ಕಲಬುರಗಿ: ರಾತ್ರಿಯಾಗುತ್ತಿದ್ದಂತೆ ನಗರದಲ್ಲಿ ಬಾಲ ಬಿಚ್ಚುತ್ತಿದ್ದ ಪುಂಡಪೋಕರಿಗಳನ್ನು ಕಟ್ಟಿಹಾಕಲು ಹೊಸ ಯೋಜನೆಗೆ ಕಲಬುರಗಿ ಪೊಲೀಸರು (Kalaburagi Police) ಕೈಹಾಕಿದ್ದಾರೆ. ಪೊಲೀಸರ ಕ್ರಮ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಕ್ರೈಂ ಮಟ್ಟಹಾಕೋಕೆ ಬಿಸಿಲುನಾಡು ಕಲಬುರಗಿಯ (Kalaburagi News) ಪೊಲೀಸರು ಹೊಸ ಪ್ಲ್ಯಾನ್ ಮಾಡೋಕೆ ಮುಂದಾಗಿದ್ದಾರೆ. ಪುಡಿ ರೌಡಿಗಳು, ದರೋಡೆ, ಕಳ್ಳತನದಂತಹ ಕೃತ್ಯಗಳನ್ನು ಮಟ್ಟಹಾಕೋಕೆ ಡ್ರೋಣ್ ಅಸ್ತ್ರ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: Ganagapura: ಭಕ್ತರ ಕಾಯುವ ಗಾಣಗಾಪುರ ದತ್ತ ಪಾದುಕೆ, ವರ್ಷದಲ್ಲಿ 2 ಬಾರಿ ರಥೋತ್ಸವ ನಡೆಯುವ ಸನ್ನಿಧಿ
ರಾತ್ರಿ ಟೈಮಲ್ಲೂ ಹೈ ರೆಸಲ್ಯೂಷನ್ ವಿಡಿಯೋ
ಹೌದು, ಕಲಬುರಗಿ ಪೊಲೀಸರು ಹೈ ಕ್ವಾಲಿಟಿ ಡ್ರೋನ್ ಕ್ಯಾಮರಾಗಳನ್ನು ಬಳಸಿ ಕ್ರೈಮ್ ತಡೆಯುವ ಪ್ರಯತ್ನ ಮಾಡ್ತಿದ್ದಾರೆ. ರಾತ್ರಿ ಟೈಮಲ್ಲೂ ಹೈ ರೆಸಲ್ಯೂಷನ್ ವಿಡಿಯೋ ಸೆರೆಹಿಡಿಯಬಲ್ಲ ಕ್ಯಾಮರಾಗಳು ಇದಾಗಿವೆ.
ಇದನ್ನೂ ಓದಿ: Kalaburagi: ರಾತ್ರಿ ಪ್ರಯಾಣಿಕರಿಗೆ ಉಚಿತ ಊಟ! ಕಲಬುರಗಿಯಲ್ಲೊಂದು ಮಾದರಿ ಹೋಟೆಲ್
ಪೊಲೀಸ್ ಸಿಬ್ಬಂದಿಗೆ ತರಬೇತಿ
ಈ ಡ್ರೋನ್ ಸುಮಾರು 5 ಕಿಲೋ ಮೀಟರ್ ದೂರ ಚಲಿಸಬಲ್ಲದು. ಈ ಡ್ರೋನ್ಗಳನ್ನ ಬಳಸಲು ಪೋಲಿಸ್ ಸಿಬ್ಬಂದಿಗಳಿಗೆ ತರಬೇತಿಯನ್ನೂ ನೀಡಲಾಗಿದೆ. ಕಲಬುರಗಿ ಪೊಲೀಸರ ಈ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ