ಭುಸುಗುಡುತ್ತಿರೋ ಹಾವು, ಕ್ಷಣಾರ್ಧದಲ್ಲಿ ಬಾಟಲಿಗೆ ಸೇರಿಸೋ ತರುಣ! ಹಾವುಗಳು ಜನವಸತಿ ಪ್ರದೇಶದಲ್ಲಿ ಎಲ್ಲೇ ಕಂಡ್ರೂ ಬುಸುಗುಟ್ಟಿದ್ರೂ ಊರಲ್ಲಿ ಇರಲು ಬಿಡದೇ ಕಾಡಿಗೆ ಸೇರಿಸೋ ಯುವಕ. ಓಪನ್ ದಿ ಬಾಟಲ್ ಎನ್ನುತ್ತಾ ಬಾಟಲಿಯಲ್ಲಿ ನಾಗರಹಾವು ಸೆರೆಯಾಗಿಸೋ ಇವ್ರದ್ದು ಯೂಟ್ಯೂಬ್ (YouTube) ವಿದ್ಯಾಭ್ಯಾಸ. ಹೌದು, ಈ ಯುವಕ ಹಾವುಗಳನ್ನ ಹಿಡಿಯಲು ಕಲಿತಿದ್ದೇ ಯೂಟ್ಯೂಬ್ನಿಂದ! ನಿಜ, ಹಾವುಗಳನ್ನ (Snake Rescuer) ಸಲೀಸಾಗಿ ಬಾಟಲಿಯಲ್ಲಿ ಮುಚ್ಚಳ ಹಾಕಿ ಕೈಯ್ಯಲ್ಲಿರಿಸಿಕೊಂಡಿರುವ ಇವರ ಹೆಸರು ಅಮರ ಬಡಿಗೇರ ಅಂತ. ಕಲಬುರಗಿ ತಾಲೂಕಿನ ಕೆಸರಟಗಿ ಗ್ರಾಮದ ನಿವಾಸಿಯಾಗಿರುವ ಇವ್ರು ವೃತ್ತಿಯಲ್ಲಿ ಕೂಲಿ ಕಾರ್ಮಿಕನಾದರೆ, ಪ್ರವೃತ್ತಿಯಲ್ಲಿ ಪಕ್ಕಾ ಉರಗ ರಕ್ಷಕ.
ಅಮರ ಬಡಿಗೇರ್ ಓದಿದ್ದು ನಾಲ್ಕನೇ ತರಗತಿ. ಆದ್ರೂ, ಹಾವುಗಳ ಬಗ್ಗೆ ಎಲ್ಲಿಲ್ಲದ ಕುತೂಹಲ. ಹೀಗೆ ಹಾವು ಹಿಡಿದು ಅವುಗಳ ರಕ್ಷಣೆ ಮಾಡಬೇಕೆಂದು ಯೂಟ್ಯೂಬ್ನಲ್ಲಿ ಹುಡುಕಾಡಿದ್ರು. ಮೊದಲೇ ಹಾವುಗಳ ಬಗ್ಗೆ ಇವ್ರಿಗಿದ್ದ ಕಾಳಜಿಗೆ ತಕ್ಕ ಹಾಗೆ ಯೂಟ್ಯೂಬ್ನಲ್ಲಿ ಸೂಕ್ತ ತರಬೇತಿ ವಿಡಿಯೋವೊಂದು ಸಿಕ್ಕಿತ್ತು. ಅದರಿಂದಲೇ ಹಾವುಗಳ ರಕ್ಷಣೆ ಬಗ್ಗೆ ತಿಳಿದುಕೊಂಡ ಅಮರ ಬಡಿಗೇರ್. ಬಳಿಕ ನೇರವಾಗಿ ಇಳಿದಿದ್ದೇ ಉರಗ ರಕ್ಷಣೆಯ ಫೀಲ್ಡ್ಗೆ.
ಇದನ್ನೂ ಓದಿ: Potraj Dance: ಪೋತರಾಜ ಕುಣಿತದ ಬಗ್ಗೆ ನಿಮಗೆಷ್ಟು ಗೊತ್ತು? ಇವರೇ ನೋಡಿ ವಿಶೇಷ ಕಲಾವಿದ
ಗ್ರಾಮಸ್ಥರ ಪಾಲಿಗೆ ಆಪ್ತರಕ್ಷಕ
ಯೆಸ್, ಈಗ ಕೆಸರಿಟಗಿ ಮಾತ್ರವಲ್ಲ ಸುತ್ತುಮುತ್ತಲಿನ ಗ್ರಾಮಗಳಲ್ಲಿ ಅದೆಂತಹದ್ದೇ ಹಾವುಗಳು ಬಂದರೂ ಗ್ರಾಮಸ್ಥರು ಮೊದಲು ಕರೆ ಮಾಡುವುದೇ ಅಮರ ಬಡಿಗೇರ ಅವ್ರಿಗೆ. ತಕ್ಷಣ ಅಲ್ಲಿಗೆ ಹೋಗೋ ಅಮರ ಬಡಿಗೇರ ಕ್ಷಣಾರ್ಧದಲ್ಲಿ ಸಲಾಕೆ ಸಹಾಯದಿಂದ ಹಾವುಗಳನ್ನ ಸೆರೆ ಹಿಡಿಯುತ್ತಾರೆ. ಬಳಿಕ ಕಾಡಿಗೆ ತೆರಳಿ ಅವುಗಳನ್ನ ಸುರಕ್ಷಿತವಾಗಿ ಗಡಿ ದಾಟಿಸುತ್ತಾರೆ. ಹೀಗೆ ಅಮರ ಬಡಿಗೇರ ಗ್ರಾಮಸ್ಥರ ಪಾಲಿಗೆ ಉರಗದ ವಿಚಾರದಲ್ಲಿ ಆಪ್ತರಕ್ಷಕನೇ ಆಗಿದ್ದಾರೆ.
ಯೂಟ್ಯೂಬ್ ನೋಡಿ ಕಲಿತದ್ದೇ ಅಚ್ಚರಿ!
ಅಮರ ಬಡಿಗೇರ್ ಅವರು ವಿಷಕಾರಿಯಾಗಿರುವ ಕೊಳಕು ಮಂಡಲ, ಗರಗಸ ಮಂಡಲ ನಾಗರಹಾವು ಹೀಗೆ ಹಲವು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಕಳೆದ ಕೆಲದಿನಗಳ ಹಿಂದೆ ಕಬ್ಬಿನಗದ್ದೆಯಲ್ಲಿ ಕಾಣಿಸಿಕೊಂಡ ಬೃಹತ್ ಹೆಬ್ಬಾವನ್ನು ಹಿಡಿದು ಸೈ ಎನಿಸಿಕೊಂಡಿದ್ರು. ಹೀಗೆ ಯೂಟ್ಯೂಬ್ ನೋಡಿ ಹಾವು ಹಿಡಿಯೋದನ್ನ ಕಲಿತ ಅಮರ ಬಡಿಗೇರ್ ಈಗ ಪೂರ್ಣ ಪ್ರಮಾಣದ ಉರಗ ರಕ್ಷಕನಾಗಿ ಬದಲಾಗಿದ್ದಾರೆ.
(ಯೂಟ್ಯೂಬ್ ನೋಡಿ ಹಾವು ಹಿಡಿಯುವ ಯಾವುದೇ ಅಂಶಗಳನ್ನೂ ನ್ಯೂಸ್ 18 ಕನ್ನಡ ಪ್ರೋತ್ಸಾಹಿಸುವುದಿಲ್ಲ)
ಅಮರ ಬಡಿಗೇರ್ ಅವರ ಸಂಪರ್ಕ ಸಂಖ್ಯೆ: 6364 667 897
ವರದಿ: ಶ್ರೀಕಾಂತ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ