Kamalapur Red Banana: ಕಮಲಾಪುರದ ಕೆಂಪುಬಾಳೆ! ತಿಂದರೆ ತಿಂತಾನೇ ಇರ್ತೀರಿ, ಅಷ್ಟು ರುಚಿ!

Kalaburagi Kamalapur: ಕೆಂಪು ಬಾಳೆ ನೀವೆಲ್ಲ ನೋಡಿರ್ತಿರ, ಆದರೆ ಕಲಬುರಗಿಯ ಕಮಲಾಪುರದಲ್ಲಿ ಬೆಳೆಯೋ ಈ ಕೆಂಪು ಬಾಳೆ ಅತ್ಯಂತ ಟೇಸ್ಟಿ ಮತ್ತು ಆರೋಗ್ಯಪೂರ್ಣ. ಹಾಗಾದ್ರೆ ಹೇಗಿರುತ್ತೆ ಈ ಬಾಳೆಹಣ್ಣು? ನೀವೇ ವಿಡಿಯೋ ನೋಡಿ

ಕಲಬುರಗಿ ಕೆಂಪು ಬಾಳೆ

"ಕಲಬುರಗಿ ಕೆಂಪು ಬಾಳೆ"

 • Share this:
  ಕಲಬುರಗಿ: ಕಾಮನ್ ಆಗಿ ಬಾಳೆಹಣ್ಣು, ನಲವತ್ತೋ. ಇಲ್ಲವೇ ಐವತ್ತು ರೂ. ಗೆ ಡಜನ್ ಇರೋದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದ್ರೆ ಇಲ್ಲೊಂದು ಸ್ಪೆಷಲ್ ಬಾಳೆ ಹಣ್ಣಿದೆ. ಅದು ಡಜನ್​ಗೆ 150 ರಿಂದ 200 ರೂಪಾಯಿಗೆ ಮಾರಾಟವಾಗುತ್ತವೆ. ಅರೇ ಅಂತ ಹುಬ್ಬೇರಿಸ್ತಿರಾ? ಹೌದು, ಅದು ಎಷ್ಟೇ ಕಾಸ್ಟ್ಲೀ ಆಗಿದ್ರೂ ಜನ ಇಷ್ಟಪಟ್ಟು ಖರೀದಿ ಮಾಡ್ತಾರೆ. ಅದರಲ್ಲಿ ಔಷಧಿ ಗುಣವಿದ್ದು ಸಾಕಷ್ಟು ರೋಗಗಳಿಗೆ ರಾಮಬಾಣವಾಗಿದೆ ಅನ್ನೋದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಅದ್ಯಾವ ಬಾಳೆಹಣ್ಣು (Banana) ಅಂತಿರಾ? ಅಷ್ಟಕ್ಕೂ ಇಷ್ಟು ಕ್ವಾಸ್ಟ್ಲಿ ಯಾಕೆ ಅಂತೀರಾ? ಇದು ಕಲಬುರಗಿ ಜಿಲ್ಲೆಯ (Kalaburagi) ಕಮಲಾಪುರದ ಕೆಂಪು ಬಾಳೆ! (Kamalapur Red Banana) ಇದರ ವಿಶೇಷ ಅಂತಿಂತ್ತದಲ್ಲ!

  ಕಮಲಾಪುರ ಬಾಳೆ
  ಎತ್ತರವಾಗಿ ಬೆಳೆದು ನಿಂತಿರೋ ಬಾಳೆ ದಿಂಡು...ಬಾಳೆ ದಿಂಡಿಗೆ ನೇತಾಡುತ್ತಿರುವ ಕೆಂಪು ಬಾಳೆ ಗೊನೆ. ಇಷ್ಟಾಪಟ್ಟು ಖರೀದಿ ಮಾಡ್ತಿರೋ ಜನರು. ಇದೇ ಸ್ಪೆಷಲ್ ಕೆಂಪು ಬಾಳೆ ಹಣ್ಣು. ಇದು ಸಿಗೋದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನಲ್ಲಿ ಮಾತ್ರ. ಇದು ಕೆಂಪು ಬಾಳೆ ಹಣ್ಣಾಗಿದ್ರೂ ಇದಕ್ಕೆ ಯಾರೂ ಕೆಂಪು ಬಾಳೆಹಣ್ಣು ಅಂತ ಕರೆಯಲ್ಲ; ಬದಲಾಗಿ ಕಮಲಾಪುರದ ಬಾಳೆ ಹಣ್ಣು ಅಂತಾನೇ ಫೇಮಸ್ ಆಗಿದೆ.

  ಇಲ್ಲೆಲ್ಲ ಬೆಳೆಯುತ್ತಾರೆ ಕೆಂಪು ಬಾಳೆ
  ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕು ಇದೇ ಬಾಳೆ ಹಣ್ಣಿಗೆ ತುಂಬಾ ಫೇಮಸ್ ಆಗಿದೆ. ಕಮಲಾಪೂರ ಸುತ್ತಮುತ್ತಲಿನ ರಾಜನಾಳ, ಓಕ್ಳಿ, ಭುಂಯಾರ್ ಸೇರಿದಂತೆ ಹತ್ತಾರು ಹಳ್ಳಿಗಳ ರೈತರು ಇದೇ ಬಾಳೆ ಹಣ್ಣನ್ನು ಬೆಳೆಯುತ್ತಾರೆ.

  Kamalapur Red Banana
  ಕಮಲಾಪುರಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಕೆಂಪು ಬಾಳೆ ರೋಗಕ್ಕೆ ರಾಮಬಾಣ
  ಕೆಂಪು ಬಾಳೆ ಹಣ್ಣು ನೋಡಲು ಚಿಕ್ಕದ್ದಾಗಿ ಕಂಡರೂ ಅದರಲ್ಲಿ ಸಾಕಷ್ಟು ಔಷಧಿಯ ಗುಣವನ್ನು ಹೊಂದಿದೆ ಎನ್ನೋದು ಈಗಾಗಲೇ ವೈಜ್ಞಾನಿಕವಾಗಿ ದೃಢಪಟ್ಟಿದೆ. ಬಿಪಿ, ಶುಗರ್ ಸೇರಿದಂತೆ ದೈಹಿಕವಾಗಿಯೂ ಈ ಬಾಳೆ ಹಣ್ಣು ರಾಮಬಾಣವಾಗಿದೆ. ಹೀಗಾಗಿಯೇ 150 ರಿಂದ 200 ರೂಪಾಯಿ ಡಜನ್ ಇದ್ರೂ ಜನರು ಇಷ್ಟಾಪಟ್ಟು ಈ ಬಾಳೆ ಹಣ್ಣನ್ನು ಖರೀದಿ ಮಾಡಿಕೊಂಡು ಹೋಗ್ತಾರೆ.

  ಕೆಂಪು ಬಾಳೆಹಣ್ಣು ಹವಾ
  ಇನ್ನು ಇಲ್ಲಿ ಬೆಳೆದ ಬಾಳೆ ಹಣ್ಣು ಕರ್ನಾಟಕ ರಾಜ್ಯವಲ್ಲದೇ ಪಕ್ಕದ ಮಹಾರಾಷ್ಟ್ರ, ಆಂದ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಾರಾಟವಾಗುತ್ತದೆ. ಇನ್ನು ಕೆಲವರು ಈ ಬಾಳೆ ಹಣ್ಣಿನಲ್ಲಿ ಔಷಧಿ ಗುಣ ಇದೆ ಅಂತ ಕಮಲಾಪುರಕ್ಕೆ ಜನರು ಬಂದು ಖರೀದಿ ಮಾಡಿಕೊಂಡು ಬರ್ತಾರೆ.

  ಇದನ್ನೂ ಓದಿ: Indian Flag in Kalaburagi: ಅಬ್ಬಬ್ಬಾ! ರಾಷ್ಟ್ರಧ್ವಜದ ಗಾತ್ರವೇ ಅಚ್ಚರಿ ಹುಟ್ಟಿಸುತ್ತೆ! ವಿಡಿಯೋ ನೋಡಿ

  ಕಮಲಾಪೂರ ಸುತ್ತಮುತ್ತಲೂ ಎಲ್ಲಿ ನೋಡಿದ್ರೂ ಇದೇ ಬಾಳೆ ಹಣ್ಣುಗಳು ಕಣ್ಣಿಗೆ ಕಾಣಿಸುತ್ತವೆ. ನೂರಾರು ಎಕರೆ ಪ್ರದೇಶದಲ್ಲಿ ರೈತರು ಬಾಳೆಯನ್ನು ಬೆಳೆಯುತ್ತಾರೆ. ಇಲ್ಲಿಯ ರೈತರು ತಮಗೆ ಒಂದು ಎಕರೆ ಜಮೀನಿದ್ರು ಕೂಡ ಈ ಕೆಂಪು ಬಾಳೆಯನ್ನೇ ಬೆಳೆಯುತ್ತಾರೆ. ಇದಲ್ಲದೇ ಈ ಕೆಂಪು ಬಾಳೆ ಹಣ್ಣನ್ನು ರಾಷ್ಟ್ರಿಯ ಬೆಳೆಯನ್ನಾಗಿ ಘೋಷಣೆ ಮಾಡಿದ್ದಾರೆ ಎನ್ನುತ್ತಾರೆ ರೈತರು.

  ಕಮಲಾಪುರ ಮಣ್ಣಿನ ಗುಣ.!
  ಬೇರೆ ಬಾಳೆ ಮರಗಳಿಗಿಂತಲೂ ಈ ಮರ ಎತ್ತರವಾಗಿ ಬೆಳೆಯುತ್ತದೆ. ಹಣ್ಣುಗಳು ಮಾತ್ರ ಚಿಕ್ಕದ್ದಾಗಿರುತ್ತವೆ. ಇನ್ನು ಕಲರ್ ನಲ್ಲಿ ಎಲ್ಲಾ ಬಾಳೆ ಹಣ್ಣುಗಳು ಹಸಿರಾಗಿದ್ರೇ ಕಮಲಾಪೂರ ಬಾಳೆ ಹಣ್ಣು ಮಾತ್ರ ಕೆಂಪಾಗಿರುತ್ತದೆ. ಈ ಬಾಳೆ ಹಣ್ಣು ಇಲ್ಲಿಯ ಮಣ್ಣಿನಲ್ಲಿ ಮಾತ್ರ ಬೆಳೆಯುತ್ತದೆ. ಬೇರೆ ಯಾವ ಪ್ರದೇಶದಲ್ಲಿಯೂ ಇದು ಬೆಳೆಯೋದಿಲ್ಲ ಎನ್ನೋದು ಸ್ಥಳೀಯರ ಅಭಿಪ್ರಾಯ.

  ಇದನ್ನೂ ಓದಿ: Kalaburagi Rotti Mahadevi: ರೊಟ್ಟಿ ಮಾಡೋ ಮಹಾತಾಯಿ ಕಲಬುರಗಿಯ ಮಹಾದೇವಿ! ಇವರ ಸಕ್ಸಸ್ ಕಥೆ ಕೇಳಿ

  ಒಟ್ಟಾರೆಯಾಗಿ ನಾನಾ ರೋಗಗಳಿಗೆ ರಾಮಬಾಣವಾಗಿರುವ ಕೆಂಪು ಬಾಳೆ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಈ ಬಾಳೆ ಹಣ್ಣಿಗೆ ಬೌಗೋಳಿಕ ಮಾನ್ಯತೆ ಕೂಡ ಲಭಿಸಿದ್ದು. ಎಷ್ಟೇ....! ಕಾಸ್ಟ್ಲೀ ಇದ್ದರೂ ಜನರು ಖರೀದಿ ಮಾಡಿಕೊಂಡು ಹೋಗ್ತಾರೆ. ಅಲ್ಲದೇ ಇದೆ ಬಾಳೆ ಹಣ್ಣು ಕಮಲಾಪೂರ ರೈತರ ಹೊಟ್ಟೆ ತುಂಬಿಸುತ್ತದೆ.

  ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ
  Published by:guruganesh bhat
  First published: