Job Alert: ಪಿಯುಸಿ ಆದವರಿಗೆ ಭರ್ಜರಿ ಅವಕಾಶ, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ

ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ

ಪಿಯುಸಿ, ಡಿಪ್ಲೊಮಾ ಆಗಿ ಉದ್ಯೋಗಕ್ಕಾಗಿ ಅರಸುತ್ತಿರುವವರಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯದಿಂದ ಸಿಹಿ ಸುದ್ದಿ. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಸದುಪಯೋಗ ಮಾಡಿಕೊಳ್ಳಬಹುದು.

  • Local18
  • 5-MIN READ
  • Last Updated :
  • Bangalore [Bangalore], India
  • Share this:

    ಕಲಬುರಗಿ: ಪಿಯುಸಿ, ಡಿಪ್ಲೋಮಾ (PuC, Diploma) ಮುಗಿಸಿ ಮನೆಯಲ್ಲಿದ್ದಿರಾ? ಕೆಲಸಕ್ಕಾಗಿ (job) ಅಲೆಯುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ಒಂದು ಸುವರ್ಣಾವಕಾಶ, ಕಲಬುರಗಿ (Kalburgi) ಜಿಲ್ಲಾ ನ್ಯಾಯಾಲಯದಲ್ಲಿ (District Court)  ವಿವಿಧ ಹುದ್ದೆಗಳನ್ನು ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಅವಕಾಶವನ್ನು ಸದೂಪಯೋಗ ಪಡೆಸಿಕೊಳ್ಳಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


    ಪಿಯುಸಿ, ಡಿಪ್ಲೋಮಾ ಮುಗಿಸಿ ಕೆಲಸ ಹುಡುಕಿದರೂ ಸಿಕ್ಕಿಲ್ಲ ಅಂತ ಚಿಂತೆ ಇದ್ರೆ ಇಲ್ಲಿ ನಿಮಗಾಗಿ ಒಂದು ಸುಂದರ ಅವಕಾಶ ಇದೆ. ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಗೆ ಅರ್ಜಿ ಹಾಕುವ ಬಗೆ ಇಲ್ಲಿದೆ.


    ಯಾವೆಲ್ಲ ಹುದ್ದೆ ಅರ್ಜಿ ಆಹ್ವಾನ?


    60 ಶೀಘ್ರ ಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ, ಜವಾನ ಮತ್ತು ಆದೇಶ ಜಾರಿಕಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಗೆ ತಕ್ಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


    ಇನ್ನು ಈ ಹುದ್ದೆಗೆ ಪಿಯುಸಿ, ಡಿಪ್ಲೋಮಾ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾರ್ಚ್ 25,2023ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


    ಆಯ್ಕೆ ಪ್ರಕ್ರಿಯೆ ಹೀಗಿದೆ?


    ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್, ಪ್ರಾಯೋಗಿಕ ಪರೀಕ್ಷೆ, ಕಂಪ್ಯೂಟರ್ ಜ್ಞಾನ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.




    ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರು 200ರೂ ಅರ್ಜಿ ಶುಲ್ಕವನ್ನು ಆನ್‌ಲೈನ್, ಚಲನ್ ಮೂಲಕ ಪಾವತಿ ಮಾಡಬೇಕು. ಅರ್ಜಿ ಸಲ್ಲಿಸಿದ ನಂತರ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆ ನೀಡುತ್ತದೆ.


     ಅರ್ಜಿ ಸಲ್ಲಿಕೆ ಹೇಗೆ?


    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾರ್ಚ್ 25,2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಆದೇಶದಲ್ಲಿ ಉಲ್ಲೇಖವಾಗಿದೆ.


    ಇದನ್ನೂ ಓದಿ: ಮನಸು ಕದಿಯುವ ನಾಯಿಗಳು! ಬಿಸಿಲನಾಡಲ್ಲಿ ಫಿಟ್ ಆ್ಯಂಡ್ ಕ್ಯೂಟ್ ಶ್ವಾನಗಳ ಹವಾ!


    ಕೆಲಸಕ್ಕಾಗಿ ಬಹಳ ದಿನಗಳಿಂದ ಪರದಾಡುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಅದ್ಭುತ ಅವಕಾಶವಾಗಿದ್ದು, ತಕ್ಷಣವೇ ಅರ್ಜಿ ಹಾಕಿ. ಉತ್ತಮ ಉದ್ಯೋಗ ತಮ್ಮದಾಗಿಸಿಕೊಳ್ಳಬಹುದು.

    Published by:Sandhya M
    First published: