Kalyana Karnataka Utsava: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಹಲವು ಸ್ಪರ್ಧೆಗಳು, ಭಾಗವಹಿಸಲು ಇಲ್ಲಿದೆ ಲಿಂಕ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವವರು ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೇಗೆ ನೋಂದಣಿ ಮಾಡಿಕೊಳ್ಳುವುದು ಸೇರಿದಂತೆ ಎಲ್ಲ ವಿವರ ನಿಮಗೆಂದೇ ಇಲ್ಲಿದೆ.

  • News18 Kannada
  • 5-MIN READ
  • Last Updated :
  • Gulbarga, India
  • Share this:

    ಕಲಬುರಗಿ: ಕಲಬುರಗಿಯಲ್ಲಿ ಆಯೋಜನೆ ಮಾಡಲಾದ ಕಲ್ಯಾಣ ಕರ್ನಾಟಕ ಉತ್ಸವದ (Kalyana Karnataka Utsava) ಅಂಗವಾಗಿ ಕೆ.ಕೆ.ರನ್ ಮ್ಯಾರಥಾನ್, ಸೈಕ್ಲೋಥಾನ್ ಹಾಗೂ ವಾಕಥಾನ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತರು ಈ ಮೂರರಲ್ಲೂ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.  ಸ್ಪರ್ಧೆಗಳು ಫೆಬ್ರವರಿ 21, 22 ಹಾಗೂ 23ರಂದು ಬೆಳಿಗ್ಗೆ 6.30 ಗಂಟೆಗೆ ಆರಂಭವಾಗಲಿವೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವವರು ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೇಗೆ ನೋಂದಣಿ ಮಾಡಿಕೊಳ್ಳುವುದು ಸೇರಿದಂತೆ ಎಲ್ಲ ವಿವರ ನಿಮಗೆಂದೇ ಇಲ್ಲಿದೆ.


    ಮೊದಲು ನೋಂದಣಿ ಮಾಡಿದವರಿಗೆ ಮೊದಲ ಆದ್ಯತೆ
    ಮ್ಯಾರಥಾನ್ ಮತ್ತು ಸೈಕ್ಲೋಥಾನ್ ಸ್ಪರ್ಧೆಗಳ ಪೈಕಿ ಪುರುಷ ಮುಕ್ತ ಸ್ಪರ್ಧೆಗಳಿಗೆ 200 ಸ್ಪರ್ಧಾಳುಗಳುಗಳಿಗೆ ಅವಕಾಶವಿದೆ. ಉಳಿದ ಸ್ಪರ್ಧೆಗಳಿಗೆ ಮೊದಲು ನೋಂದಾಯಿಸಿಕೊಂಡ 100 ಸ್ಪರ್ಧಾಳುಗಳಿಗೆ ಅವಕಾಶವಿದೆ. ವಾಕ್‍ಥಾನ್ ನಡಿಗೆಯಲ್ಲಿ ಮೊದಲು 500 ಜನ ನೋಂದಾಯಿಸಿದವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಕೆಕೆಆರ್​ಡಿಬಿ ಕಾರ್ಯದರ್ಶಿ ಅನಿರುದ್ದ ಶ್ರವಣ ತಿಳಿಸಿದ್ದಾರೆ.


    ಸ್ಪರ್ಧೆಯ ನಿಯಮಗಳು ಹೀಗಿವೆ
    ಮ್ಯಾರಥಾನ್
    ಫೆಬ್ರವರಿ 21ಕ್ಕೆ ಮ್ಯಾರಥಾನ್ ಸ್ಪರ್ಧೆ ನಡೆಯಲಿದ್ದು, 17 ವರ್ಷದೊಳಗಿನ ಬಾಲಕರ 5 ಕಿ.ಮೀ ಓಟವು ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ ಆರಂಭಗೊಂಡು ಜಗತ್ ಸರ್ಕಲ್-ಡಿ.ಸಿ. ಕಚೇರಿ ಮೂಲಕ ಮರಳಿ ಕೆ.ಕೆ.ಆರ್.ಡಿ.ಬಿ. ಕಚೇರಿಯವರೆಗೆ ನಡೆಯಲಿದೆ. 17 ವರ್ಷ ಮೇಲ್ಪಟ್ಟ ಪುರುಷ ಮುಕ್ತ 10 ಕಿ.ಮೀ. ಓಟವು ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ ಆರಂಭಗೊಂಡು ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ-ಜಿಲ್ಲಾ ನ್ಯಾಯಾಲಯ- ಶರಣಬಸವೇಶ್ವರ ದೇವಸ್ಥಾನ- ಸಂಗೊಳ್ಳಿ ರಾಯಣ್ಣ ಸರ್ಕಲ್-ಜಗತ್ ಸರ್ಕಲ್-ಡಿ.ಸಿ. ಕಚೇರಿ ಮೂಲಕ ಕೆ.ಕೆ.ಆರ್.ಡಿ.ಬಿ.ಕಚೇರಿಗೆ ಬಂದು ಕೊನೆಗೊಳ್ಳಲಿದೆ.


    ಇದನ್ನೂ ಓದಿ: Kalyana Karnataka: ಆರ್ಡಿನರಿ ಬಸ್​ಗೆ ಎಕ್ಸ್​ಪ್ರೆಸ್ ಟಿಕೆಟ್! ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣಿಕರು ಹೀಗಂತಾರೆ


    ಇನ್ನು 17 ವರ್ಷದೊಳಗಿನ ಬಾಲಕಿಯರ 3 ಕಿ.ಮೀ. ಓಟವು ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ ಆರಂಭಗೊಂಡು ಲಾಹೋಟಿ ಪೆಟ್ರೋಲ್ ಬಂಕ್-ಡಿ.ಸಿ. ಕಚೇರಿ ಮೂಲಕ ಸಾಗಿ ಕೆ.ಕೆ.ಆರ್.ಡಿ.ಬಿ. ಕಚೇರಿವರೆಗೆ ನಡೆಯಲಿದೆ. 17 ವರ್ಷ ಮೇಲ್ಪಟ್ಟ ಮಹಿಳೆಯರ ಮುಕ್ತ 5 ಕಿ.ಮೀ. ಓಟವು ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ ಆರಂಭಗೊಂಡು ಜಗತ್ ಸರ್ಕಲ್-ಡಿ.ಸಿ. ಕಚೇರಿ ಮೂಲಕ ಮರಳಿ ಕೆ.ಕೆ.ಆರ್.ಡಿ.ಬಿ. ಕಚೇರಿಗೆ ಬಂದು ಕೊನೆಗೊಳ್ಳಲಿದೆ.


    ಮ್ಯಾರಥಾನ್ ಸ್ಪರ್ಧೆಯಲ್ಲಿ ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ


    ಸೈಕ್ಲೋಥಾನ್
    ಫೆಬ್ರವರಿ 22ಕ್ಕೆ ಸೈಕ್ಲೋಥಾನ್ ಸ್ಪರ್ಧೆ ಬೆಳಗ್ಗೆ 6.30 ಗಂಟೆ ಆರಂಭವಾಗಲಿದೆ. 17 ವರ್ಷದೊಳಗಿನ ಬಾಲಕರ 10 ಕಿ.ಮೀ. ಸೈಕ್ಲೋಥಾನ್ ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ ಆರಂಭಗೊಂಡು ಜಗತ್ ಸರ್ಕಲ್-ಡಿ.ಸಿ. ಕಚೇರಿ ಮೂಲಕ ಮರಳಿ ಕೆ.ಕೆ.ಆರ್.ಡಿ.ಬಿ. ಕಚೇರಿಗೆ ತೆರಳಲಿದೆ. 17 ವರ್ಷ ಮೇಲ್ಪಟ್ಟ ಪುರುಷ ಮುಕ್ತ 25 ಕಿ.ಮೀ.ಸೈಕ್ಲೋಥಾನ್ ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ ಆರಂಭಗೊಂಡು ನಾಗನಹಳ್ಳಿ-ಮರತೂರ-ನಾಗನಹಳ್ಳಿ ಮೂಲಕ ಮೂಲಕ ಕೆ.ಕೆ.ಆರ್.ಡಿ.ಬಿ. ಕಚೇರಿಗೆ ಬಂದು ಕೊನೆಗೊಳ್ಳಲಿದೆ.




    17 ವರ್ಷದೊಳಗಿನ ಬಾಲಕಿಯರ 5 ಕಿ.ಮೀ. ಸೈಕ್ಲೋಥಾನ್ ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ ಆರಂಭಗೊಂಡು ಲಾಹೋಟಿ ಪೆಟ್ರೋಲ್ ಬಂಕ್-ಜಗತ್ ವೃತ್ತ-ಡಿ.ಸಿ. ಕಚೇರಿ ಹಾದು ಕೆ.ಕೆ.ಆರ್.ಡಿ.ಬಿ. ಕಚೇರಿ ಬಳಿ ಕೊನೆಗೊಳ್ಳಲಿದೆ. 17 ವರ್ಷ ಮೇಲ್ಪಟ್ಟ ಮಹಿಳೆಯರ ಮುಕ್ತ 10 ಕಿ.ಮೀ. ಸೈಕ್ಲೋಥಾನ್ ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ ಆರಂಭಗೊಂಡು ಜಗತ್ ಸರ್ಕಲ್-ಡಿ.ಸಿ. ಕಚೇರಿ ಮೂಲಕ ಮರಳಿ ಕೆ.ಕೆ.ಆರ್.ಡಿ.ಬಿ. ಕಚೇರಿಗೆ ಬಂದು ಕೊನೆಗೊಳ್ಳಲಿದೆ.


    ಸೈಕ್ಲೋಥಾನ್‍ನಲ್ಲಿ ಭಾಗವಹಿಸಲಿಚ್ಛಿಸುವವರು ಇಲ್ಲಿ ಕ್ಲಿಕ್ ಮಾಡಿ 


    ವಾಕ್‍ಥಾನ್ ಸ್ಪರ್ಧೆಯ ವಿವರ ಹೀಗಿದೆ
    ಫೆಬ್ರವರಿ 23ರಂದು ಬೆಳಗ್ಗೆ 6.30 ಗಂಟೆಗೆ ಕಲಬುರಗಿ ನಗರದ ಜಗತ್ ವೃತ್ತದಿಂದ ವಾಕ್‍ಥಾನ್ 3 ಕಿ.ಮೀ ನಡಿಗೆ ಇರಲಿದೆ. ಮಹಿಳೆಯರು, ಪುರುಷರ ಮುಕ್ತವಾಗಿ ಭಾಗವಹಿಸಬಹುದಾಗಿದೆ. ಜಗತ್ ವೃತ್ತದಿಂದ ಆಂಭಗೊಂಡು ಸಂಗೊಳ್ಳಿ ರಾಯಣ್ಣ ಸರ್ಕಲ್-ಪೂರ್ಣಾನಂದ ಹೋಟೆಲ್-ಕಲ್ಯಾಣಿ ಪೆಟ್ರೋಲ್ ಬಂಕ್ ಮಾರ್ಗವಾಗಿ ಸಂಪೂರ್ಣವಾಗಿ ಅಪ್ಪನ ಕೆರೆ ಒಂದು ಸುತ್ತು ನಡೆದುಕೊಂಡು ಬಂದು ಜಗತ್ ವೃತ್ತಕ್ಕೆ ಅಂತ್ಯಗೊಳ್ಳಲಿದೆ.


    ವಾಕ್‍ಥಾನ್‍ನಲ್ಲಿ ಭಾಗವಹಿಸಲಿಚ್ಛಿಸುವವರು ಇಲ್ಲಿ ಕ್ಲಿಕ್ ಮಾಡಿ


    ಇದನ್ನೂ ಓದಿ: Nagavi Yellamma Temple: ಪ್ರಾಚೀನ ವಿಶ್ವವಿದ್ಯಾಲಯ ಈಗ ಹಾಳುಕೊಂಪೆ! ಹೇಳ್ತೀವಿ ಕೇಳಿ ಪುಣ್ಯತಾಣದ ವಿಚಿತ್ರ ಕಥೆ


    ಮ್ಯಾರಾ=ಥಾನ್, ಸೈಕ್ಲೋಥಾನ್ ಹಾಗೂ ವಾಕ್‍ಥಾನ್ ಸ್ಪರ್ಧೆಗಳ ಪ್ರತಿಯೊಂದು ವಿಭಾಗದಲ್ಲಿ ವಿಜೇತ ಅಗ್ರ ಮೂವರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಗುತ್ತದೆ. ಕಲಬುರಗಿ ನಗರದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಅವರು ಮನವಿ ಮಾಡಿದ್ದಾರೆ.


    ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: