ಅಬ್ಬಬ್ಬ! ಜನವೋ ಜನ, ಅದೇನು ನೂಕು ನುಗ್ಗಲು! ಅಪಾರ ಜನಸಾಗರದ ಮಧ್ಯೆಯೇ ಆಗಮಿಸಿದ ಸ್ವಾಮೀಜಿಗೆ ಭವ್ಯ ಸ್ವಾಗತ! ಅಷ್ಟಕ್ಕೂ ಈ ಸ್ವಾಮೀಜಿಗಳಿಗೆ (Swamiji) ಹೀಗೆ ಸ್ವಾಗತ ಮಾಡೋದಕ್ಕೂ ಕಾರಣವಿದೆ. ಅದೇನು ಅಂತೀರಾ? ಹೇಳ್ತೀವಿ ನೋಡಿ. ಈ ಜನಸಾಗರದ ನಡುವೆ ಹಾದು ಬರುತ್ತಿರೋ ಇವ್ರು ಕಲಬುರಗಿಯ ಕಮಲಾಪುರ ತಾಲೂಕಿನ (Kamalapur) ಮುತ್ಯನ ಬಬಲಾದ್ ಚನ್ನವೀರೇಶ್ವರ ಮಠದ ಗುರುಪಾದಲಿಂಗ ಶಿವಯೋಗಿ ಸ್ವಾಮಿಗಳು. ಕಳೆದ 111 ದಿನಗಳ ಕಾಲ ಹಸಿವು (Fasting) ಮರೆತು, ಮೌನ ಧರಿಸಿ (Mouna Vritha) ವೃತಾಚರಣೆಯಲ್ಲಿದ್ದರು.
ಇದೀಗ ಸ್ವಾಮೀಜಿಗಳ ವೃತಾಚರಣೆ ಮುಗಿದಿದೆ. ಹೀಗಾಗಿ ಗುರು ಚನ್ನವೀರೇಶ್ವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲು ಸ್ವಾಮಿಗಳನ್ನ ಭಕ್ತರು ಪುಷ್ಪಾರ್ಚನೆ ಮಾಡಿ ಬರಮಾಡಿಕೊಂಡರು.
ಇದನ್ನೂ ಓದಿ: Anti Rape Footwear: ಅತ್ಯಾಚಾರ ತಡೆಯುತ್ತೆ ಈ ಚಪ್ಪಲಿ! ಕಲಬುರಗಿ ವಿದ್ಯಾರ್ಥಿನಿಯಿಂದ ಸಂಶೋಧನೆ
11 ಸಾವಿರ ಮುತ್ತೈದೆಯರಿಗೆ ಉಡಿ ತುಂಬಲಾಯ್ತು
ಈ ವಿಶೇಷ ಸಮಾರಂಭದ ನಿಮಿತ್ತ ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಇದೇ ವೇಳೆ 11 ಸಾವಿರ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ವಿಶೇಷ ಕಾರ್ಯಕ್ರಮವನ್ನೂ ನಡೆಸಲಾಯ್ತು.
ಇದನ್ನೂ ಓದಿ: Kalaburagi: ತೆಲಂಗಾಣದಿಂದ ಕರ್ನಾಟಕಕ್ಕೆ ಉರುಳು ಸೇವೆ ಮಾಡಿದ ಮಹಿಳೆ!
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆ ಮಾತ್ರವಲ್ಲದೇ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ರು. ಗುರುಪಾದ ಶಿವಯೋಗಿಗಳಿಗೆ ಜೈಕಾರ ಹಾಕಿದರು.
ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ