Scholarship: ಅಹಿಂದ ವಿದ್ಯಾರ್ಥಿಗಳಿಗೆ ಮಹಾನಗರ ಪಾಲಿಕೆಯಿಂದ ಬಂಪರ್ ಆಫರ್!

ಪಾಲಿಕೆ ವತಿಯಿಂದ ಬಂಪರ್ ಆಫರ್

ಪಾಲಿಕೆ ವತಿಯಿಂದ ಬಂಪರ್ ಆಫರ್

ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಬಡ ವರ್ಗಗಳ ಅರ್ಹ ವಿದ್ಯಾರ್ಥಿಗಳಿಗೆ ಕಲಬುರಗಿ ಮಹಾನಗರ ಪಾಲಿಕೆಯು ವಿವಿಧ ಬಗೆಯ ಯೋಜನೆಗಳನ್ನು ಘೋಷಿಸಿವೆ.

 • Local18
 • 4-MIN READ
 • Last Updated :
 • Bangalore [Bangalore], India
 • Share this:

  ಕಲಬುರಗಿ: ಮಹಾನಗರ ಪಾಲಿಕೆಯಿಂದ (Corporation) ಶೇ.7.25 ಹಾಗೂ ಶೇ. 5 ಯೋಜನೆಯ ಕ್ರಿಯಾ ಯೋಜನೆಗಳಲ್ಲಿ ಕೆಲ ನಿಗದಿಪಡಿಸಿದ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಬಡ ಜನರ (Poor People) ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಇದರ ಲಾಭವನ್ನು ಪಡೆಯಬಹುದಾಗಿದೆ.


  ವಿದ್ಯಾರ್ಥಿಗಳಿಗೆ ಸಹಾಯಧನ


  2018-19 ರಿಂದ 2019-20ನೇ ಸಾಲಿನವರೆಗೆ (ಎಸ್.ಎಫ್.ಸಿ.) ಇತರೆ ಬಡ ಜನರ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವೈಯಕ್ತಿಕ ಕಲ್ಯಾಣ ಕಾರ್ಯಕ್ರಮಗಳಡಿ (2018-19ನೇ ಸಾಲಿನ ಎಸ್.ಎಫ್.ಸಿ. ನಿಧಿ) 9ನೇ ತರಗತಿ ಪಾಸಾಗಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಧನ ಹಾಗೂ (2019-20ನೇ ಸಾಲಿನ ಎಸ್.ಎಫ್.ಸಿ. ನಿಧಿ) ಎಂ.ಬಿ.ಬಿ.ಎಸ್., ಬಿ.ಎಡ್.ಎಸ್, ಎಂ.ಫಿಲ್. ಓದುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತದೆ.


  ವಿಕಲಚೇತನರಿಗೆ ತ್ರಿಚಕ್ರ  ಶೇ. 5 2018-19 ಹಾಗೂ 2022-23ನೇ ಸಾಲಿನವರೆಗೆ ವಿಕಲಚೇತನರಿಗೆ ವೈಯಕ್ತಿಕ ಕಲ್ಯಾಣ ಕಾರ್ಯಕ್ರಮಗಳಡಿ(2018-19 ನೇ ಸಾಲಿನ ಎಸ್.ಎಫ್.ಸಿ. ನಿಧಿ) ಎಂ.ಬಿ.ಬಿ.ಎಸ್./ಬಿ../ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಾತ್ರ ಡೆಸ್ಕ್ ಟಾಪ್ ಕಂಪ್ಯೂಟರ್/ಲ್ಯಾಪ್ ಟಾಪ್ ಖರೀದಿಗಾಗಿ ಸಹಾಯಧನ ಹಾಗೂ (2022-23 ನೇ ಸಾಲಿನ ಎಸ್.ಎಫ.ಸಿ ನಿಧಿ) ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಗುತ್ತದೆ.


  ಅರ್ಜಿ ಸಲ್ಲಿಕೆ ವಿಧಾನ


  ಅರ್ಹ ಫಲಾನುಭವಿಗಳು ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಮಹಾನಗರ ಪಾಲಿಕೆ ಕಚೇರಿಯ ಆವಕ ಶಾಖೆಯಿಂದ ಕಚೇರಿ ವೇಳೆಯಲ್ಲಿ 2023 ಮಾರ್ಚ್ 10 ರೊಳಗಾಗಿ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.


  ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ


  ಕಡ್ಡಾಯವಾಗಿ ದೃಢೀಕರಣದೊಂದಿಗೆ ಅರ್ಜಿಯನ್ನು 2023 ಮಾರ್ಚ್ 13 ರಿಂದ ಮಾರ್ಚ್ 18 ಸಂಜೆ 4.30 ಗಂಟೆಯೊಳಗಾಗಿ ಸಲ್ಲಿಸಬೇಕು.


  ಇದನ್ನೂ ಓದಿ: ಇಲ್ಲಿ ಮದ್ವೆ ಆಗ್ಬೇಕು ಅಂದ್ರೆ ದೇವಿ ಅಪ್ಪಣೆ ಬೇಕೇ ಬೇಕು!

  ಹೆಚ್ಚಿನ ಮಾಹಿತಿಗಾಗಿ


  ಷರತ್ತು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ಶೇ. 7.25, ಶೇ. 5 ಶಾಖೆಯನ್ನು ಅಥವಾ ಪಾಲಿಕೆಯ www.kalburagicity.gov.in ವೆಬ್ ಸೈಟ್ ನಲ್ಲಿ ಮಾಹಿತಿ ಪಡೆಯಬಹುದಾಗಿದೆ.

  Published by:Sandhya M
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು