ಕಲಬುರಗಿ: ವೇದಿಕೆ ಮೇಲೆ ಮಹಿಳಾ ಪೊಲೀಸರು. ಕೆಳಗಡೆ ನೂರಾರು ವಿದ್ಯಾರ್ಥಿಗಳು. ವೇದಿಕೆ ಮೇಲೆರಿದ ವಿದ್ಯಾರ್ಥಿನಿಯರಿಂದ (Students) ಹತ್ತಾರು ಫೈಟ್ ಸೀನ್ಗಳು. ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಕಲಬುರಗಿ ಜಿಲ್ಲಾ ಪೊಲೀಸರು (Kalaburagi Police) ಇಂತಹ ವಿಶಿಷ್ಟ ಕಾರ್ಯಕ್ರಮದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹೆಣ್ಮಕ್ಕಳ ಸುರಕ್ಷತೆಗಾಗಿ ಮಹಿಳಾ ಪೊಲೀಸರೇ (Police) ಸೂಪರ್ ಐಡಿಯಾ ನೀಡುತ್ತಿದ್ದಾರೆ.
ಇದನ್ನೂ ಓದಿ: Emotional Story: 8 ರೂಪಾಯಿ 36 ಪೈಸೆಗೆ 205 ಕೆಜಿ ಈರುಳ್ಳಿ ಮಾರಾಟ ಮಾಡಿದ ಗದಗದ ರೈತ!
ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆಗೆ ಮತ್ತೆ ಜೀವ
ಕಲಬುರಗಿ ಜಿಲ್ಲಾ ಎಸ್ಪಿ ಇಶಾ ಪಂಥ್ ಸ್ತ್ರೀಯರ ರಕ್ಷಣೆಗೆ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆಗೆ ಮತ್ತೆ ಜೀವ ನೀಡಿದ್ದಾರೆ. ಅದಕ್ಕಾಗಿ ಓಬವ್ವನ ಪಡೆಯನ್ನು ಬಳಸಿಕೊಂಡ ಇಶಾ ಪಂಥ್, ಅವರಿಂದಲೇ ಬಾಲಕಿಯರಿಗೆ ಕರಾಟೆಯ ಟೆಕ್ನಿಕ್ ಮೂಲಕ ಆತ್ಮರಕ್ಷಣೆ ಕಲೆಯನ್ನು ಹೇಳಿಕೊಡಲಾಯ್ತು.
ಇದನ್ನೂ ಓದಿ: KSRTC ಇ-ಬಸ್ಗಳಿಗೆ ನೀವೇ ಹೆಸರು ಸೂಚಿಸಿ; ಆಕರ್ಷಕ ಬ್ರಾಂಡಿಂಗ್ ಐಡಿಯಾ ಕೊಟ್ಟವರಿಗೆ 35 ಸಾವಿರ ಬಹುಮಾನ!
ಓಬವ್ವ ಸಿಬ್ಬಂದಿಯಿಂದ ತರಬೇತಿ
ಹೀಗೆ ಹತ್ತು ಹಲವು ಕರಾಟೆ ಟ್ರಿಕ್ಸ್ಗಳನ್ನ ಓಬವ್ವ ಪಡೆಯ ಸಿಬ್ಬಂದಿಗಳು ಹೇಳಿಕೊಟ್ರು. ವಿದ್ಯಾರ್ಥಿನಿಯರು ಕೂಡಾ ಅಷ್ಟೇ, ತುಂಬಾ ಆತ್ಮವಿಶ್ವಾಸದಿಂದ ಕಲೆಯನ್ನ ಪ್ರದರ್ಶಿಸಿದರು. ಹೀಗೆ ಪ್ರತಿ ಹಂತದಲ್ಲೂ ಹೆಣ್ಮಕ್ಕಳಿಗೆ ಆಗಬಹುದಾದ ದೌರ್ಜನ್ಯಕ್ಕೆ ಅಂತ್ಯ ಹಾಡೋದಕ್ಕೆ ಕಲಬುರಗಿಯ ವಿದ್ಯಾರ್ಥಿಯರು ಸಜ್ಜಾಗಿದ್ದಾರೆ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ