• Home
  • »
  • News
  • »
  • kalburgi
  • »
  • Sheep Farming: ಕುರಿ ಸಾಕಾಣಿಕೆದಾರರಿಗೆ ಶುಭಸುದ್ದಿ, ವಿಮೆ, ಡಿಜಿಟಲ್ ಮಾರ್ಕೆಟಿಂಗ್ ಸೌಲಭ್ಯ ಘೋಷಣೆ

Sheep Farming: ಕುರಿ ಸಾಕಾಣಿಕೆದಾರರಿಗೆ ಶುಭಸುದ್ದಿ, ವಿಮೆ, ಡಿಜಿಟಲ್ ಮಾರ್ಕೆಟಿಂಗ್ ಸೌಲಭ್ಯ ಘೋಷಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2019ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಒಂದು ಕೋಟಿ 20 ಲಕ್ಷ ಕುರಿಗಳು, 52 ಲಕ್ಷ ಮೇಕೆಗಳಿದ್ದು, 12 ಲಕ್ಷ ಕುಟುಂಬಗಳು ಕುರಿ, ಮೇಕೆ ಸಾಕಣೆಯನ್ನೇ ಅವಲಂಬಿಸಿರುವುದನ್ನು ವರದಿ ಬಹಿರಂಗಪಡಿಸಿದೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಕುರಿಗಾಹಿಗರು ಆಕಸ್ಮಿಕ, ಅಕಾಲಿಕ ನಿಧನ ಹೊಂದಿದರೆ ವಿಮಾ ಸೌಲಭ್ಯ ಯೋಜನೆಯಡಿ (Insurance Package) ಅವರ ಕುಟುಂಬದ ಅವಲಂಬಿತರಿಗೆ ರೂ. 5 ಲಕ್ಷ ಪರಿಹಾರದ ಜತೆಗೆ ನಿಗಮದಿಂದ ವಿಮೆ ಪ್ರೀಮಿಯಂ (Sheep Insurance) ಭರಿಸುವ ರಾಜ್ಯ ಸರಕಾರದ ಮಹತ್ವದ ಯೋಜನೆ ಪ್ರಸಕ್ತ ಸಾಲಿನಿಂದ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಈ ಹಿಂದೆ ಕುರಿಗಳು ಅಕಾಲಿಕ ಸಾವನ್ನಪ್ಪಿದರೆ ಅನುಗ್ರಹ ಯೋಜನೆಯಡಿ ಪ್ರತಿ ಕುರಿಗೆ ರೂ.5 ಸಾವಿರ ಪರಿಹಾರ ನೀಡಲಾಗುತ್ತಿತ್ತು. ಇದೀಗ ರಾಜ್ಯ ಸರ್ಕಾರ (Karnataka Government) ಒಂದು ಹೆಜ್ಜೆ ಮುಂದೆ ಹೋಗಿ ಕುರಿಗಾರರು ಅಕಾಲಿಕ ನಿಧನ ಹೊಂದಿದ್ರೆ ವಿಮಾ ಸೌಲಭ್ಯ ಯೋಜನೆಯಡಿ ಅವರ ಕುಟುಂಬಸ್ಥರಿಗೆ ರೂ.5 ಲಕ್ಷ ಪರಿಹಾರದ ಜತೆಗೆ ನಿಗಮದಿಂದ ವಿಮೆ ಪ್ರೀಮಿಯಂ ಭರಿಸುವ ಆಲೋಚಿಸಿದೆ‌ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡ್ಡಮನಿ ಮಾಹಿತಿ ನೀಡಿದ್ದಾರೆ.


    ಸಂಘಗಳ ಪುನಶ್ಚೇತನಕ್ಕೂ ಧನಸಹಾಯ
    2019ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಒಂದು ಕೋಟಿ 20 ಲಕ್ಷ ಕುರಿಗಳು, 52 ಲಕ್ಷ ಮೇಕೆಗಳಿದ್ದು, 12 ಲಕ್ಷ ಕುಟುಂಬಗಳು ಕುರಿ, ಮೇಕೆ ಸಾಕಣೆಯನ್ನೇ ಅವಲಂಬಿಸಿರುವುದನ್ನು ವರದಿ ಬಹಿರಂಗಪಡಿಸಿದೆ.  ರಾಜ್ಯದಲ್ಲಿ 634 ಕುರಿಗಾರರ ಸಂಘ ಇದ್ದು, 567 ಚಾಲನೆಯಲ್ಲಿವೆ. ಈ ಸಂಘಗಳ ಪುನಶ್ಚೇತನಕ್ಕಾಗಿ ರೂ.5 ಲಕ್ಷ ಸಹಾಯಧನವನ್ನು ನೀಡಲು ನಿರ್ಧರಿಸಿದೆ. 337 ಸಂಘಗಳು ಇದರ ಲಾಭ ಪಡೆದಿವೆ. ವಲಸೆ ಕುರಿಗಾರರಿಗೆ ಪ್ರಕೃತಿ ವಿಕೋಪ ರಕ್ಷಣೆಗೆ ಪರಿಕರ ಕಿಟ್‌ ಯೋಜನೆ ಕೂಡ ಜಾರಿಯಲ್ಲಿದ್ದು ಕುರಿಗಾರರು ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.


    ಇದನ್ನೂ ಓದಿ: Guleda Lakkamma: ಚಪ್ಪಲಿಯಿಂದ ಮುಖ, ಮೈಕೈ ಸವರಿಕೊಂಡ್ರೆ ಒಳ್ಳೇದು ಮಾಡುವ ದೇವರು!


    ಡಿಜಿಟಲ್‌ ಮಾರ್ಕೆಟಿಂಗ್‌
    ಕುರಿ ಸಾಕಾಣಿಕೆದಾರರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕುರಿ ಹಾಗೂ ಮೇಕೆ ಮಾರಾಟಕ್ಕೆ ಡಿಜಿಟಲ್‌ ಮಾರ್ಕೆಟಿಂಗ್‌ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ರೂ.350 ಕೋಟಿ ಅನುದಾನ ನೀಡುವ ಮೂಲಕ ವಿನೂತನ ಯೋಜನೆ ಜಾರಿ ಮಾಡಲು ಸಮ್ಮತಿಸಿದ್ದಾರೆ. ಈ ಯೋಜನೆ ಅಡಿ ಒಬ್ಬ ಫಲಾನುಭವಿಗೆ ರೂ.1.75 ಲಕ್ಷ ಅನುದಾನ ನೀಡಲಾಗುತ್ತಿದೆ, ಇದರಲ್ಲಿ ಫಲಾನುಭವಿ ಶೇ.25ರಷ್ಟು ಭರಿಸುವುದು, ರಾಜ್ಯ ಸರಕಾರ ಶೇ.25 ಸಬ್ಸಿಡಿ, ಶೇ.50ರಷ್ಟು ಎನ್‌ಸಿಡಿಸಿ ಸಾಲ ನೀಡಲಿದೆ ಎಂದು ತಿಳಿಸಿದ್ದಾರೆ.


    ಕುರಿ ತಳಿ ಅಭಿವೃದ್ಧಿ ಪಡಿಸಲು ಸಬ್ಸಿಡಿ
    ನಿಗಮದ ಅಧೀನದಲ್ಲಿ ವಿವಿಧ ಕುರಿ ತಳಿ ಅಭಿವೃದ್ಧಿ ಪಡಿಸಿ ಸಬ್ಸಿಡಿ ದರದಲ್ಲಿ ಟಗರು, ಮೇಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಬಂಡೂರಿ ತಳಿ, ಯಳಗಾ, ಕೆಂಗುರಿ, ಡೆಕ್ಕನಿ, ಬಳ್ಳಾರಿ, ಉಸ್ಮನಾಬಾದಿ ಮತ್ತು ನಾರಿ ಸುವರ್ಣ ತಳಿ ರೈತರಿಗೆ ಸಬ್ಸಿಡಿ ದರದಲ್ಲಿ ಸರ್ಕಾರದಿಂದ ನೀಡಲಾಗುತ್ತಿದೆ ಜೊತೆಗೆ ಕುರಿ ಸಾಕಾಣಿಕೆದಾರರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಪ್ರತಿ ಫಲಾನುಭವಿಗೆ ರೂ.1.75 ಲಕ್ಷ ಆರ್ಥಿಕ ನೆರವು ಒದಗಿಸಲಾಗುತ್ತಿದೆ.


    ಇದನ್ನೂ ಓದಿ: Kalaburagi Mirchi: ಕಲಬುರಗಿ‌ ಮಿರ್ಚಿ ಸಖತ್ತೋ ಸಖತ್ತು! ತಿಂದವರಿಗೆ ಗಮ್ಮತ್ತೋ ಗಮ್ಮತ್ತು!


    ಕುರಿಗಾರರು ಹಾಗೂ ರೈತರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವ ಮೂಲಕ ಅಭಿವೃದ್ದಿ ಹೊಂದಬೇಕು ಎಂದು ರಾಜ್ಯ ಕುರಿ, ಉಣ್ಣೆ ಅಭಿವೃದ್ಧಿ ನಿಗಮ ಅಧ್ಯಕ್ಷ ಧರ್ಮಣ್ಣ ದೊಡ್ಡಮನಿ ಸಲಹೆ ನೀಡಿದ್ದಾರೆ.


    ವರದಿ:ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: