Kalaburagi News: ಕಲಬುರಗಿಯ 500ಕ್ಕೂ ಹೆಚ್ಚು ಮರಗಳಲ್ಲಿ ನೇತಾಡುತ್ತಿದೆ ಮಡಿಕೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಷ್ಟೇ ಅಲ್ದೇ, ಅಲ್ಲಿರುವ ಅಂಗಡಿಗಳ ಮಾಲೀಕರಿಗೆ ಪ್ರಾಣಿ ಪಕ್ಷಿಗಳಿಗೆ ದಿನದ 3 ಬಾರಿ ನೀರು ಆಹಾರ ಹಾಕುವಂತೆ ಮನವಿ ಜೊತೆಗೆ ಜಾಗೃತಿಯನ್ನು ಮೂಡಿಸುತ್ತಿದೆ ಈ ತಂಡ.

  • News18 Kannada
  • 3-MIN READ
  • Last Updated :
  • Gulbarga, India
  • Share this:

ಕಲಬುರಗಿ: ರಸ್ತೆ, ಮರಗಳ ಪಕ್ಕದಲ್ಲಿ ಮಡಿಕೆಗಳನ್ನು ಅಳವಡಿಸುತ್ತಿರುವ ಯುವಕ, ಯುವತಿಯರು. ಅದಕ್ಕೆ ನೀರು ಸಂಗ್ರಹ (Drinking Water) ಮಾಡುತ್ತಿರುವ ಸಾರ್ವಜನಿಕರು. ಹೀಗೆ ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸೋ ಪುಣ್ಯದ ಕೆಲಸ (Positive Story) ಇವ್ರೆಲ್ಲರದ್ದು. ʼಮಣ್ಣಿನ ಮಡಿಕೆʼ (Mannina Madike) ಅಭಿಯಾನದ ಮೂಲಕ ನಿರಂತರ ಅನ್ನ ಆಹಾರ ನೀಡುವ ಇವ್ರ ಕುರಿತು ಇಲ್ಲಿದೆ ನೋಡಿ ಅಪರೂಪದ ಸ್ಟೋರಿ.


ಮಣ್ಣಿನ ಮಡಿಕೆ ಅಭಿಯಾನ
ಯೆಸ್, ಹೀಗೆ ಕಂಡ ಕಂಡಲ್ಲಿ ಮಂಥಣಿ ಇಡ್ತಿರೋ ಇವರು ಕಲಬುರಗಿಯ ನಾಲ್ಕು ಚಕ್ರ ತಂಡದ ಸದಸ್ಯರು. ಈ ತಂಡವು ಮೂಕ ಹಕ್ಕಿಗಳ ಸಂಕಟವನ್ನು ಅರಿತು ನಗರದ ವಿವಿಧೆಡೆ ಮಂಥಣಿ, ಮಡಿಕೆಗಳನ್ನು ಕಟ್ಟಿ ಪ್ರಾಣಿ ಹಾಗೂ ಪಕ್ಷಿಗಳ ದಾಹ ತೀರಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ನಗರದ ನಾಲ್ಕುಚಕ್ರ ತಂಡ 'ಮಣ್ಣಿನ ಮಡಿಕೆ ಅಭಿಯಾನ'ದ ಮೂಲಕ ಅವುಗಳಿಗೆ ಆಹಾರ, ನೀರು ಒದಗಿಸುವ ಮಾದರಿ ಕಾರ್ಯ ಮಾಡುತ್ತಿದೆ.




ಇದನ್ನೂ ಓದಿ: Free Education In Kalaburagi: ವಿದ್ಯಾರ್ಥಿಗಳೇ ಗಮನಿಸಿ, ಉಚಿತ ಶಿಕ್ಷಣ ಪಡೆಯಲು ಈಗಲೇ ಇಲ್ಲಿ ಅರ್ಜಿ ಸಲ್ಲಿಸಿ


ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಲ್ಕು ಚಕ್ರ ತಂಡ ಮಣ್ಣಿನ ಮಡಿಕೆಗಳನ್ನು ಕುಂಬಾರರಲ್ಲಿ ಖರೀದಿಸಿ ಅವುಗಳಿಗೆ ಗ್ರಾಮಿಣ ಭಾಗದ ಶೈಲಿಯ "ನೆಲುವು" ಸಿದ್ದಮಾಡಿ ನಗರದಾದ್ಯಂತ ಸಂಚರಿಸಿ ಗಿಡ ಮರಗಳಿಗೆ ತೂಗು ಹಾಕುತ್ತಿದ್ದಾರೆ.


5 ಕ್ಕೂ ಹೆಚ್ಚು ಮರಗಿಡಗಳಲ್ಲಿ  ತೂಗುತ್ತಿದೆ ಮಡಿಕೆ!
ಅಷ್ಟೇ ಅಲ್ದೇ, ಅಲ್ಲಿರುವ ಅಂಗಡಿಗಳ ಮಾಲೀಕರಿಗೆ ಪ್ರಾಣಿ ಪಕ್ಷಿಗಳಿಗೆ ದಿನದ 3 ಬಾರಿ ನೀರು ಆಹಾರ ಹಾಕುವಂತೆ ಮನವಿ ಜೊತೆಗೆ ಜಾಗೃತಿಯನ್ನು ಮೂಡಿಸುತ್ತಿದೆ ಈ ತಂಡ. ಹೀಗೆ ಸುಮಾರು 500 ಕ್ಕೂ ಹೆಚ್ಚು ಮರಗಿಡಗಳಿಗೆ ಮಡಿಕೆಗಳನ್ನು ತೂಗುಹಾಕುವಲ್ಲಿ ಈ ತಂಡ ಯಶಸ್ವಿಯಾಗಿದೆ.




ವಾಟ್ಸ್​ಆ್ಯಪ್ ಬಳಕೆ
ವಾಟ್ಸ್​ಆಪ್ ಗ್ರೂಪ್ ಮೂಲಕ ನಿತ್ಯವೂ ಅಭಿಯಾನದ ಕುರಿತು ಎಲ್ಲರಿಗೂ ಅರಿವು ಮೂಡಿಸುವ ಕೆಲಸವನ್ನು ನಾಲ್ಕು ಚಕ್ರ ತಂಡ ಮಾಡುತ್ತಿದೆ. ಪ್ರಾಣಿ ಪಕ್ಷಿಗಳ ಸಂಕುಲ ಉಳಿಸುವ ನಿಟ್ಟಿನಲ್ಲಿ ಅಭಿಯಾನಕ್ಕೆ ಕೈ ಜೋಡಿಸುವಂತೆ ನಾಲ್ಕು ಚಕ್ರ ತಂಡ ಜಾಗೃತಿಯಲ್ಲಿ ತೊಡಗಿದೆ.


ಇದನ್ನೂ ಓದಿ: Kalaburagi News: ಅಂಬೇಡ್ಕರ್‌ ಹಬ್ಬ ಆಚರಣೆಗೆ ತವರಿಗೆ ವಾಪಸ್‌ ಆದ ಹೆಣ್ಮಕ್ಕಳು!

top videos


    ಒಟ್ಟಿನಲ್ಲಿ ನಾಲ್ಕು ಚಕ್ರ ತಂಡದ ಸದಸ್ಯರು ತಮ್ಮ ಬಿಡುವಿನ ಸಮಯದಲ್ಲಿ ಪ್ರಾಣಿ ಪಕ್ಷಿಗಳ ದಾಹ ತೀರಿಸುವ ಮೂಲಕ ಮಾನವೀಯ ಕಾರ್ಯದಲ್ಲಿ ತೊಡಗಿರುವುದು ನಿಜಕ್ಕೂ ಶ್ಲಾಘನೀಯ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು