• Home
 • »
 • News
 • »
 • kalburgi
 • »
 • Kalaburagi: ವೀರಭದ್ರೇಶ್ವರ ದೇವರ ಪವಾಡ! ಭಕ್ತರ ಕೆಂಡ ಹಾಯೋ ಸಾಹಸ!

Kalaburagi: ವೀರಭದ್ರೇಶ್ವರ ದೇವರ ಪವಾಡ! ಭಕ್ತರ ಕೆಂಡ ಹಾಯೋ ಸಾಹಸ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಪುರವಂತರು ರೋಮಾಂಚನಗೊಳಿಸುವ ಪ್ರದರ್ಶನ ನೀಡಿದರು. ಮೊನಚಾದ ತಂತಿಯಂತಿರುವ ಶಸ್ತ್ರಗಳನ್ನು ಚರ್ಮದೊಳಗೆ ಚುಚ್ಚಿ ಹೊರತೆಗೆಯುವ ಪುರವಂತರ ಪ್ರದರ್ಶನ ನೋಡುಗರನ್ನು ನಿಬ್ಬೆರಗಾಗಿಸಿತು.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ನಿಗಿನಿಗಿ ಕೆಂಡ ಹಾಯೋ ಮಹಿಳೆಯರು, ಮಕ್ಕಳು, ವಯಸ್ಕರು ಶಸ್ತ್ರಗಳನ್ನು ಹಿಡಿದು ಶಕ್ತಿ ಪ್ರದರ್ಶನ ಮೆರೆದ ಪುರುಷರು! ಇಂತಹ ಮೈ ಝುಮ್ ಅನ್ನಿಸೋ ದೃಶ್ಯ ಕಂಡಿದ್ದು ವೀರಭದ್ರೇಶ್ವರ ಜಾತ್ರೆಯಲ್ಲಿ. ಇಲ್ಲಿನ ಜಾತ್ರೆ ಅಂದ್ರೆನೆ ಹಾಗೆ, ಅಲ್ಲಿ ಕೆಂಡ ಹಾಯೋದು, ಸಾಹಸ ಮೆರೆಯೋದು ಭಕ್ತಿಯ ಪರಾಕಾಷ್ಠೆಯ ಶಕ್ತಿ ಪ್ರದರ್ಶನ ಎಲ್ಲಾ ಇರುತ್ತೆ! ಕಲಬುರಗಿ ನಗರದ (Kalaburagi News) ರೋಜಾ ಬಡಾವಣೆಯಲ್ಲಿರುವ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವರ ಜಾತ್ರೆಯು (Veerabhadreshwara Fair)  ಹತ್ತು ಹಲವು ವಿಶೇಷತೆಗಳಿಗೆ ಪ್ರಸಿದ್ಧಿ. ಹಾಗಾಗಿಯೇ ಈ ಜಾತ್ರೆಗೆ ಸಾವಿರಾರು ಮಂದಿ ಆಗಮಿಸ್ತಾರೆ.


  ಭಕ್ತರ ಭಕ್ತಿ ಪರಾಕಾಷ್ಠೆ, ಸಾಹಸ ಮೈ ನವಿರೇಳಿಸುತ್ತೆ. ಕೆಂಡ ಹಾಯೋದಕ್ಕಂತೂ ಮಕ್ಕಳು, ಮಹಿಳೆಯರು, ಹೆಣ್ಮಕ್ಕಳು, ಹಿರಿಯರು, ಕಿರಿಯರೆಲ್ಲರೂ ಹೆಜ್ಜೆ ಹಾಕ್ತಾರೆ.


  ಇದನ್ನೂ ಓದಿ: Kalaburagi Rose: ಕಲಬುರಗಿ ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ದಿನಕ್ಕೆ 3 ಸಾವಿರ ಆದಾಯ!


  ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿ ಜಾತ್ರೆ
  ಕಳೆದ ಎರಡು ವರ್ಷಗಳ ಕಾಲ ಕೋವಿಡ್​ನಿಂದ ಜಾತ್ರೋತ್ಸವ ನಡೆದಿರಲಿಲ್ಲ. ಈ ವರ್ಷ ಕೊರೊನಾ ಕಂಟಕ ಕಡಿಮೆಯಾಗಿದ್ರಿಂದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.


  ರೋಮಾಂಚನಗೊಳಿಸುವ ಪ್ರದರ್ಶನ
  ಪುರವಂತರು ರೋಮಾಂಚನಗೊಳಿಸುವ ಪ್ರದರ್ಶನ ನೀಡಿದರು. ಮೊನಚಾದ ತಂತಿಯಂತಿರುವ ಶಸ್ತ್ರಗಳನ್ನು ಚರ್ಮದೊಳಗೆ ಚುಚ್ಚಿ ಹೊರತೆಗೆಯುವ ಪುರವಂತರ ಪ್ರದರ್ಶನ ನೋಡುಗರನ್ನು ನಿಬ್ಬೆರಗಾಗಿಸಿತು.


  ಇದನ್ನೂ ಓದಿ: Kalaburagi Viral Video: ಕತ್ತಲಾಗುತ್ತಿದ್ದಂತೆ ಕಾಣಿಸಿಕೊಂಡ ದೈತ್ಯ ಹೆಬ್ಬಾವು!


  ಒಟ್ಟಿನಲ್ಲಿ ವೀರಭದ್ರೇಶ್ವರ ಜಾತ್ರೆ ಸಾಹಸದ ಜೊತೆಗಿನ ಭಕ್ತಿಯ ಪ್ರದರ್ಶನಕ್ಕೂ ಒಂದು ವೇದಿಕೆಯಿದ್ದಂತು. ಶಕ್ತಿ ಆರಾಧನೆಯ ವೀರಭದ್ರನನ್ನು ಒಲಿಸಿಕೊಳ್ಳಲು ಭಕ್ತರು ಇಂತಹ ಸಾಹಸ ಪ್ರದರ್ಶಿಸಿದ್ರೆ, ನೆರೆದವರೆಲ್ಲ ಉಘೇ ಉಘೇ ಅಂತಾ ಪ್ರೋತ್ಸಾಹಿಸಿದರು.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: