• Home
  • »
  • News
  • »
  • kalburgi
  • »
  • Rotti Jatre: ರೊಟ್ಟಿ ಜಾತ್ರೆ! 24 ಗಂಟೆ ಎಷ್ಟು​ ಬೇಕೋ ಅಷ್ಟು ರೊಟ್ಟಿ ಸವಿಯಿರಿ!

Rotti Jatre: ರೊಟ್ಟಿ ಜಾತ್ರೆ! 24 ಗಂಟೆ ಎಷ್ಟು​ ಬೇಕೋ ಅಷ್ಟು ರೊಟ್ಟಿ ಸವಿಯಿರಿ!

ರೊಟ್ಟಿ ಜಾತ್ರೆಯ ವಿಡಿಯೋ ನೋಡಿ

"ರೊಟ್ಟಿ ಜಾತ್ರೆಯ ವಿಡಿಯೋ ನೋಡಿ"

ಮಠ ಹಾಗೂ ಭಕ್ತರಿಂದ ಜರುಗುವ ಈ ವಿಶೇಷ ರೊಟ್ಟಿ ಜಾತ್ರೆಯಲ್ಲಿ ಈ ವರ್ಷ 32 ಕ್ವಿಂಟಲ್ ಸಜ್ಜೆ ರೊಟ್ಟಿ, 10 ಕ್ವಿಂಟಲ್ ಬಿಳಿ ಜೋಳದ ರೊಟ್ಟಿಗಳನ್ನ ಸಿದ್ದಪಡಿಸಲಾಗಿತ್ತು.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಒಂದೆಡೆ ರಾಶಿಗಟ್ಟಲೆ ಕಾಣ್ತಿರುವ ರೊಟ್ಟಿ, ಇನ್ನೂಂದೆಡೆ ಭಕ್ತಿ ಭಾವದಲ್ಲಿ ತಲ್ಲೀನರಾಗಿರುವ ಸಾವಿರಾರು ಭಕ್ತಗಣ. ಮತ್ತೊಂದೆಡೆ ಭಜ್ಜಿ, ಖಡಕ್ ರೊಟ್ಟಿ ಆಸ್ವಾದಿಸುತ್ತಿರೋ ಜನರು. ಇದು ಕಲಬುರಗಿಯ (Kalaburagi) ಶಾಖಾಪುರ ಮಠದ ರೊಟ್ಟಿ ಜಾತ್ರೆ (Rotti Festival Kalaburagi)  ವಿಶೇಷ. ಸಹಸ್ರಾರು ಮಂದಿ ಸೇರಿದ್ರೂ ಇಲ್ಲಿ ಜಾತಿ ಮತ ನೋಡದೇ ರೊಟ್ಟಿ ನೀಡೋದೆ ಈ ಜಾತ್ರೆ ಸ್ಪೆಷಲ್. ಇಂತಹ ವಿಶಿಷ್ಟ ಜಾತ್ರೆ ನಡೆಯುವುದೇ ಕಲಬುರಗಿ ಜಿಲ್ಲೆಯ ಜೇವರ್ಗಿ (Jevargi Shakhapur Mutt) ತಾಲ್ಲೂಕಿನ ಶಾಖಾಪುರದಲ್ಲಿ.


    ಇಲ್ಲಿನ ವಿಶ್ವರಾಧ್ಯ ತಪೋವನ ಶಾಖಾ ಮಠದಲ್ಲಿ ನಡೆಯೋ ಈ ರೊಟ್ಟಿ ಜಾತ್ರೆಯು ಸೌಹಾರ್ದತೆಗೂ ಹೆಸರುವಾಸಿ. ಆಗಮಿಸೋ ಭಕ್ತರಿಗೆ ಸತತ 24 ಗಂಟೆ ಕಾಲ ರೊಟ್ಟಿ ಹಂಚುವುದೇ ಇಲ್ಲಿನ ವಿಶೇಷ.


    ರೊಟ್ಟಿ, ಭಜ್ಜಿ ಪಲ್ಯ..ಆಹಾ!
    ಈ ಬಾರಿಯಂತೂ ಎಂದಿಗಿಂತ ಭಕ್ತರ ಸಂಖ್ಯೆ ಹೆಚ್ಚಿತ್ತು. ರೊಟ್ಟಿ, ಭಜ್ಜಿ ಪಲ್ಯ ಪಡೆಯುವ ಭಕ್ತರು ನೆಲದಲ್ಲಿಯೇ ಕೂತು ಪಂಕ್ತಿ ಭೇದವಿಲ್ಲದೇ ಪ್ರಸಾದ ರೂಪದಲ್ಲಿ ಸ್ವೀಕರಿಸಿದರು.


    ಇದನ್ನೂ ಓದಿ: Rose Business: ಗುಲಾಬಿ ಬೆಳೆದು ಭರ್ಜರಿ ಆದಾಯ, ಖರ್ಚು ತೀರಾ ಕಡಿಮೆ!


    32 ಕ್ವಿಂಟಲ್ ಸಜ್ಜೆ ರೊಟ್ಟಿ, 10 ಕ್ವಿಂಟಲ್ ಬಿಳಿ ಜೋಳದ ರೊಟ್ಟಿ


    ಮಠ ಹಾಗೂ ಭಕ್ತರಿಂದ ಜರುಗುವ ಈ ವಿಶೇಷ ರೊಟ್ಟಿ ಜಾತ್ರೆಯಲ್ಲಿ ಈ ವರ್ಷ 32 ಕ್ವಿಂಟಲ್ ಸಜ್ಜೆ ರೊಟ್ಟಿ, 10 ಕ್ವಿಂಟಲ್ ಬಿಳಿ ಜೋಳದ ರೊಟ್ಟಿಗಳನ್ನ ಸಿದ್ದಪಡಿಸಲಾಗಿತ್ತು. ರೊಟ್ಟಿ ಜಾತ್ರೆಗೆಂದು ಹದಿನೈದು ದಿನಗಳಿಂದ ಶಾಖಾಪುರದ ಮಹಿಳೆಯರು ಲಕ್ಷಾಂತರ ರೊಟ್ಟಿಗಳನ್ನು ಬಡಿದು ಸಿದ್ದಪಡಿಸಿದ್ದರು. ಅಲ್ಲದೇ ಬೇರೆ ಬೇರೆ ಭಾಗದ ಭಕ್ತರು ಕೂಡ ಜಾತ್ರೆಗಾಗಿಯೇ ಸಾವಿರ ರೊಟ್ಟಿಗಳನ್ನ ಸಿದ್ದಪಡಿಸಿಕೊಂಡು ಜಾತ್ರೆಗೆ ಆಗಮಿಸಿದ್ದರು.


    ಇದನ್ನೂ ಓದಿ: Susla Recipe: ಮಸ್ತ್​ ಮಸ್ತ್ ರುಚಿಯ ಸೂಸಲಾ! ಅದ್ಭುತ ರೆಸಿಪಿ ಇಲ್ಲಿದೆ


    ರೊಟ್ಟಿ ಜಾತ್ರೆ ಸಮಯದಲ್ಲಿಯೇ ಲಿಂಗೈಕ್ಯರಾದ ಶ್ರೀ ಸಿದ್ದರಾಮ ಶಿವಯೋಗಿಗಳ 72 ನೇ ಪುಣ್ಯಸ್ಮರಣೆ ನಿಮಿತ್ತ ವಿಶೇಷ ಪೂಜೆ ಜರುಗಿತು. ಒಟ್ಟಿನಲ್ಲಿ ನಾಡಿನಲ್ಲೆಡೆ ವಿಶಿಷ್ಟವೆನಿಸಿಕೊಂಡ ಈ ರೊಟ್ಟಿ ಜಾತ್ರೆಯು ಸೌಹಾರ್ದತೆ ಹಾಗೂ ಸಹಬಾಳ್ವೆಗೆ ಸಾಕ್ಷಿಯಾಯ್ತು.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: