ಕಲಬುರಗಿ: ಇದು ಹತ್ತೂರು ಕಾಯೋ ಒಡೆಯನ ದೇಗುಲ. ಆದ್ರೆ ಶಕ್ತಿಯ ಆರಾಧಕರಿಗೂ (Kanthi Hanuman) ದೂರವಾಗಿದ್ಧಾನೆ ನೋಡಿ ಹನುಮಂತ. ಊರು ಕಾಯೋ ಆಂಜನೇಯ ಸ್ವಾಮಿಯೇ (Anjaneya Swamy) ಇಲ್ಲಿ ಅನಾಥವಾಗಿದ್ದಾನೆ. ಅದ್ಯಾವ ಊರು ಅಂತೀರಾ? ಹೇಳ್ತೀವಿ ನೋಡಿ.
ಅನಾಥನಾದ ಆಂಜನೇಯ!
ವೀರ ಆಂಜನೇಯ ಅಂದ್ರೆ ಇಡೀ ಊರನ್ನೇ ರಕ್ಷಣೆ ಮಾಡುವ ವಾಯುಪುತ್ರ, ಭಕ್ತರ ಪಾಲಿನ ಆರಾಧ್ಯ ದೈವ. ಆದರೆ, ಕಲಬುರಗಿ ಜಿಲ್ಲೆಯ ಫರತಾಬಾದ್ ಬಳಿಯ ಅರಕೇರಿ ಎಂಬ ಗ್ರಾಮದಲ್ಲಿರೋ ಈ ಆಂಜನೇಯನಿಗೆ ಮಾತ್ರ ಪುರಾತನ ಕಟ್ಟಡ. ಅಷ್ಟೇ ಅಲ್ಲ, ಇಲ್ಲಿಗೆ ಆಗಮಿಸೋ ಭಕ್ತರ ಸಂಖ್ಯೆಯೂ ಅಷ್ಟಕ್ಕಷ್ಟೇ. ಕಂಠಿ ಆಂಜನೇಯ ಸ್ವಾಮಿ ದೇವಸ್ಥಾನ ಎಂದೇ ಪ್ರಸಿದ್ಧಿ ಪಡೆದಿರುವ ಈ ದೇಗುಲ ಅಕ್ಷರಶಃ ನಿರ್ವಹಣೆ ಇಲ್ಲದೆ ಅನಾಥವಾಗಿದೆ.
ಇದಕ್ಕೊಂದು ಕಾರಣನೂ ಇದೆ
ಹಲವು ವರ್ಷಗಳ ಹಿಂದೆ ಇಲೊಂದು ಅರಕೇರಿ ಗ್ರಾಮದ ಮಧ್ಯದಲ್ಲಿ ಆಂಜನೇಯ ಸ್ವಾಮಿಯ ದೇವಸ್ಥಾನ ಇತ್ತು. ಕಾರಣಾಂತರಗಳಿಂದ ಅರಿಕೇರಿ ಗ್ರಾಮವು ಹೆದ್ದಾರಿಗೆ ಹೊಂದಿಕೊಂಡಿರುವ ಫರತಾಬಾದ್ ಗ್ರಾಮದಲ್ಲಿ ವಿಲೀನವಾಯಿತು. ಗ್ರಾಮಸ್ಥರೆಲ್ಲ ಅರಿಕೇರಿಯನ್ನು ಬಿಟ್ಟು ಫರತಾಬಾದ್ಗೆ ಶಿಫ್ಟ್ ಆದರಂತೆ. ಆಗ ಕಂಠಿ ಹನುಮಾನ ದೇವಸ್ಥಾನವನ್ನು ವಿಗ್ರಹವನ್ನು ಕೂಡ ಫರತಾಬಾದ್ನಲ್ಲಿ ಗುಡಿ ನಿರ್ಮಿಸಿ ವಿಗ್ರಹವನ್ನು ಅಲ್ಲಿಗೆ ಸ್ಥಳಾಂತರಿಸಲು ಮುಂದಾದ್ರಂತೆ. ಈ ವೇಳೆ ಸ್ಥಳಾಂತರಿಸಲು ಆಗಮಿಸಿದವರು ದೃಷಿದೋಷ ಎದುರಿಸುವಂತಾಗಿತ್ತು ಎಂಬುವುದು ಇಲ್ಲಿನ ಹಿರಿಯರು ಹೇಳುತ್ತಾರೆ.
ಕಂಠಿ ಹನುಮ ಎಂದೇ ಹೆಸರಾಯ್ತು!
ನಂತರದ ದಿನಗಳಲ್ಲಿ ಸುತ್ತಲೂ ಮುಳ್ಳು ಕಂಟಿಗಳು ಬೆಳೆದು ನಿಂತವು. ಯಾರೂ ಇತ್ತ ಕಡೆ ತಲೆ ಹಾಕಿ ನೋಡಲಿಲ್ಲ. ನಿರ್ವಹಣೆ ಇಲ್ಲದೇ ಎಲ್ಲವೂ ಅಸ್ತವ್ಯಸ್ತವಾಯಿತು. ಅಂದಿನಿಂದ ಈ ದೇವಸ್ಥಾನಕ್ಕೆ ‘‘ಕಂಠಿ ಹನುಮಾನ್‘‘ ದೇವಸ್ಥಾನ ಎಂದೇ ಹೆಸರೂ ಬಂತು.
ವಿಭಿನ್ನ ಆಕಾರದ ಆಂಜನೇಯ
ಅರಕೇರಿಯ ಕಂಠಿ ಹನುಮಾನ್ ದೇವಸ್ಥಾನ ನೂರಾರು ವರ್ಷಗಳ ಹಳೆಯ ಕಟ್ಟಡ ಹೊಂದಿರುವುದರಿಂದ ಇದು 600 ವರ್ಷಕ್ಕೂ ಹಳೆಯ ದೇವಾಲಯ ಎಂದು ಊಹಿಸಲಾಗಿದೆ. ಗರ್ಭಗುಡಿಯಲ್ಲಿರುವ ಹನುಮಾನ್ ದೇವರ ವಿಗ್ರಹ ಕೂಡ ವಿಭಿನ್ನ ಆಕಾರವನ್ನು ಹೊಂದಿರುವುದು ಗಮನಾರ್ಹ.
ಹನುಮಂತನಿಗೆ ಆಸರೆಯಾದ ಅಜ್ಜ!
ವಿಶೇಷ ಅಂದ್ರೆ, ಊರು ಸ್ಥಳಾಂತರವಾದ ಬಳಿಕ ಅನಾಥವಾಗಿದ್ದ ಹನುಮಾನ್ ದೇವರಿಗೆ ಆಸರೆಯಾಗಿದ್ದು ಫರತಾಬಾದ್ ಗ್ರಾಮದ ನಿವಾಸಿ, ವೃದ್ಧ ಶರಣಯ್ಯ ಸ್ವಾಮಿ ಎಂಬುವವರು. ಶರಣಯ್ಯನವರು ದಿನದ 24ಗಂಟೆ ಇಲ್ಲಿ ಇದ್ದು. ದೇವಸ್ಥಾನ ಶುಭ್ರವಾಗಿಡುವುದು ಹಾಗೂ ಪ್ರತಿನಿತ್ಯವು ಪೂಜೆಯನ್ನು ಮಾಡುತ್ತಾರೆ. ದೈವಾರಾಧಕರಾಗಿ ಅಲ್ಲಿಯೇ ವಾಸವಿದ್ದಾರೆ.
ಇದನ್ನೂ ಓದಿ: Kalaburagi: ಮನೆಯೊಂದು 101 ಬಾಗಿಲು! ಕಲಬುರಗಿಯಲ್ಲೊಂದು ವಿಶಿಷ್ಟ ಮನೆ
ಹಳೆಯ ವೈಭವಕ್ಕೆ ಮಾರುತಿ!
ಸಮಾಧಾನದ ಸಂಗತಿ ಅಂದ್ರೆ ಹಲವು ವರ್ಷಗಳ ಕಾಲ ನಿರ್ವಹಣೆ ಕಾಣದೆ ಪಾಳು ಬಿದ್ದಿದ್ದ ದೇವಾಲಯ ಇದೀಗ ಭಕ್ತರನ್ನ ಎದುರು ನೋಡುತ್ತಿದೆ. ಕಲಬುರಗಿ ಅಷ್ಟೇ ಅಲ್ದೇ ರಾಜ್ಯದ ನಾನಾ ಭಾಗದಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಒಟ್ಟಿನಲ್ಲಿ ಕೊನೆಗೂ ಆಂಜನೇಯನ ಮಹಿಮೆಯನ್ನ ಜನರು ಕಂಡುಕೊಂಡಿದ್ದು ಮತ್ತೊಮ್ಮೆ ಹಳೆಯ ವೈಭವಕ್ಕೆ ಮರಳುವ ಕ್ಷಣಕ್ಕಾಗಿ ವೀರ ಮಾರುತಿಯೂ ಕಾಯುತ್ತಿದ್ಧಾನೆ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ