• Home
  • »
  • News
  • »
  • kalburgi
  • »
  • Kalaburagi: 5 ಸಾವಿರ ಜನರು ಒಟ್ಟಿಗೆ ಪ್ರಾರ್ಥಿಸುವಷ್ಟು ದೊಡ್ಡ ಕಲಬುರಗಿ ಮಸೀದಿ!

Kalaburagi: 5 ಸಾವಿರ ಜನರು ಒಟ್ಟಿಗೆ ಪ್ರಾರ್ಥಿಸುವಷ್ಟು ದೊಡ್ಡ ಕಲಬುರಗಿ ಮಸೀದಿ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಕಲಬುರಗಿ ಕೋಟೆ ಆವಣದಲ್ಲಿರುವ ಈ ಜಾಮಿಯಾ ಮಸೀದಿಯು ಏಷ್ಯಾದಲ್ಲಿಯೇ ಅತಿ ದೊಡ್ಡ ಮಸೀದಿ ಎಂಬ ಖ್ಯಾತಿಯನ್ನೂ ಪಡೆದಿದೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಸುತ್ತಲೂ ಎತ್ತರದ ಗೋಡೆ, ವಿಭಿನ್ನ ಶೈಲಿಯ ಕೆತ್ತನೆ, ಅಲ್ಲಲ್ಲಿ ಮೇಳೈಸಿ ಗಮನಸೆಳೆಯುವ ಶಿಲ್ಪಕಲೆ. ಇದು ಯಾವುದೋ ಅರಮನೆಯಲ್ಲ, ಬದಲಿಗೆ ಆರಾಧನಾ ಸ್ಥಳ. ಇದುವೇ ಕಲಬುರಗಿ ಜಿಲ್ಲೆಯಲ್ಲಿರೋ ಬಹುಮನಿ ಸುಲ್ತಾನರ (Bahmani Sultans) ಕಾಲದ ಭವ್ಯ ಮಸೀದಿ. ವಿಶ್ವದ ಅತಿ ದೊಡ್ಡ ಫಿರಂಗಿ ಇರುವುದು ಕಲಬುರಗಿಯ ಕೋಟೆಯಲ್ಲಿ. ಅಷ್ಟೆ ಅಲ್ಲ, ಕಲಬುರಗಿಯ ಕೋಟೆಯಲ್ಲಿ  (Kalaburagi Fort)ಇನ್ನೊಂದು ವಿಶೇಷತೆ ಕೂಡ ಇದೆ. ಅದೇ ಕಲಬುರಗಿ ಕೋಟೆ ಆವಣದಲ್ಲಿರುವ ಈ ಜಾಮಿಯಾ ಮಸೀದಿಯು (Jamia Masjid) ಏಷ್ಯಾದಲ್ಲಿಯೇ ಅತಿ ದೊಡ್ಡ ಮಸೀದಿ ಎಂಬ ಖ್ಯಾತಿಯನ್ನೂ ಪಡೆದಿದೆ. ಅತ್ಯಂತ ಅದ್ಭುತ ಮಸೀದಿ ಅಂತಾನೂ ಈ ಮಸೀದಿ ಹೆಸರು ಪಡೆದಿದೆ.


    ಈ ಮಸೀದಿಯ ವಿನ್ಯಾಸವು ಸ್ಪೇನ್​ನ ಕಾರ್ಡೊಬಾದ ಮಸೀದಿಗೆ ಹೋಲುತ್ತದೆ ಅಂತಾರೆ ಇತಿಹಾಸಕಾರರು. ಜೊತೆಗೆ ಇದು ಬಹಮನಿ ಸುಲ್ತಾನರ ಕಾಲದ ಬಹುದೊಡ್ಡ ಕೊಡುಗೆ ಎಂದೇ ಭಾವಿಸಲಾಗಿದೆ.


    ಚಿತ್ತಾಕರ್ಷಕ ಈ ಮಸೀದಿ
    ಕ್ರಿ.ಶ 1367ರಲ್ಲಿ ಪರ್ಷಿಯನ್ ಶೈಲಿಯಲ್ಲಿ ಇದನ್ನ ನಿರ್ಮಿಸಲಾಗಿದೆ. ಪರ್ಷಿಯನ್ ಖ್ಯಾತ ವಾಸ್ತುಶಿಲ್ಪಕಾರ ರಫಿ ಇದರ ವಿನ್ಯಾಸಕಾರ. ಮಸೀದಿಯ ಪ್ರವೇಶ ದ್ವಾರ 50 ಮೀಟರ್ ಇದ್ದು ಬೃಹತ್ ಕಮಾನುಗಳು ಚಿತ್ತಾಕರ್ಷಕವಾಗಿದೆ.


    ಇದನ್ನೂ ಓದಿ: Kalaburagi: ಸಗಣಿಯಿಂದ ಹಣತೆ! ಬೆಳಗಲಿವೆ 2 ಲಕ್ಷಕ್ಕೂ ಹೆಚ್ಚು ದೀಪಗಳು!


    ಇನ್ನೂ ಏನೆಲ್ಲ ಇದೆ ಗೊತ್ತೇ?
    ಹೀಗೆ 250 ಕಮಾನುಗಳು ಅಡ್ಡಲಾಗಿ ಸ್ಥಾಪಿಸಲಾಗಿದೆ. ಕಟ್ಟಡದ ಕೇಂದ್ರದಲ್ಲಿ ಒಂದು ದೊಡ್ಡ ಗುಮ್ಮಟ, ಪ್ರತಿ ಮೂಲೆಯಲ್ಲಿ ನಾಲ್ಕು ಮಧ್ಯಮ ಗಾತ್ರದ ಗುಮ್ಮಟಗಳು ಮತ್ತು 107 ಸಣ್ಣ ಗುಮ್ಮಟಗಳನ್ನು ಒಳಗೊಂಡಿರುವ ಮೇಲ್ಛಾವಣಿಯಿದೆ. ಏಕಕಾಲಕ್ಕೆ ಮಸೀದಿ ಒಳಭಾಗದಲ್ಲಿ 5 ಸಾವಿರ ಮಂದಿ ಪ್ರಾರ್ಥನೆ ಸಲ್ಲಿಸಬಹುದು, ಅಷ್ಟು ದೊಡ್ಡದು ಈ ಮಸೀದಿ. ಅಂದಹಾಗೆ ಈ ಮಸೀದಿ ನಿರ್ಮಿಸಿದ್ದು ಒಂದನೇ ಮೊಹಮ್ಮದ್ ಷಾ.


    Kalaburagi Fort
    ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಇದನ್ನೂ ಓದಿ: Kalaburagi: ಈ ಡಾಕ್ಟರ್ ಫೀಸ್ 10 ರೂಪಾಯಿ ಮಾತ್ರ!


    ಈ ಕೋಟೆಯು ಕಲಬುರಗಿ ವಿಮಾನ ನಿಲ್ದಾಣದಿಂದ 15 ಕಿ.ಮೀ ಹಾಗೂ ರೈಲ್ವೆ ನಿಲ್ದಾಣದಿಂದ ಕೇವಲ 4ಕಿ.ಮೀ ಅಂತರವಿದಲ್ಲಿದೆ. ಬಸ್ ನಿಲ್ದಾಣ ಕೂಡ ತುಂಬಾ ಹತ್ತಿರದಲ್ಲಿದೆ. ಇನ್ನು ಕಲಬುರಗಿಗೆ ಬಂದ ತಕ್ಷಣ ಆಟೋ ಹಾಗೂ ವಿಮಾನ ನಿಲ್ದಾಣದಿಂದ ಕ್ಯಾಬ್ ದೊರೆಯುತ್ತವೆ. ಇಲ್ಲಿಗೆ ಆಗಮಿಸಿದ್ರೆ ಈ ಮಸೀದಿಯನ್ನ ಸ್ಥಳೀಯ ಇನ್ನಿತರ ಐತಿಹಾಸಿಕ ತಾಣಗಳ ಜೊತೆಗೆ ವೀಕ್ಷಿಸಿ ಖುಷಿ ಪಡಬಹುದಾಗಿದೆ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: