• Home
  • »
  • News
  • »
  • kalburgi
  • »
  • Kalaburagi: ಮಹಾನಗರ ಪಾಲಿಕೆ ಸದಸ್ಯರ ಆಲೂಬಾತ್ ಹೋಟೆಲ್!

Kalaburagi: ಮಹಾನಗರ ಪಾಲಿಕೆ ಸದಸ್ಯರ ಆಲೂಬಾತ್ ಹೋಟೆಲ್!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇವ್ರ ಆಲೂಬಾತ್ ಅಂದ್ ತಕ್ಷಣ ನಾಲಿಗೆಯ ರಸಗ್ರಂಥಿಗಳು ಜಾಗೃತವಾಗುತ್ತವೆ! ಪ್ರತಿದಿನ ತಯಾರಿಸೋ ಐವತ್ತು ಕೆಜಿಗೂ ಹೆಚ್ಚು ಆಲೂಬಾತ್ ಕ್ಷಣಮಾತ್ರದಲ್ಲಿ ಖಾಲಿಯಾಗಿಬಿಡುತ್ತೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಕಾಲೇಜಿಗೆ ಹೋಗೋ ಸ್ಟೂಡೆಂಟ್ಸ್, ಕೆಲಸಕ್ಕೆ ಹೋಗೋ ಲೇಬರ್ಸ್, ಆಟೋವಾಲ, ಪ್ರವಾಸಿಗರು, ಊರ ಹಿರಿ ಕಿರಿಯರಿಗೂ ಹೀಗೆ ಯಾರೇ ಇರ್ಲಿ ಅವರೆಲ್ರಿಗೂ ಇಲ್ಲಿ ಸಿಗೋ ಪಲಾವ್ ಅಥವಾ ಆಲೂ ಬಾತ್ ಅಂದ್ರೆ ಪಂಚಪ್ರಾಣ. ಇಲ್ಲಿನ ಆಲೂ ಬಾತ್ ಸವಿಯೋದಂದ್ರೆ ಇವರೆಲ್ರಿಗೂ ಅದೇನು ಖುಷಿ ಅಂತೀರಾ? ಸಖತ್ ಟೇಸ್ಟಿ ಆಗಿರೋ ಈ ಪಲಾವ್ (Kalaburagi Pulao) ತಿನ್ನೋಕೆ ಅಂತಾ ಎಷ್ಟು ದೂರದಿಂದಲೂ ಬಂದೇ ಬರ್ತಾರೆ. ಅಷ್ಟಕ್ಕೂ ಈ ಪಲಾವ್ ಅಥವಾ ಆಲೂ ಬಾತ್ ಹೋಟೆಲ್ ನಡೆಸ್ತಿರೋರು ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರು!


    ಭೀಮಾ ಆಲೂಬಾತ್ ಸಖತ್ ಫೇಮಸ್!
    ಪಲಾವ್ ಪ್ಲೇಟಿಗೆ ಬಡಿಸಿ ನೀಡುತ್ತಿರುವ ಇವ್ರ ಹೆಸ್ರು ದತ್ತು ನಾಡಗೌಡ ಅಂತ.  ಅಣ್ತಮ್ಮಂದಿರ ಜೊತೆಗೂಡಿ ತಳ್ಳುಬಂಡಿಯಲ್ಲಿ ಕಲಬುರಗಿಯ ಗಂಜ್ ಪ್ರದೇಶದಲ್ಲಿ ಭೀಮಾ ಆಲೂಬಾತ್ ಎಂಬ ಹೋಟೆಲ್ ನಡೆಸ್ತಿದ್ದಾರೆ. ಇವ್ರ ಆಲೂಬಾತ್ ಅಂದ್ ತಕ್ಷಣ ನಾಲಿಗೆಯ ರಸಗ್ರಂಥಿಗಳು ಜಾಗೃತವಾಗುತ್ತವೆ. ಪ್ರತಿದಿನ ತಯಾರಿಸೋ ಐವತ್ತು ಕೆಜಿಗೂ ಹೆಚ್ಚು ಆಲೂಬಾತ್ ಕ್ಷಣಮಾತ್ರದಲ್ಲಿ ಖಾಲಿಯಾಗಿಬಿಡುತ್ತೆ.


    ಎಲ್ಲರಿಗೂ ಅಚ್ಚುಮೆಚ್ಚು ಇವರು ತಯಾರಿಸೋ ಪಲಾವ್!
    ಇಲ್ಲಿನ ಪಲಾವ್ ಅಥವಾ ಆಲೂಬಾತ್ ಆ ರುಚಿ ಸವಿಯೋಕೆ ಕುಟುಂಬ ಸಮೇತರಾಗಿ ಬರೋರೇ ಹೆಚ್ಚು. ಕೆಲವರಿಗಂತೂ ಇವರ ಆಲೂಬಾತ್ ಬೆಳಗಿನ ಟಿಫನ್ ಕೂಡಾ. ಕೂಲಿ ಕಾರ್ಮಿಕರಿಂದ ಹಿಡಿದು ಬ್ಯುಸಿನೆಸ್ ಮ್ಯಾನ್​ಗಳು, ಸರ್ಕಾರಿ ಅಧಿಕಾರಿಗಳು ಕೂಡ ಬೆಳಗ್ಗೆ ಇಲ್ಲಿಗೆ ಆಗಮಿಸಿ ಪಲಾವ್ ಸವಿಯುತ್ತಾರೆ. ಬಡತನದಲ್ಲಿ ಹೋಟೆಲ್ ಸ್ಥಾಪಿಸಿದ ಈ ಮೂವರು ಸಹೋದರರು ಕಷ್ಟಪಟ್ಟು ಹಗಲಿರುಳು ಶ್ರಮಿಸಿ ಕೈ ತುಂಬಾ ಸಂಪಾದನೆ ಮಾಡ್ತಿದ್ದಾರೆ.


    ಇದನ್ನೂ ಓದಿ: Banana Farming: ಕಲಬುರಗಿ ಬಾಳೆ ಇರಾಕ್​ಗೆ ರಫ್ತು! 20 ಲಕ್ಷ ಆದಾಯ ಗಳಿಸಿದ ರೈತ


    ರಾಜಕೀಯದಲ್ಲಿ ಸಕ್ಸಸ್ ಕಂಡ್ರೂ ಹೋಟೆಲ್ ಬಿಟ್ಟಿಲ್ಲ
    ಅಷ್ಟೇ ಅಲ್ಲ ಈ ಮೂವರ ಪೈಕಿ ಓರ್ವ ಸಹೋದರ ದಿಗಂಬರ್ ನಾಡಗೌಡ ಎಂಬುವವರು ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರೂ ಆಗಿದ್ದಾರೆ. ರಾಜಕೀಯದಲ್ಲಿ ಸಕ್ಸಸ್ ಕಂಡರೂ ಸಹ ಹೋಟೆಲ್ ಉದ್ಯಮವನ್ನು ಕೈ ಬಿಡದ ಸಹೋದರರು ಹೋಟೆಲ್ ಮುಂದುವರೆಸ್ತಿದ್ದಾರೆ. 


    ಇದನ್ನೂ ಓದಿ: Rajyotsava Award: ಓದಿದ್ದು 7ನೇ ಕ್ಲಾಸ್, ರಾಜ್ಯೋತ್ಸವ ಪ್ರಶಸ್ತಿಯೇ ಒಲಿದು ಬಂತು!


    ಒಟ್ಟಿನಲ್ಲಿ ಕಲಬುರಗಿಯಲ್ಲಿ ದೊಡ್ಡ ದೊಡ್ಡ ಹೋಟೆಲ್ ಗಳು ಇದ್ದರೂ ಸಹ ಜನರು ಮಾತ್ರ ಭೀಮಾ ಆಲೂಬಾತ್​  ಸವಿಯಲು ಆಗಮಿಸಿ ರಸ್ತೆ ಬದಿ ನಿಂತು ಸಖತ್ ಟೇಸ್ಟಿ ಆಗಿರೋ ಪಲಾವ್ ಸವಿಯೋದನ್ನೇ ಖುಷಿ ಪಡ್ತಿದ್ದಾರೆ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: