ಕೆಂಪಾದವೋ ಎಲ್ಲ ಕೆಂಪಾದವೋ, ಹಸಿರ ಬಾಳೆತೋಟದಲ್ಲಿ ಹಣ್ಣುಗಳೆಲ್ಲವೂ ಕೆಂಪಾದವೋ. ಹೌದು, ಅಪರೂಪದ ಬಾಳೆಹಣ್ಣು ಬೆಳೆಯೋ ಈ ಊರಲ್ಲಿ ಬಾಳೆಹಣ್ಣುಗಳೆಲ್ಲವೂ ಕೆಂಬಾಳೆಗಳು. ಎತ್ತರವಾಗಿ ಬೆಳೆದ ಗಿಡದಲ್ಲಿ ಕೆಂಪುಗೊನೆ (Red Banana) ಕಾಣ ಸಿಗುವುದೇ ಇಲ್ಲಿನ ವಿಶೇಷ. ರೇಟ್ ಸ್ವಲ್ಪ ಜಾಸ್ತಿ ಆದ್ರೂ, ಇದರಲ್ಲಿರೋ ಆರೋಗ್ಯದ ಗುಟ್ಟು ಅರಿತವರು ಈ ಬಾಳೆಹಣ್ಣು (Red Banana Benefits) ತಿನ್ನದೇ ಇರೋದೇ ಇಲ್ಲ! ಯೆಸ್, ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿ ಬೆಳೆಯೋ ಈ ಕೆಂಬಾಳೆ ಕಮಲಾಪುರ ಬಾಳೆ (Kamalpur Red Banana) ಅಂತಾನೇ ಹೆಸರು.
ನೋಡೋಕೆ ಸಣ್ಣಗಾತ್ರದ ಈ ಬಾಳೆಹಣ್ಣುಗಳು ಸಾಮಾನ್ಯ ಬಾಳೆಹಣ್ಣಿಗಿಂತಲೂ ಹೆಚ್ಚು ಔಷಧೀಯ ಗುಣ ಹೊಂದಿವೆ ಅಂತಾರೆ ಸ್ಥಳೀಯರು. ಹಾಗಾಗಿ ಮಾರ್ಕೆಟ್ನಲ್ಲಿ ಈ ಕೆಂಪು ಬಾಳೆಹಣ್ಣಿನ ಬಗ್ಗೆ ಗೊತ್ತಿದ್ದವರು ಖರೀದಿಸಲು ಮುಗಿಬೀಳ್ತಾರಂತೆ.
ಇದನ್ನೂ ಓದಿ: Ganagapura: ಭಕ್ತರ ಕಾಯುವ ಗಾಣಗಾಪುರ ದತ್ತ ಪಾದುಕೆ, ವರ್ಷದಲ್ಲಿ 2 ಬಾರಿ ರಥೋತ್ಸವ ನಡೆಯುವ ಸನ್ನಿಧಿ
ಕೆಲವೇ ಕೆಲವು ಹಳ್ಳಿಗಳಲ್ಲಿ ಬೆಳೆಯುವ ಬಾಳೆಹಣ್ಣು
ವಿಶೇಷ ಅಂದ್ರೆ ಈ ಬಾಳೆಹಣ್ಣನ್ನ ಕಮಲಾಪೂರ ಸುತ್ತಮುತ್ತಲಿನ ರಾಜನಾಳ, ಓಕ್ಳಿ, ಭುಂಯಾರ್ ಸೇರಿದಂತೆ ಹತ್ತಾರು ಹಳ್ಳಿಗಳ ರೈತರು ಮಾತ್ರ ಬೆಳೆಯುತ್ತಾರೆ. ಕಮಲಾಪುರ ಸುತ್ತಮುತ್ತಲಿನ ಮಣ್ಣನ್ನ ಬಿಟ್ಟು ಬೇರೆ ಯಾವ ಪ್ರದೇಶದಲ್ಲಿಯೂ ಇದು ಬೆಳೆಯೋದಿಲ್ಲ ಅನ್ನೋದು ಸ್ಥಳೀಯರ ಅಭಿಪ್ರಾಯ.
ಎಷ್ಟೇ ತುಟ್ಟಿದ ಇದ್ರೂ ಖರೀದಿಯಾಗುತ್ತೆ
ಕಮಲಾಪುರ ಬಾಳೆ ಹಣ್ಣು ಡಜನ್ಗೆ 150ರಿಂದ 200 ರೂಪಾಯಿವರೆಗೂ ಮಾರಾಟವಾಗುತ್ತೆ, ಎಷ್ಟೇ ತುಟ್ಟಿ ಇದ್ರೂ ಜನ ಈ ಬಾಳೆಹಣ್ಣನ್ನ ಇಷ್ಟಪಟ್ಟು ಖರೀದಿ ಮಾಡ್ತಾರೆ. ಬಿಪಿ, ಶುಗರ್ ಸೇರಿದಂತೆ ಇತರೆ ರೋಗಗಳಿಗೂ ಈ ಬಾಳೆಹಣ್ಣು ಬೆಸ್ಟ್ ಅನ್ನೋದೇ ಇದಕ್ಕೆ ಕಾರಣ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಸೇರ್ದಂತೆ ಹಲವು ರಾಜ್ಯಗಳಿಗೂ ಕಮಲಾಪುರದ ಕೆಂಬಾಳೆ ರಫ್ತಾಗುತ್ತಂತೆ.
ಇದನ್ನೂ ಓದಿ: Koranti Hanuman: ಮಹಾಮಾರಿ ದೂರ ಮಾಡುವ ಕೋರಂಟಿ ಹನುಮಾನ್!
ಒಟ್ಟಾರೆಯಾಗಿ ನಾನಾ ರೋಗಗಳಿಗೆ ರಾಮಬಾಣವಾಗಿರುವ ಕೆಂಪು ಬಾಳೆಹಣ್ಣಿಗೆ ಇರೋ ಬೇಡಿಕೆ ಅಷ್ಟಿಷ್ಟಲ್ಲ. ಎಷ್ಟೇ ಕಾಸ್ಟ್ಲೀ ಇದ್ದರೂ ಜನರು ಖರೀದಿ ಮಾಡಿಕೊಂಡು ಹೋಗ್ತಾರೆ. ಅಲ್ಲದೇ ಇದೇ ಬಾಳೆ ಹಣ್ಣು ಕಮಲಾಪುರ ರೈತರ ಅನ್ನದ ತಟ್ಟೆಯೂ ಆಗಿದೆ ಅನ್ನೋದು ಕೂಡಾ ಅಷ್ಟೇ ಸತ್ಯ..
ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ