• Home
 • »
 • News
 • »
 • kalburgi
 • »
 • Shiva Temple: ಎಲ್ಲೆಡೆ ಬರಗಾಲ ಬಂದ್ರೂ ಇಲ್ಲಿ ಮಾತ್ರ ನೀರು ಬತ್ತಲ್ಲ! ಶಿವಲಿಂಗದ ಅಡಿಯಿಂದಲೇ ಒಸರುತ್ತಂತೆ ಜೀವಜಲ!

Shiva Temple: ಎಲ್ಲೆಡೆ ಬರಗಾಲ ಬಂದ್ರೂ ಇಲ್ಲಿ ಮಾತ್ರ ನೀರು ಬತ್ತಲ್ಲ! ಶಿವಲಿಂಗದ ಅಡಿಯಿಂದಲೇ ಒಸರುತ್ತಂತೆ ಜೀವಜಲ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕಾಳಗಿಯ ರೌದ್ರಾವತಿ ನದಿ ಪಕ್ಕದಲ್ಲಿ ಮೂರು ತೀರ್ಥಕುಂಡಗಳಿವೆ. ನರಸಿಂಹ ತೀರ್ಥ, ಕಾಳೇಶ್ವರ ತೀರ್ಥ ಹಾಗೂ ರಾಮತೀರ್ಥ. ಒಂದು ತೀರ್ಥಕುಂಡದ ಮಧ್ಯದಲ್ಲಿಯೇ ದೇವಸ್ಥಾನವಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ಊರೆಲ್ಲ ಬರಗಾಲಕ್ಕೆ ತುತ್ತಾದ್ರೂ, ಇಲ್ಲಿನ ನೀರು ಬತ್ತಿದ ಉದಾಹರಣೆಯೇ ಇಲ್ಲ. ಬಿಸಿಲೇ ಉಸಿರಾಡೋ ಊರಾದ್ರೂ (Kalaburagi News)  ಇಲ್ಲಿ ನೀರು ಖಾಲಿಯಾಗಿದ್ದು ಇತಿಹಾಸದಲ್ಲೇ ಇಲ್ಲ. ಬರದ ನಾಡಲ್ಲಿ ಎಲ್ಲೆಡೆ ನೀರು ಬತ್ತಿಹೋಗಿದ್ರೂ ತಣ್ಣನೆ ಝುಳುಝುಳು ಎಂದು ಈ ಸ್ಥಳದಲ್ಲಿ ಮಾತ್ರ ನದಿ (River) ಹರಿಯುತ್ತೆ! ಈ ಕುತೂಹಲದ ಕಥೆನ ನಾವ್ ಹೇಳ್ತೀವಿ ಕೇಳಿ.


  ಹೌದು, ಜನ ಹೇಗ್ ಬೇಕೋ ಹಾಗೆ ಈ ನೀರನ್ನ ಬಳಸುತ್ತಿದ್ದಾರೆ. ಕೆಲವರಂತೂ ಟ್ಯಾಂಕರ್ ಮೂಲಕ ತಗೊಂಡು ಹೋದ್ರೆ, ರೈತರು ತಮ್ಮ ಕೃಷಿ ಚಟುವಟಿಕೆಗೆ ಈ ನೀರನ್ನ ಬಳಸುತ್ತಾರೆ. ಆದ್ರೆ ಯಾವತ್ತೂ ಈ ನೀರು ಬತ್ತಿದ ಉದಾಹರಣೆಯೇ ಇಲ್ಲ. ಅಂದಹಾಗೆ ಇಂತಹ ಅದ್ಭುತ ಸ್ಥಳ ಇರೋದು ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದ ಕಲಬುರಗಿಯ ಕಾಳಗಿಯಲ್ಲಿ.


  ರೌದ್ರಾವತಿ ನದಿ ದಂಡೆ ಮೇಲಿರೋ ಪವಿತ್ರ ದೇಗುಲ
  ಕಾಳಗಿ ಪಟ್ಟಣದಲ್ಲಿ ಸೋಮೇಶ್ವರ, ಬಿಬ್ಬೇಶ್ವರ, ಕಾಳೇಶ್ವರ, ಜಯಲಿಂಗೇಶ್ವರ, ಮಲ್ಲಿಕಾರ್ಜುನ ದೇವಸ್ಥಾನಗಳಿವೆ. ಇವೆಲ್ಲವುಗಳಲ್ಲಿ ಕಾಳೇಶ್ವರ ಅಥವಾ ನೀಲಕಂಠೇಶ್ವರ ದೇವಸ್ಥಾನ ಎಲ್ಲರ ಕೇಂದ್ರಬಿಂದು. ರೌದ್ರಾವತಿ ನದಿ ದಂಡೆಯ ಮೇಲಿರುವ ಈ ದೇವಸ್ಥಾನ ಒಂದರ್ಥದಲ್ಲಿ ನದಿಯ ಜೀವಾಳವೇ ಹೌದು. ಯಾಕೆಂದರೆ ಕಾಳಗಿ ಪಟ್ಟಣದವರೆಗೂ ರೌದ್ರಾವತಿ ನದಿ ವರ್ಷದ ಬಹುತೇಕ ದಿನಗಳು ಬತ್ತಿ ಹೋಗಿದ್ರೂ, ನೀಲಕಂಠೇಶ್ವರ ದೇವಸ್ಥಾನದಿಂದ ಮುಂದೆ ತುಂಬಿ ಹರಿಯುತ್ತದೆ. ರಾಜ್ಯಾದ್ಯಂತ ತೀವ್ರ ಬರಗಾಲ ಸೃಷ್ಟಿಯಾಗಿ ನೂರಾರು ಅಡಿ ಆಳಕ್ಕೆ ಕೊರೆದರೂ ನೀರು ಸಿಗದೇ ಇರುವ ಸಂದರ್ಭದಲ್ಲಿ ಭೂಮಿಯ ಸಮಾನಕ್ಕೆ ಇಲ್ಲಿ ನೀರು ಪುಟಿಯುತ್ತೆ.


  ಹತ್ತಾರು ಹಳ್ಳಿಗಳ ಜೀವಜಲ
  ನಿರಂತರವಾಗಿ ಹರಿಯುವ ನೀರು ಹತ್ತಾರು ಹಳ್ಳಿಗಳ ಕುಡಿಯುವ ನೀರಿನ ದಾಹ ತೀರಿಸಿ ಸಾವಿರಾರು ಎಕರೆಗೆ ನೀರಾವರಿ ಕಲ್ಪಿಸಿದೆ. ಜೊತೆಗೆ ಕೈಗಾರಿಕೆಗಳಿಗೂ ಇಲ್ಲಿನ ನೀರು ನೆರವಾಗಿದೆ. ದ್ವಾಪರಯುಗ, ತ್ರೇತಾಯುಗ, ಕಲಿಯುಗ, ಕೃತಯುಗ ಹೀಗೆ ನಾಲ್ಕು ಯುಗಗಳಲ್ಲಿಯೂ ಒಂದೊಂದು ಯುಗದಲ್ಲಿ ಒಂದೊಂದು ಶಿವಲಿಂಗವನ್ನು ಇಲ್ಲಿ ಸ್ಥಾಪಿಸಲಾಗಿದೆ ಎಂಬ ಪ್ರತೀತಿಯಿದೆ. ಹಾಗೆ ಸ್ಥಾಪಿಸಿದ ಶಿವಲಿಂಗಗಳ ಕೆಳಗಿನಿಂದಲೇ ಜಲ ಬುಗ್ಗೆಗಳು ಹೊರಹೊಮ್ಮುತ್ತಿವೆ ಎಂಬುದು ನಂಬಿಕೆ. ನಿರಂತರವಾಗಿ ಇಲ್ಲಿ ನೀರು ಪುಟಿಯಲು ನೀಲಕಂಠೇಶ್ವರನ ಮಹಿಮೆಯೇ ಕಾರಣ ಎನ್ನೋದು ಭಕ್ತರ ಅಭಿಪ್ರಾಯ.


  ನೀರು ಬಣ್ಣ ಬದಲಿಸುತ್ತಂತೆ!
  ಕಾಳಗಿಯ ರೌದ್ರಾವತಿ ನದಿ ಪಕ್ಕದಲ್ಲಿ ಮೂರು ತೀರ್ಥಕುಂಡಗಳಿವೆ. ನರಸಿಂಹ ತೀರ್ಥ, ಕಾಳೇಶ್ವರ ತೀರ್ಥ ಹಾಗೂ ರಾಮತೀರ್ಥ. ಒಂದು ತೀರ್ಥಕುಂಡದ ಮಧ್ಯದಲ್ಲಿಯೇ ದೇವಸ್ಥಾನವಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಮೂರೂ ತೀರ್ಥಕುಂಡಗಳಲ್ಲಿ ವರ್ಷಪೂರ್ತಿ ನೀರು ಪುಟಿಯುತ್ತಲೇ ಇರುತ್ತದೆ. ಹಾಗೆ ಪುಟಿಯುವ ನೀರೂ ಸಹ ದಿನಕ್ಕೆ ಮೂರು ವರ್ಣಗಳನ್ನು ಬದಲಿಸುತ್ತದೆ. ಬೆಳಿಗ್ಗೆ ನೀಲಿ ಬಣ್ಣ, ಮಧ್ಯಾಹ್ನ ತಿಳಿ ನೀಲಿ, ರಾತ್ರಿಗೆ ಕಪ್ಪು ಬಣ್ಣದ ಗಾಢ ನೀಲಿ ಬಣ್ಣಕ್ಕೆ ತಿರುಗುತ್ತದೆ. ಅಂದರೆ ವಿಷ ಕುಡಿದು ನೀಲಕಂಠನ ಗಂಟಲು ಹೇಗೆ ನೀಲಿ ವರ್ಣದಲ್ಲಿರುತ್ತದೆಯೋ ನೀರೂ ಸಹ ಅದೇ ವರ್ಣದಲ್ಲಿರುತ್ತದೆ. ಹೀಗೆ ವರ್ಣ ಬದಲಿಸುವ ನೀರನ್ನು ನೋಡಲೆಂದೇ ಭಕ್ತರು ಇಲ್ಲಿಗೆ ಆಗಮಿಸ್ತಾರೆ.


  ಇದನ್ನೂ ಓದಿ: Kalaburagi: ಭಂಡಾರದ ಓಕುಳಿಯಲ್ಲಿ ಮಿಂದೆದ್ದ ರೇಣುಕಾ ಯಲ್ಲಮ್ಮ ದೇವಿಯ ಭಕ್ತರು!


  ಮೂರು ವರ್ಷಕ್ಕೊಮ್ಮೆ ಮೂರು ದಿನಗಳ ಕಾಲ ಹಾಲಿನಂತಹ ವರ್ಣದ ನೀರು ಬರುತ್ತದೆ. ಕಾಶಿ ಕ್ಷೇತ್ರದಿಂದಲೇ ಈ ಹಾಲಿನ ಹೊಳೆ ಹರಿಯುತ್ತದೆ ಎನ್ನುತ್ತಾರೆ ಭಕ್ತರು. ಕಾಶಿಯಲ್ಲಿ ಹರಿಯವ ಗಂಗಾ ನದಿಗೂ ಕಾಳಗಿಯ ಜಲಬುಗ್ಗೆಗಳಿಗೆ ಸಂಬಂಧವಿದೆ ಅನ್ನೋ ನಂಬಿಕೆಯಿದೆ.


  ಇದನ್ನೂ ಓದಿ: Hirodeshwar Temple: ಮಿನಿ ಕುಕ್ಕೆ ಕಲ್ಯಾಣ ಕರ್ನಾಟಕದ ಈ ಕ್ಷೇತ್ರ, ಇಲ್ಲೇ ಬೀಬಿ ಫಾತಿಮಾ ಗದ್ದುಗೆಗೂ ಪೂಜೆ!


  ಕಾಳಗಿಯಲ್ಲಿ ಹೆಜ್ಜೆ ಹೆಜ್ಜೆಗೂ ಒಂದೊಂದು ಶಿವಲಿಂಗ ಸಿಗುತ್ತವೆ. ಆದರೆ, ಪುರಾತನ ಕಾಲದ ಈ ದೇವಸ್ಥಾನದ ಸುತ್ತ ಹಲವಾರು ಸ್ಮಾರಕಗಳು ಹಾಳಾಗುತ್ತಿದ್ದು ಅವುಗಳ ರಕ್ಷಣೆ ಆಗ್ತಿಲ್ಲ ಅನ್ನೋ ಕೊರಗಿದೆ. ಒಟ್ಟಿನಲ್ಲಿ ಹತ್ತು ಹಲವು ವಿಸ್ಮಯಗಳನ್ನ ಹೊಂದಿರುವುದು ಈ ದಕ್ಷಿಣ ಕಾಶಿಯ ವಿಶೇಷ.


  ವರದಿ: ಶ್ರೀಕಾಂತ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: