Kalaburagi Karate King: ಕರಾಟೆ ಕಿಂಗ್ ಅಂಬ್ರೇಶ್! ಕಲಬುರಗಿಯಲ್ಲಿ ಈಗ ಇವರದ್ದೇ ಹೆಸರು!

ಬಡ ಅನಾಥ ಹಾಗೂ ಅಂಧ ಮಕ್ಕಳಿಗೂ ತಾನು ಕಲಿತ ಕರಾಟೆಯನ್ನು ಕಲಿಸಿಕೊಡುವ ಮೂಲಕ ಅವರಲ್ಲೂ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವ ಸಾಧಕರ ವಿಡಿಯೋ ನೋಡಿ

ತಮ್ಮ ತಂಡದ ಜೊತೆ ಅಂಬ್ರೇಶ್

"ತಮ್ಮ ತಂಡದ ಜೊತೆ ಅಂಬ್ರೇಶ್"

 • Share this:
  ಕಲಬುರಗಿ: ಅವ್ರು ಫೋಟೋಗ್ರಾಫಿಯಲ್ಲಿ ಡಿಪ್ಲೋಮಾ ಪಡೆದು ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಕ್ಯಾಮರಾಮೆನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯುನ್ಮಾನ ಮಾಧ್ಯಮದ ಕ್ಯಾಮರಾಮೆನ್ ಆಗಿರುವುದರ ಜೊತೆಯಲ್ಲಿಯೇ ಅವರೊಬ್ರು ‘ಕರಾಟೆ ಕಿಂಗ್‘ ಆಗಿದ್ದಾರೆ. ಮಾಧ್ಯಮ ಸೇವೆಯೊಂದಿಗೆ ಕರಾಟೆ ಮಾಸ್ಟರ್ (Karate Master) ಆಗಿದ್ದು ನೂರಾರು ವಿದ್ಯಾರ್ಥಿಗಳಿಗೆ ಕರಾಟೆ ಕಲಿಸಿಕೊಡುತ್ತಿದ್ದಾರೆ. ಕ್ಯಾಮರಾಕ್ಕೂ ಸೈ. ಕರಾಟೆ ಪಂಚ್‍ಗೂ ಸೈ.. ತಮ್ಮಲ್ಲಿರುವ ಕರಾಟೆ ಕಲೆಯನ್ನು ಸಾವಿರಾರು ಮಕ್ಕಳಿಗೆ ಹೇಳಿ ಕೊಡುತ್ತಿದ್ದಾರೆ. ಎನ್ನುವ ಮೂಲಕ ಎರಡೂ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಹಾಗಾದ್ರೆ ಕ್ಯಾಮರಾ ಮತ್ತು ಕರಾಟೆ ಎರಡನ್ನೂ ನಿಭಾಯ್ತಿರೋ ಕಲಬುರಗಿಯ (Kalaburagi) ಈ ವಿಶಿಷ್ಟ ವ್ಯಕ್ತಿಯಾದ್ರೂ ಯಾರು? ಇಲ್ಲಿದೆ ನೋಡಿ

  ‘ಕರಾಟೆ ಕಿಂಗ್‘ ಎಂದೇ ಪ್ರಸಿದ್ಧಿ
  ಅವರ್ಯಾರು ಅಂತೀರಾ? ಅವರ ಹೆಸರು ಅಂಬ್ರೇಶ ಎನ್. ಜೋಗಿ ಅಂತ. ಇವರು ಕಲಬುರಗಿ ನಗರದ ಶರಣಸಿರಸಗಿ ಗ್ರಾಮದ ನಿವಾಸಿ. ಕಳೆದ ಹದಿನೈದು ವರ್ಷಗಳಿಂದ ಮಾಧ್ಯಮದ ಪ್ರಮುಖ ಅಂಗವಾಗಿರುವ ವಿದ್ಯುನ್ಮಾನ ಮಾಧ್ಯಮದಲ್ಲಿ ಕ್ಯಾಮರಾಮೆನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಯಲ್ಲಿಯೇ ಕರಾಟೆಯಲ್ಲಿ ಮಾಸ್ಟ್ ಆಗಿದ್ದುಕೊಂಡು ‘ಕರಾಟೆ ಕಿಂಗ್‘ ಎಂಬ ಹೆಸರು ಗಳಿಸಿದ್ದಾರೆ.

  ಅಂಬ್ರೇಶ್ ಅವರ ಸಂಪರ್ಕ ಸಂಖ್ಯೆ: 9738935902

  ಬ್ಲ್ಯಾಕ್ ಬೆಲ್ಟ್ ಅಂಬ್ರೇಶ್
  ಅಂಬ್ರೇಶ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಕರಾಟೆ ಬಗ್ಗೆ ಆಸಕ್ತಿ ಇತ್ತು. ಹೀಗಾಗಿ, 6ನೇ ತರಗತಿಯಲ್ಲಿ ಓದುತ್ತಿರುವಾಗಲೇ ಕರಾಟೆ ತರಬೇತಿ ಪಡೆಯಲು ಆರಂಭಿಸಿದರು. ಶ್ರೀ ಅಜಯಕುಮಾರ ಜಿ. ಚವ್ಹಾಣ್ ಎಂಬ ಕರಾಟೆ ಮಾಸ್ಟರ್ ಹತ್ತಿರ ಕರಾಟೆ ಕ್ಲಾಸ್‍ಗೆ ಸೇರಿಕೊಂಡರು. ಜೋಗಿಯ ಪರಿಶ್ರಮದಿಂದ ಬ್ಲಾಕ್ ಬೆಲ್ಟ್ ಸೇರಿದಂತೆ ಅನೇಕ ಸಾಧನೆ ಮಾಡುವ ಮೂಲಕ ಅಜಯಕುಮಾರ ಚವ್ಹಾಣ್ ಅವರ ಅಚ್ಚುಮೆಚ್ಚಿನ ಶಿಷ್ಯರಾದರು. ಕರಾಟೆಯಲ್ಲಿರುವ ಎಲ್ಲೋ, ವೈಟ್, ಗ್ರೀನ್ ಸೇರಿದಂತೆ ಎಲ್ಲಾ ಬೆಲ್ಟ್ ಗಳನ್ನು ಪಡೆದಿದ್ದಾರೆ. ಕರಾಟೆಯಲ್ಲಿಯೇ ಅತೀ ಹೆಚ್ಚಿನ ಗ್ರೇಡ್ ಹೊಂದಿರುವ ‘ಬ್ಲ್ಯಾಕ್ ಬೆಲ್ಟ್’ ಪಡೆಯುವ ಮೂಲಕ ಕರಾಟೆಯಲ್ಲಿ ಅತ್ಯುನ್ನತ ಸಾಧನೆಗೈದಿದ್ದಾರೆ.

  ಕ್ಯಾಮೆರಾಕ್ಕೂ ಜೈ
  ತಮ್ಮ ಪಿಯುಸಿವೆರೆಗೂ ಕರಾಟೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಜೋಗಿ ಅವರಿಗೆ ಫೋಟೋಗ್ರಾಫಿ, ವಿಡಿಯೋಗ್ರಾಫಿ ಅಂದ್ರೆ ಅಚ್ಚುಮೆಚ್ಚಿನದ್ದಾಗಿತ್ತು. ಹೀಗಾಗಿಯೇ ಅವರು ಹೈದರಾಬಾದಗೆ ತೆರಳಿ, ನಾಲ್ಕು ವರ್ಷಗಳ ಕಾಲ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಬಗ್ಗೆ ಅಧ್ಯಯನ ಮಾಡಿದರು. ನಂತರ ಅವರಿಗೆ ಮಾಧ್ಯಮ ಕ್ಷೇತ್ರದ ಸೆಳೆತ ಶುರುವಾಯಿತು.

  ಬಿಡದ ಕರಾಟೆ ಮೋಹ
  ಸದ್ಯ ರಾಷ್ಟ್ರೀಯ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮಗೆ ರಾಜ್ಯ ಮಟ್ಟದ ಮಾಧ್ಯಮದಲ್ಲಿ ಕೆಲಸ ಸಿಕ್ಕಿದೆ ಎಂದು ಅವರು ಕರಾಟೆ ಕೈಬಿಟ್ಟಿಲ್ಲ. ಎರಡಕ್ಕೂ ಅಷ್ಟೇ ಪ್ರಿಫರೆನ್ಸ್ ನೀಡಿ, ಎರಡನ್ನೂ ಪೋಷಿಸಿಕೊಂಡು ಬರುತ್ತಿದ್ದಾರೆ. ಕರಾಟೆಗೂ ಸೈ.. ಕ್ಯಾಮರಾಕ್ಕೂ ಜೈ ಎಂದು ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ.

  ಸಾವಿರಾರು ವಿದ್ಯಾರ್ಥಿಗಳಿಗೆ ಕರಾಟೆ ಗುರು
  ನೂರಾರು ವಿದ್ಯಾರ್ಥಿಗಳಿಗೆ ಕರಾಟೆ ಕಲಿಸಿಕೊಡುತ್ತಿರುವ ಅಂಬ್ರೇಶ ಜೋಗಿ.. ಅಂಬ್ರೇಶ ಜೋಗಿ ಅವರು ಕಳೆದ 22 ವರ್ಷಗಳಿಂದಲೂ ಕರಾಟೆ ಕ್ಷೇತ್ರದಲ್ಲಿದ್ದಾರೆ. ತಾವು 6ನೇ ತರಗತಿ ಓದುತ್ತಿದ್ದಾಗಿನಿಂದ ಇಲ್ಲಿತನಕವೂ ಕರಾಟೆ ಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ತಮ್ಮ ಗುರುಗಳಾದ ವಿಜಯಕುಮಾರ ಜಿ.ಚವ್ಹಾಣ್ ಅವರ ಮಾರ್ಗದರ್ಶನದಲ್ಲಿ ಪ್ರಾರಂಭ ಮಾಡಿದ್ದ ಇವರದ್ದೇ ಆದ ಕರಾಟೆ ತರಬೇತಿ ಕೇಂದ್ರದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಳಿದ್ದಾರೆ ಅನ್ನೋದು ಇವರ ಕರಾಟೆಯಲ್ಲಿನ ಸಾಧನೆ ಹಾಗೂ ಶ್ರಮಕ್ಕೆ ಸಾಕ್ಷಿಯಾಗಿದೆ. ಸದ್ಯ ಕಲಬುರಗಿ ನಗರದ ನಾಲ್ಕೈದು ಕಡೆಗಳಲ್ಲಿ ಕರಾಟೆ ಕ್ಲಾಸ್ ಅನ್ನು ನಡೆಸುತ್ತಿದ್ದಾರೆ. ಇವರ ಶಿಷ್ಯ ಉಮೇಶ ಬ್ಲ್ಯಾಕ್ ಬೆಲ್ಟ್ ಪಡೆದು ಸಾಧನೆ ಮಾಡಿದ್ದಾನೆ. ಇನ್ನೂ ಏಳೆಂಟು ಜನ ವಿದ್ಯಾರ್ಥಿಗಳು ಬ್ಲ್ಯಾಕ್ ಬೆಲ್ಟ್ ಗಾಗಿ ಕಸರತ್ತು ನಡೆಸುತ್ತಿದ್ದಾರೆ.

  ಇದನ್ನೂ ಓದಿ: Vijayapura Muharram: ಮುಸ್ಲಿಮರೇ ಇಲ್ಲದ ಊರಲ್ಲಿ ಹಿಂದೂಗಳಿಂದ ಮೊಹರಂ! ವೀಡಿಯೋ ನೋಡಿ

  ಹೆಣ್ಮಕ್ಕಳಿಗೆ ಕರಾಟೆ ಆದ್ಯತೆ
  ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇದನ್ನರಿತ ಅಂಬ್ರೇಶ ಜೋಗಿ ಅವರು, ಹೆಣ್ಣು ಮಕ್ಕಳಿಗೆ ಕರಾಟೆ ಕಲಿಕೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ರಕ್ಷಣಾ ಕಲೆಯಾಗಿರುವ ಕರಾಟೆ ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳಿಗೆ ಅತ್ಯವಶ್ಯಕವಾಗಿದೆ. ಹೀಗಾಗಿ, ಜೋಗಿ ಅವರು ಹೆಣ್ಣು ಮಕ್ಕಳಿಗೆ ಹೆಚ್ಚಿನ ಒತ್ತು ಕೊಟ್ಟು ಕರಾಟೆ ಕಲಿಸಿಕೊಡುತ್ತಿದ್ದಾರೆ. ಕರಾಟೆ ಕಲಿಕೆಗೆ ಪಾಲಕರು ಕಳುಹಿಸದೇ ಇದ್ರೆ ಅವರ ಮನೆಗೆ ಹೋಗಿ ಪಾಲಕರ ಮನವೊಲಿಸಿ, ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುತ್ತಿದ್ದಾರೆ.

  ಇದನ್ನೂ ಓದಿ: Vijayapura: 75 ಕಿಲೋಮೀಟರ್, 8 ದಿನ, 10 ಸಾವಿರಕ್ಕೂ ಹೆಚ್ಚು ಜನ! ವಿಜಯಪುರದಲ್ಲಿ ವಿಶೇಷ ಪಾದಯಾತ್ರೆ!

  ಅಂಧ, ಅನಾಥ ಮಕ್ಕಳಿಗೆ ಉಚಿತ ತರಬೇತಿ
  ಇನ್ನೊಂದು ವಿಷೇಶವೆಂದರೆ. ತಮ್ಮ ಕರಾಟೆ ಶಿಕ್ಷಕರಾದ ಅಜಯಕುಮಾರ್ ಚವ್ಹಾಣ್ ಅವರ ನಿಧನದ ನಂತರ ಅವರ ಹೆಸರಿನಲ್ಲಿ ಅಜಯಕುಮಾರ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಸ್ಥಾಪಿಸಿ ಜಿಲ್ಲೆಯ ಕರಾಟೆ ತಮಬೇತಿ ನೀಡುತ್ತಿದ್ದಾರೆ. ಜೊತೆಗೆ ಅಂಧ ಮಕ್ಕಳಿಗೆ,ಅನಾಥಾಶ್ರಮದ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ.

  ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ
  Published by:guruganesh bhat
  First published: