ ಸವಾರಿ ಮಾಡುವ ಮೂಲಕ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸುವ ಮೂಲಕ ಗಮನ ಸೆಳೆದರು.
ಸಾರ್ವಜನಿಕರ ಸಾಥ್
ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಮತ ಚಲಾಯಿಸುವ ಮೂಲಕ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು. ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೂಡಾ ಮತದಾನ ಜಾಗೃತಿಯಲ್ಲಿ ಕೈ ಜೋಡಿಸಿದರು.
ಇದನ್ನೂ ಓದಿ: Kalaburagi Dargah: ಇಲ್ಲಿ ಬೀಗ ಹಾಕಿದ್ರೆ ಸಾಕು ನೀವು ಬೇಡಿದ್ದು ಈಡೇರುತ್ತಂತೆ! ಇದು ಖಲೀಫತ್ ರೆಹಮನ್ ದರ್ಗಾದ ವಿಶೇಷ
ಒಟ್ಟಿನಲ್ಲಿ ಮೇ 10 ರಂದು ನಡೆಯಲಿರುವ ಮತದಾನದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಲು ಚುನಾವಣಾ ಆಯೋಗವು ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮ ಜನರನ್ನ ಆಕರ್ಷಿಸುತ್ತಿರುವುದು ಸುಳ್ಳಲ್ಲ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ