Kalaburagi: ಆಕಾಶದಿಂದ ಕಲಬುರಗಿ ನೋಡಿ! ಕಲಬುರಗಿಯಲ್ಲಿ ಮೋಜಿನ ಹೆಲಿಕಾಪ್ಟರ್​ ರೈಡ್!​

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬಿಸಿಲನಾಡು ಕಲಬುರಗಿಗೆ ಆಗಮಿಸುತ್ತಿರೋ ಸಾರ್ವಜನಿಕರು, ಪ್ರವಾಸಿಗರು ಹೆಲಿಕಾಪ್ಟರ್​ನಲ್ಲಿ ಹಾರಾಡುತ್ತಾ ಎಂಜಾಯ್‌ ಮಾಡುತ್ತಿದ್ದಾರೆ. 10 ನಿಮಿಷದಲ್ಲಿ ಕಲಬುರಗಿ ನಗರದ ಸೌಂದರ್ಯ ಸವಿಯುತ್ತಿದ್ದಾರೆ.

  • News18 Kannada
  • 2-MIN READ
  • Last Updated :
  • Gulbarga, India
  • Share this:

    ಕಲಬುರಗಿ: ಬಿಸಿಲನಾಡಿನಲ್ಲಿ ಧೂಳೆಬ್ಬಿಸುತ್ತಾ ಗಗನಕ್ಕೆ ಚಿಮ್ಮುವ ಲೋಹದ ಹಕ್ಕಿ. ಹೆಲಿಕಾಪ್ಟರ್‌ ಏರಿ ಹಾರಾಟದ ಕನಸು ನನಸು ಮಾಡಿಕೊಳ್ಳುತ್ತಿರೋ ಪ್ರವಾಸಿಗರು. ಹೀಗೆ ಖುಷಿಯಿಂದ ಹಾರಿ ಹೋಗಿ ಬಿಸಿಲನಾಡನ್ನ ನೋಡುವ ಸಂಭ್ರಮ. ಅಂದಹಾಗೆ ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಕಲ್ಯಾಣ ಕರ್ನಾಟಕ ಉತ್ಸವ (Kalyana Karnataka Utsava) ಹಿನ್ನೆಲೆ ಆಯೋಜಿಸಲಾದ ಹೆಲಿಕಾಪ್ಟರ್‌ ರೈಡ್​ನಲ್ಲಿ. ಹಾಗಿದ್ರೆ ಹೇಗಿತ್ತು ಲೋಹದ ಹಕ್ಕಿಯ (Helicopter Ride) ಝಲಕ್‌ ಅನ್ನೋದನ್ನ ನೋಡೋಣ ಬನ್ನಿ.


    ಹೆಲಿಕಾಪ್ಟರ್‌ ರೈಡ್
    ಯೆಸ್‌, ಗಗನ ಹಾರಾಟ ಗಗನ ಕುಸುಮವೇ ಸರಿ. ಸಾಮಾನ್ಯ ಜನರಿಗೆ ಅದು ತುಸು ಕಷ್ಟವೇ. ಆದರೆ ಈಗ, ಫ್ಯಾಮಿಲಿ ಸಮೇತ ಹಾರಾಟ ನಡೆಸಿ ಎಂಜಾಯ್‌ ಮಾಡಬಹುದಾದ ಅವಕಾಶವೊಂದು ಕಲಬುರಗಿ ಜನತೆಗೆ ಸಿಕ್ಕಿದೆ. ನಿಜ, ಕಲಬುರಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಕೆ.ಕೆ.ಆರ್.ಡಿ.ಬಿ ಮಂಡಳಿಯು ಏರೋಹಬ್ ಏವಿಯೇಷನ್ ಮತ್ತು ಇಂಜಿನೀಯರಿಂಗ್ ಪ್ರೈ.ಲಿ. ಸಂಸ್ಥೆ ಹೆಲಿಕಾಪ್ಟರ್ ರೈಡ್ ಆರಂಭಿಸಿದೆ. ‌




    ಹತ್ತು ನಿಮಿಷದ ಹಾರಾಟ
    ಬಿಸಿಲನಾಡು ಕಲಬುರಗಿಗೆ ಆಗಮಿಸುತ್ತಿರೋ ಸಾರ್ವಜನಿಕರು, ಪ್ರವಾಸಿಗರು ಹೆಲಿಕಾಪ್ಟರ್​ನಲ್ಲಿ ಹಾರಾಡುತ್ತಾ ಎಂಜಾಯ್‌ ಮಾಡುತ್ತಿದ್ದಾರೆ. 10 ನಿಮಿಷದಲ್ಲಿ ಕಲಬುರಗಿ ನಗರದ ಸೌಂದರ್ಯ ಸವಿಯುತ್ತಿದ್ದಾರೆ. ಆರು ಸೀಟರ್​ನ ಈ ಚಾಪರ್​ನಲ್ಲಿ ಫ್ಯಾಮಿಲಿ ಸಮೇತ ಓಡಾಡಬಹುದಾಗಿದೆ. ಪ್ರತಿಯೊಬ್ಬರಿಗೆ 3,800 ರೂ. ನಂತೆ ದರ ನಿಗದಿಪಡಿಸಿದ್ದು, ಜನ ಆಗಸದಲ್ಲೊಮ್ಮೆ ಹಾರಾಟ ನಡೆಸಬೇಕೆನ್ನುವ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ.


    ಇದನ್ನೂ ಓದಿ: Kalaburagi: ಮೂರನೇ ಕ್ಲಾಸ್ ಕಲಿತ ಇವರೇ ಕಲಬುರಗಿಯ ವಿಶ್ವೇಶ್ವರಯ್ಯ!




    ನಗರ ಪ್ರದಕ್ಷಿಣೆಯ ಗರ್ದಿ ಗಮ್ಮತ್!
    ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆ ಮೂರು ದಿನಗಳ ಕಾಲವಷ್ಟೇ ಈ ಹೆಲಿಕಾಪ್ಟರ್‌ ರೈಡ್‌ ಇದ್ದು, ಪ್ರವಾಸಿಗರಿಂದಲೂ ಉತ್ತಮ ರೆಸ್ಪಾನ್ಸ್‌ ಸಿಗುತ್ತಿದೆ. ಕಲಬುರಗಿ ಕೋಟೆ, ದೇಗುಲ, ಪುರಾತನ ಕಟ್ಟಡ ಹಾಗೂ ಪ್ರಸ್ತುತ ಇರುವ ಕಲಬುರಗಿ ಸಿಟಿ ಸೌಂದರ್ಯ ವೀಕ್ಷಿಸಬಹುದಾಗಿದೆ. ಹೀಗಾಗಿ ಜನ ಕೂಡಾ ಲೋಹದ ಹಕ್ಕಿಯ ಜೊತೆಗಿನ ಹಾರಾಟಕ್ಕೆ ಖುಷ್‌ ಖುಷ್‌ ಆಗಿದ್ದಾರೆ.


    ಇದನ್ನೂ ಓದಿ: Kalaburagi: ಕೆರೆ ಹೂಳೆತ್ತಲು ರೈತರಿಂದ ಲಕ್ಷ ಲಕ್ಷ ಹಣ ಸಂಗ್ರಹ!


    ಒಟ್ಟಿನಲ್ಲಿ ಆಕಾಶದಲ್ಲಿ ಹಾರಾಡಬೇಕೆಂಬ ಶ್ರೀಸಾಮಾನ್ಯರ ಆಸೆಗೆ ಕಲ್ಯಾಣ ಕರ್ನಾಟಕ ಉತ್ಸವವು ಅವಕಾಶ ಒದಗಿಸಿದೆ. ಕಲಬುರಗಿ ಜನರು ಸಾಲುಗಟ್ಟಿ ನಿಂತು ಹೆಲಿಕಾಪ್ಟರ್​ನಲ್ಲಿ ಹಾರಾಡಲು ಉತ್ಸುಕರಾಗಿದ್ದಾರೆ.


    ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: