ವರವ ಕೊಡೆ ಮಹಾಲಕ್ಷ್ಮೀ
ಮನೆಯೆಲ್ಲ ಅಲಂಕಾರ, ಬಾಳೆಗಿಡ, ವಿಧವಿಧದ ಹೂವು, ಚಂದಚಂದದ ತೋರಣ..ಸ್ವತಃ ಮಹಾಲಕ್ಷ್ಮಿಯಂತೆಯೇ ಕಾಣುವ ಹೆಂಗಳೆಯರು. ಮನೆಯ ತುಂಬೆಲ್ಲ ಪೂಜೆ ಪುನಸ್ಕಾರ.. ಭಕ್ತಿ ಭಾವ. ತೊಗರಿ ಕಣಜ, ಶರಣ ಸಂತರ ನಾಡು ಕಲಬುರಗಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ (Varamahalakshmi Vratha 2022) ಝಲಕ್ ಇದು. ಕಲಬುರಗಿಯ (Temple In Kalaburagi) ಹಲವು ದೇವಸ್ಥಾನಗಳಲ್ಲೂ ಮಹಾಲಕ್ಷ್ಮಿ ದೇವಿಯ ಆರಾಧನೆ ಸಂಭ್ರಮ ಕಳೆಗಟ್ಟಿತ್ತು. ಹಲವು ಬಡಾವಣೆಗಳಲ್ಲೂ ಸಂಭ್ರಮ ಮುಗಿಲು ಮುಟ್ಟಿತ್ತು. ವರಮಹಾಲಕ್ಷ್ಮಿ ಹಬ್ಬಕ್ಕೆಂದೇ ಒಂದು ವಾರದಿಂದ ತಯಾರಿ ಜೋರಾಗಿತ್ತು.
ಮುತ್ತೈದೆಯರು ಮನೆಯಲ್ಲಿ ಮಹಾಲಕ್ಷ್ಮಿಯ ಮೂರ್ತಿ ಪ್ರತಿಷ್ಠಾಪಿಸಿ ರೇಷ್ಮೆ ಸೀರೆ ತೊಡಿಸಿ, ಮಹಾಲಕ್ಷ್ಮಿಗೆ ಇಷ್ಟವಾದ ಕಮಲ, ತಾವರೆ, ಗುಲಾಬಿ, ಸೇವಂತಿ, ಮಲ್ಲಿಗೆ ಹೂವು ಹೂಗಳಿಂದ ಮಹಾಲಕ್ಷ್ಮಿಗೆ ಅಲಂಕಾರ ಮಾಡಿದ್ರು.
ಇದನ್ನೂ ಓದಿ: Bengaluru Holige: ಹಬ್ಬ ಮಿಸ್ಸಾದ್ರೂ ಹೋಳಿಗೆ ಮಿಸ್ ಮಾಡ್ಬೇಡಿ! ಈ ಹೋಳಿಗೆ ರುಚಿ ಬೇರೆಲ್ಲೂ ಸಿಗಲ್ಲ!
ವಿಧವಿಧವಾದ ಖಾದ್ಯಗಳನ್ನು ತಯಾರಿಸಿ ದೇವಿಗೆ ಅರ್ಪಿಸಿದ್ರು. ಅಲ್ದೇ ದಿನವಿಡಿ ವ್ರತ ನೆರವೇರಿಸಿ. ಮುತ್ತೈದೆಯರೆಲ್ಲ ಸೇರಿಕೊಂಡು ಅತ್ಯಂತ ಶ್ರದ್ಧಾಭಕ್ತಿಯಿಂದ ವರವ ಕೊಡೇ ಮಹಾಲಕ್ಷ್ಮಿ ಎಂದು ದೇವಿಯಲ್ಲಿ ಪಾರ್ಥನೆಯನ್ನು ಸಲ್ಲಿಸಿದ್ರು.
ಇದನ್ನೂ ಓದಿ: Nag Panchami Vijayapura: ಎಳ್ಳು, ಹೋಳಿಗೆ, ಉಂಡೆ, ಅರಿಶಿನ ದಾರ! ವಿಜಯಪುರದಲ್ಲಿ ಹೀಗಿತ್ತು ನಾಗರ ಪಂಚಮಿ
ಇನ್ನೂ ವಿಶೇಷ ಅಂದ್ರೆ ಐವಾನ್ ಶಾಹಿ ಏರಿಯಾದಲ್ಲಿರುವ ಉದ್ಯಮಿ ಸತೀಶ್ ಗುತ್ತೇದಾರ್ ಮನೆಯಲ್ಲಿ ವಿಶೇಷ ಪೂಜೆ ಮಾಡಲಾಯ್ತು. ಲಕ್ಷ್ಮಿಗೆ ಹೂಹಣ್ಣಿನ ಶೃಂಗಾರ ಕಣ್ಮನ ಸೆಳೀತಿತ್ತು. ಮುತೈದೆಯರು ಮಹಾಲಕ್ಷ್ಮಿಯ ವಿಗ್ರಹಕ್ಕೆ ಪೂಜಿಸಿ ಸಂಭ್ರಮಿಸಿದ್ರು. ಎಲ್ರೂ ಸೇರ್ಕೊಂಡು ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥನೆ ಮಾಡಿಕೊಂಡ್ರು.
ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ
ನಿಮ್ಮ ಜಿಲ್ಲೆಯಿಂದ (ವಿಜಯಪುರ)
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ