ಹೋಟೆಲ್ಗಳಲ್ಲಿ ಆಹಾರ ಇಡೋ ಫ್ರಿಡ್ಜ್ ನೋಡಿದ್ದೀವಿ. ಆದ್ರೆ ಇಲ್ಲಿ ಮಾತ್ರ ರಸ್ತೆ ಪಕ್ಕದಲ್ಲೇ ಇದೆ ಫ್ರಿಡ್ಜ್. ಹೌದು, ಕಣ್ರೀ ಹೀಗೂ ಜನಸೇವೆ ಮಾಡಲು ಸಾಧ್ಯ ಅನ್ನೋದನ್ನ ಈ ಹೋಟೆಲ್ ಮಾಲೀಕರೊಬ್ಬರು ತೋರಿಸಿಕೊಟ್ಟಿದ್ದಾರೆ. ಹೀಗೆ ಹೊರಗಡೆ ಇಡಲಾದ ಐಷಾರಾಮಿ ಫ್ರಿಡ್ಜ್ (Fridge) ಬಡಬಗ್ಗರು, ನಿರ್ಗತಿಕರಿಗಾಗಿಯೇ ಇಟ್ಟಿರೋದು. ಹಸಿದ ಹೊಟ್ಟೆಯನ್ನ ತಣ್ಣಗೆ ಮಾಡೋದು ಈ ಫ್ರಿಡ್ಜ್ ಇರಿಸಿರುವ ಉದ್ದೇಶ. ರಾತ್ರಿ ವೇಳೆ ಹೋಟೆಲ್ಗಳು ಬಂದ್ ಆಗಿರೋದ್ರಿಂದ ಅದೆಷ್ಟೋ ಜನರು ಹೋಟೆಲ್ಗಾಗಿ ತಡಕಾಡಬೇಕಾಗುತ್ತೆ. ಅಂತಹವರಿಗೆ ಸಹಾಯವಾಗಲೆಂದು ಕಲಬುರಗಿಯ (Kalaburagi News) ಕಮಲ್ ಹೊಟೇಲ್ (Kamal Hotel) ಈ ಪ್ರಯೋಗಕ್ಕೆ ಕೈಹಾಕಿದೆ.
ಸಾಮಾನ್ಯವಾಗಿ ಈ ಫ್ರಿಡ್ಜ್ ದಿನದಲ್ಲಿ ಉಳಿದ ಆಹಾರ ಪದಾರ್ಥಗಳನ್ನ ಇಡಲಾಗುತ್ತೆ. ಯಾರಾದರೂ ನಿರ್ಗತಿಕರು ಅಥವಾ ಪರವೂರಿನಿಂದ ಹಸಿದು ಬಂದವರಿಗಾಗಿ ಈ ಫ್ರಿಡ್ಜ್ ಸದಾ ಮುಕ್ತವಾಗಿರುತ್ತೆ.
ಉಳಿದ ಆಹಾರ ವೇಸ್ಟ್ ಮಾಡ್ಬೇಡಿ
ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆಯೇ ಇದೆ ಈ ಕಮಲ್ ಹೋಟೆಲ್. ರಾತ್ರಿ ವೇಳೆ ಹೋಟೆಲ್ನಲ್ಲಿ ಉಳಿದ ಆಹಾರವನ್ನು ಕಸದ ತೊಟ್ಟಿಗೆ ಬಿಸಾಡೋ ಬದಲು ಫ್ರಿಡ್ಜ್ನಲ್ಲಿ ಇಟ್ರೆ ಸಹಾಯವಾಗುತ್ತೆ ಅನ್ನೋ ಯೋಚನೆಯಿಂದ ಈ ಮಾನವೀಯ ಕಾರ್ಯಕ್ಕೆ ಮುಂದಾದ್ರು ಹೋಟೆಲ್ ಮಾಲೀಕ ಸತ್ಯನಾಥ್.
ಇದನ್ನೂ ಓದಿ: Kalaburagi: ಇದು ಹಿಂದೂ-ಮುಸ್ಲಿಂ ಧರ್ಮೀಯರನ್ನು ಒಗ್ಗೂಡಿಸೋ ಕಲಬುರಗಿಯ ಭಾವೈಕ್ಯತೆಯ ತಾಣ!
ಪ್ರತಿದಿನ 40 ರಿಂದ 50 ಪ್ಲೇಟ್ ಆಹಾರ
90 ಸಾವಿರ ಖರ್ಚು ಮಾಡಿ ಹೊಸ ಫ್ರಿಡ್ಜ್ ಖರೀದಿಸಿ ರಾತ್ರಿ ವೇಳೆ ಹೋಟೆಲ್ನಲ್ಲಿ ಉಳಿದ ರೈಸ್ ಹಾಗೂ ಉಳಿದ ಹಿಟ್ಟಿನಿಂದ ಪೂರಿ ಮಾಡಿ ಇಡೋಕೆ ಶುರುಮಾಡಿದ್ರು. ಈಗ ಒಂದು ದಿನಕ್ಕೆ 40 ರಿಂದ 50 ಪ್ಲೇಟ್ ಆಹಾರವನ್ನು ಈ ರೀತಿ ಕಮಲ್ ಹೋಟೆಲ್ ರಸ್ತೆಬದಿ ಫ್ರಿಡ್ಜ್ನಲ್ಲಿ ಇಡಲಾಗುತ್ತೆ.
ಇದನ್ನೂ ಓದಿ: Kalaburagi: ಇದೇ ನೋಡಿ ಕಲಬುರಗಿಯ ಮೊದಲ ಶಾಲೆ!
ಒಟ್ಟಿನಲ್ಲಿ ಹೊಟೇಲ್ನಲ್ಲಿ ಉಳಿದ ಆಹಾರ ಪದಾರ್ಥವನ್ನು ತಿಪ್ಪೆ ತೊಟ್ಟಿಗೆ ಬಿಸಾಡದೇ ಬಡಬಗ್ಗರ, ಹಸಿದವರ ಹಸಿವು ನೀಗಿಸುವ ಕಾರ್ಯಕ್ಕೆ ಬಳಸುತ್ತಿರೋ ಸತ್ಯನಾಥ್ ಅವರ ಮಾನವೀಯ ಸೇವೆಗೆ ಸೆಲ್ಯೂಟ್ ಹೇಳಲೇಬೇಕು.
ವರದಿ: ಶ್ರೀಕಾಂತ್ ಬಿರಾಳ ನ್ಯೂಸ್18 ಕನ್ನಡ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ