• Home
 • »
 • News
 • »
 • kalburgi
 • »
 • Kalaburagi: ರಾಷ್ಟ್ರಕೂಟ ರಾಜ ಸ್ನಾನಕ್ಕೆ ನಿರ್ಮಿಸಿದ ಕೊಳದಲ್ಲಿ ಈಜುವ ಖುಷಿಯೇ ಬೇರೆ!

Kalaburagi: ರಾಷ್ಟ್ರಕೂಟ ರಾಜ ಸ್ನಾನಕ್ಕೆ ನಿರ್ಮಿಸಿದ ಕೊಳದಲ್ಲಿ ಈಜುವ ಖುಷಿಯೇ ಬೇರೆ!

X
ಇದೇ ನೋಡಿ ಆ ಕೆರೆ

"ಇದೇ ನೋಡಿ ಆ ಕೆರೆ"

ನಾಗಾವಿ ದೇವಸ್ಥಾನ ನೋಡಲು ಬಂದವರು ಸ್ನಾನ ಮಾಡದೆ ಹಿಂದಿರುಗೋದಿಲ್ಲ. ಒಟ್ಟಿನಲ್ಲಿ ನಂದಿ ಬಾವಿ ಈ ಭಾಗದ ಜನರಿಗೆ ಎಂದೂ ಬತ್ತದ, ಹತ್ತು ಹಲವು ಖುಷಿಗಳ ಸ್ಮಿಮ್ಮಿಂಗ್ ಪೂಲ್ ಅನ್ನೋದೆ ವಿಶೇಷ.

 • Share this:

  ಕಲಬುರಗಿ: ಕಲ್ಲಿನಲ್ಲಿ ಕಟ್ಟಿದ ಕಟ್ಟೆ, ಮಧ್ಯೆ ತಿಳಿಯಾದ ನೀರು, ಬಾ, ನನ್ನಲ್ಲಿ ಈಜಿಬಿಡು ಅಂತ ಕರೆಯುವಂಥಾ ಸ್ವಿಮ್ಮಿಂಗ್ ಪೂಲ್! (Swimming Pool) ಹೀಗೆ ಈಜಾಡುತ್ತಾ ಮೈ ಮರೆತರಂತೂ ಕತ್ತಲಾವರಿಸಿದ್ರೂ ತಿಳಿಯದು. ಲೈಟ್ ಉರಿಸಿಯೂ ಈ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಾಡಬಹುದು! ಚಳಿ ಇರ್ಲಿ, ಬಿಸಿಲಿರಲಿ, ಆಯಾ ಕಾಲಕ್ಕೆ ತಕ್ಕಂತೆ ಸ್ವಿಮ್ಮಿಂಗ್ ಪೂಲ್ ಸಪೋರ್ಟ್ ಮಾಡುತ್ತೆ ಅನ್ನೋದೆ ಇದ್ರ ವಿಶೇಷ. ಅದರಲ್ಲೂ ರಾಜರ ಕಾಲದಲ್ಲಿ ಕಟ್ಟಿದ ಕೊಳದಲ್ಲಿ ಈಜೋ ಗರ್ದಿ ಗಮ್ಮತ್ತೇ ಬೇರೆ! ಕಲಬುರಗಿಯ (Kalaburagi News) ಚಿತ್ತಾಪುರದ ಪಾಲಿಗಿದು ಎಂದೂ ಬತ್ತದ ಬಾವಿ.


  ಹೆಸರು ನಂದಿ ಬಾವಿ ಅಂತಾ. ಇದನ್ನು ರಾಷ್ಟ್ರಕೂಟರ ರಾಜ ಮಧುಸೂದನ ನಿರ್ಮಿಸಿದ್ದ ಎಂಬ ಐತಿಹ್ಯವಿದೆ. ಸಾಮಾನ್ಯವಾಗಿ ಕಲಬುರಗಿ ಭಾಗದ ಬಾವಿಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ.


  ಆದ್ರೆ, ಈ ನಂದಿಬಾವಿ ಮಾತ್ರ ಈ ಮಾತಿಗೆ ಅಪವಾದ. ಈ ಬಾವಿಯ ನೀರು ಎಂದಿಗೂ ಕಡಿಮೆಯಾಗದು. ಬಿಸಿಲ ನಾಡಿನ ಇಂತಹ ವಿಶೇಷ ಬಾವಿ ಅತ್ಯುತ್ತಮ ಈಜುಕೊಳವೂ ಆಗಿದೆ.


  ಇದನ್ನೂ ಓದಿ: Positive Story: ಕಾಲುಗಳಿಲ್ಲದ ಕೃಷಿ ಸಾಧಕರಿಗೆ ಸಿಕ್ತು ನೆರವಿನ ಭರವಸೆ; ಇದು ನ್ಯೂಸ್ 18 ಕನ್ನಡ ಡಿಜಿಟಲ್ ವರದಿ ಪರಿಣಾಮ


  ಇಷ್ಟಕ್ಕೆ ಈ ಈಜುಕೊಳದ ವೈಶಿಷ್ಟ್ಯತೆ ಮುಗಿದಿಲ್ಲ. ಈ ಬಾವಿಯ ನೀರು ಚಳಿಗಾಲದಲ್ಲಿ ಬಿಸಿಯಾಗುತ್ತೆ! ಬೇಸಿಗೆಯಲ್ಲಿ ತಂಪಾದ ನೀರಾಗಿ ಬದಲಾಗುತ್ತೆ. ಇಲ್ಲಿ ರಾತ್ರಿ ಸಹ ದೇಹದ ಸುಸ್ತು ಕಳೆಯುತ್ತಾ ಹಾಯಾಗಿ ಹೀಗೆ ಈಜುತ್ತಾ ಮೋಜು ಮಾಡಬಹುದು.


  ಇದನ್ನೂ ಓದಿ: Positive Story: ಸರ್ಕಾರಿ ಶಾಲೆ ಕಟ್ಟಲು 21 ದಿನಗಳಲ್ಲಿ 60 ಲಕ್ಷ ಸಂಗ್ರಹಿಸಿದ ಸ್ವಾಮೀಜಿ


  ರಾಷ್ಟ್ರಕೂಟರ ಅರಸ ಮಧುಸೂದನ ನಾಗಾವಿ ದೇವಸ್ಥಾನದ ಹಿಂದಿನ ಪ್ರದೇಶದಲ್ಲಿ ಪ್ರತಿ ದಿನ ಸ್ನಾನ ಮಾಡಲೆಂದು ಈ ನಂದಿ ಬಾವಿಯನ್ನು ನಿರ್ಮಿಸಿದ್ದನಂತೆ. ನಾಗಾವಿ ದೇವಸ್ಥಾನ ನೋಡಲು ಬಂದವರು ಸ್ನಾನ ಮಾಡದೆ ಹಿಂದಿರುಗೋದಿಲ್ಲ. ಒಟ್ಟಿನಲ್ಲಿ ನಂದಿ ಬಾವಿ ಈ ಭಾಗದ ಜನರಿಗೆ ಎಂದೂ ಬತ್ತದ, ಹತ್ತು ಹಲವು ಖುಷಿಗಳ ಸ್ಮಿಮ್ಮಿಂಗ್ ಪೂಲ್ ಅನ್ನೋದೆ ವಿಶೇಷ.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: