Kalaburagi: ಕಲ್ಯಾಣ ಕರ್ನಾಟಕದ ಅತಿ ದೊಡ್ಡ ಕೃಷಿ ಮಾರುಕಟ್ಟೆಯಿದು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಂದಹಾಗೆ ಇದು ನಿಜಾಮರ ಕಾಲದಿಂದಲೂ ರೈತರ ಒಡನಾಡಿಯಾಗಿ ಗುರುತಿಸಿಕೊಂಡಿದೆ. ಇಂದಿಗೂ ಇಲ್ಲಿ ನಡೆಯದ ವ್ಯಾಪಾರ, ವಹಿವಾಟುಗಳೇ ಇಲ್ಲ.

 • News18 Kannada
 • 4-MIN READ
 • Last Updated :
 • Gulbarga, India
 • Share this:

  ಕಲಬುರಗಿ: ದೊಡ್ಡದಾದ ಮಾರ್ಕೆಟ್ಟು, ಸದಾ ಗಿಜಿಗುಡುತ್ತಿರೋ ವ್ಯಾಪಾರಿಗಳು. ಸಖತ್ ಆಗಿಯೇ ನಡೆಯುತ್ತೆ ನೋಡಿ ವ್ಯಾಪಾರ ವಹಿವಾಟು. ಯೆಸ್, ಈ ಮಾರುಕಟ್ಟೆಗೆ (Agriculture Market) ರಾಜರ ಕಾಲದ ಇತಿಹಾಸವಿದೆ. ರೈತರ ಪಾಲಿನ ಅನ್ನದಾತ ಅನ್ನೋ ಹೆಗ್ಗಳಿಕೆಯೂ ಇದೆ.
  ನಿಜ, ಕಲಬುರಗಿಯ ಈ ಮಾರುಕಟ್ಟೆ ಕಲ್ಯಾಣ ಕರ್ನಾಟಕದಲ್ಲೇ ಅತೀ ದೊಡ್ಡದಾದ ಎಪಿಎಂಸಿ ಮಾರ್ಕೆಟ್. ಅಂದಹಾಗೆ ಇದು ನಿಜಾಮರ ಕಾಲದಿಂದಲೂ ರೈತರ ಒಡನಾಡಿಯಾಗಿ ಗುರುತಿಸಿಕೊಂಡಿದೆ. ಇಂದಿಗೂ ಇಲ್ಲಿ ನಡೆಯದ ವ್ಯಾಪಾರ, ವಹಿವಾಟುಗಳೇ ಇಲ್ಲ. ಅಂದಿನಿಂದ ಇಂದಿನವರೆಗೂ ರೈತರ ಬೆಳೆಗಳಿಗೆ ಕಲಬುರಗಿಯ ಈ ಎಪಿಎಂಸಿ ಮಾರ್ಕೆಟ್ ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ಹೀಗಾಗಿ ಇಲ್ಲಿ ಪ್ರತಿದಿನ ರೈತರು ತಮ್ಮ ಸಾಮಾನು ಸರಂಜಾಮುಗಳನ್ನ ಹೊತ್ತು ತಂದು ವ್ಯವಹಾರ ಕುದುರಿಸುತ್ತಾರೆ.


  ಇದನ್ನೂ ಓದಿ: Kalaburagi: ಎದುರು ಮನೆಯಲ್ಲಿ ಗಂಡು ಮಗು ಹುಟ್ಟಿದ್ರೆ ಈ ಮನೆಲಿ ಇಡೀ ತಿಂಗಳು ಹಬ್ಬ!
  ವ್ಯಾಪಾರ ಕೇಂದ್ರ
  ಹಿಂದಿನ ಕಾಲದಲ್ಲಿ ಈ ಭಾಗದಲ್ಲಿ ಅತಿಹೆಚ್ಚು ತೊಗರಿ, ಶೇಂಗಾ  ಖರೀದಿ  ನಡೆಯುತ್ತಿತ್ತು.  ಈಗ ತೊಗರಿ ಬೆಳೆಗೆ ಈ ಎಪಿಎಂಸಿ ಮಾರ್ಕೆಟ್ ದೊಡ್ಡದಾದ ವ್ಯಾಪಾರ ಕೇಂದ್ರ ಆಗಿದೆ. ಇದರ ಜೊತೆಗೆ ಕಡಲೆ, ಸೋಯಾಬಿನ್, ಕುಸಬಿ ಎಲ್ಲವೂ ಮಾರಾಟವಾಗುತ್ತೆ. ಇಲ್ಲಿ ಒಟ್ಟು ಮುನ್ನೂರಕ್ಕೂ ಅಧಿಕ ಅಡತ್​ಗಳಿದ್ದು, ಇದರಿಂದ ಕಲಬುರಗಿ ಭಾಗದ ರೈತರು ಬೇರೆ ಹೋಗುವ ಅವಶ್ಯಕತೆ ಎದುರಾಗಿಲ್ಲ.
  ಇದನ್ನೂ ಓದಿ: Kalaburagi: ಬರೋಬ್ಬರಿ 100 ವರ್ಷಗಳಿಂದ ಅನ್ನದಾನ, ಇದೇ ನೋಡಿ ಭಕ್ತಿ ಅಂದ್ರೆ!


  ಒಟ್ಟಿನಲ್ಲಿ ನಿಜಾಮರ ಕಾಲದಿಂದ ರೈತರಿಗೆ ಬೆನ್ನೆಲುಬಾಗಿರುವ ಈ ಮಾರುಕಟ್ಟೆ ಇಂದಿಗೂ ಈ ಭಾಗದ ಅತಿ ದೊಡ್ಡ ಎಪಿಎಮ್​ಸಿ ಮಾರುಕಟ್ಟೆ ಎಂಬ ಪ್ರಖ್ಯಾತಿಯನ್ನು ಪಡೆದಿದೆ. ಅಷ್ಟೇ ಅಲ್ದೇ, ಇಂದಿಗೂ ರೈತರ ಒಡನಾಡಿಯಾಗಿ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ.


  ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು