Kalaburagi Farmers: ಕಲಬುರಗಿ ರೈತರಿಗೆ ಮಹತ್ವದ ಸೂಚನೆ ನೀಡಿದ ಜಿಲ್ಲಾಧಿಕಾರಿ

ಕಲಬುರಗಿ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಜಿಲ್ಲಾ ಕೇಂದ್ರದಲ್ಲಿ ಕಾಲ್ ಸೆಂಟರ್ ತೆರೆಯಲಾಗುವುದು ಎಂದು ಕಲಬುರಗಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಯಶವಂತ ಎ. ಗುರುಕರ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಲಬುರಗಿ: ಪ್ರಧಾನಮಂತ್ರಿ  ಕಿಸಾನ್ ಯೋಜನೆಯಡಿ (PM Kisan Yojana) ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆರ್ಥಿಕ ಸೌಲಭ್ಯ ಪಡೆಯಲು ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ (e KYC) ಮಾಡುವುದು ಕಡ್ಡಾಯವಾಗಿದೆ. ಆಗಸ್ಟ್ 31ರೊಳಗೆ ಇ-ಕೆವೈಸಿ ಮಾಡಿಸುವಂತೆ ಕಲಬುರಗಿ ಜಿಲ್ಲೆಯ (Kalaburagi Farmers) ರೈತ ಬಾಂಧವರಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಮನವಿ ಮಾಡಿದ್ದಾರೆ. ಪ್ರಧಾನಮಂತ್ರಿ  ಕಿಸಾನ್ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಣಿಯಾದ 2,68,015 ರೈತರ ಪೈಕಿ 99,545 ರೈತರು ಮಾತ್ರ ಕೆವೈಸಿ ನೋಂದಣಿ ಮಾಡಿಕೊಂಡಿದ್ದಾರೆ. ಹಾಗಾದರೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ರೈತರಿಗೆ ನೀಡಿದ ಸೂಚನೆಗಳೇನು ಎಂಬ ವಿವರ ಇಲ್ಲಿದೆ. 

    ಉಳಿದ ರೈತರು ನಿಗದಿತ ಅವಧಿಯಲ್ಲಿ “ಗ್ರಾಮ ಒನ್ ” ಅಥವಾ ನಾಗರಿಕ ಸೇವಾ ಕೇಂದ್ರಗಳ ಮೂಲಕ ಕೆವೈಸಿ ಮಾಡಿಕೊಳ್ಳದಿದ್ದಲ್ಲಿ ಅಂತಹ ರೈತರಿಗೆ ಆರ್ಥಿಕ ಸೌಲಭ್ಯ ದೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು ಕಳೆದ ವರ್ಷ ಈ ಯೋಜನೆಯಡಿ ರೈತರಿಗೆ 772 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದರು.

    ದಾಖಲೆ ಪ್ರಮಾಣದಲ್ಲಿ ನೋಂದಣಿ
    ಪ್ರಸಕ್ತ 2022-23ನೇ ಸಾಲಿಗೆ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2,14,749 ಜನ ರೈತರು ದಾಖಲೆ ಪ್ರಮಾಣದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಸ್ಥಳೀಯ ನಿರ್ದಿಷ್ಟ ವಿಕೋಪದಡಿ 40,527 ರೈತರು ದೂರು ನೀಡಿರುವ ಹಿನ್ನೆಲೆಯಲ್ಲಿ 24,551 ರೈತರ ಹೊಲದಲ್ಲಿ ಜಂಟಿ ಸಮೀಕ್ಷೆ ನಡೆಸಿದ್ದು, 16,476 ರೈತರ ಬೆಳೆಗಳು ಸಮೀಕ್ಷೆಗೆ ಬಾಕಿ ಇವೆ.

    ಟೋಲ್ ಫ್ರೀ ಸಂಖ್ಯೆ ಇಲ್ಲಿದೆ
    ಮಳೆ ಬಿದ್ದ ನಂತರ 72 ಗಂಟೆ ಒಳಗಾಗಿ ರೈತರು ಟೋಲ್ ಫ್ರೀ ಸಂಖ್ಯೆ 100-200-5142ಗೆ ಕರೆ ಮಾಡಿ ದೂರು ನೀಡಿದಲ್ಲಿ ವಿಮಾ ಕಂಪನಿಯವರು ಸಮೀಕ್ಷೆಗೆ ಬರುತ್ತಾರೆ.

    ಇದನ್ನೂ ಓದಿ: Kalaburgi Success Story: ನಿರುಪಯುಕ್ತ ವಸ್ತುಗಳಿಗೆ ಬಂತು ಜೀವ! ಕಲಬುರಗಿಯಲ್ಲಿ ನಡೀತು ಮ್ಯಾಜಿಕ್!

    ಕಲಬುರಗಿ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಜಿಲ್ಲಾ ಕೇಂದ್ರದಲ್ಲಿ ಕಾಲ್ ಸೆಂಟರ್ ತೆರೆಯಲಾಗುವುದು. ಕಳೆದ ವರ್ಷ ಈ ವಿಮೆ ಯೋಜನೆಯಡಿ ಜಿಲ್ಲೆಯ 9 ಸಾವಿರ ಜನರಿಗೆ ಪರಿಹಾರ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಯಶವಂತ ಎ. ಗುರುಕರ್ ತಿಳಿಸಿದರು.

    1.11 ಲಕ್ಷ ಹೆಕ್ಟೇರ್ ಬೆಳೆ ನಾಶ
    ಕಳೆದ ಜುಲೈ ಮಾಹೆ ಮತ್ತು ಆಗಸ್ಟ್ ಮೊದಲನೇ ವಾರದಲ್ಲಿ ಬಿದ್ದ ಮಳೆಯಿಂದ ಅತಿವೃಷ್ಠಿ ಉಂಟಾಗಿ ಜಿಲ್ಲೆಯಲ್ಲಿ ಬಿತ್ತನೆಯಾದ 7,75,430 ಹೆಕ್ಟೇರ್ ಪ್ರದೇಶದ ಪೈಕಿ 1,11,435 ಹೆಕ್ಟೇರ್ ಪ್ರದೇಶ ಬೆಳೆ ನಾಶವಾಗಿದೆ.

    ಇದನ್ನೂ ಓದಿ: Kalaburagi Rotti Mahadevi: ರೊಟ್ಟಿ ಮಾಡೋ ಮಹಾತಾಯಿ ಕಲಬುರಗಿಯ ಮಹಾದೇವಿ! ಇವರ ಸಕ್ಸಸ್ ಕಥೆ ಕೇಳಿ

    ಇದರಲ್ಲಿ ಹೆಸರು 4,451, ಉದ್ದು 4,451, ತೊಗರಿ 79,553, ಹತ್ತಿ 12,613, ಜೋಳ 215, ಸೂರ್ಯಕಾಂತಿ 332, ಸೋಯಾಬಿನ್‌ 4,606 ಹೆಕ್ಟೇರ್ ಪ್ರದೇಶ ಸೇರಿದೆ. ಇದಲ್ಲದೆ ರಸ್ತೆ, ಸೇತುವೆ, ಮನೆಗಳು ಸಹ ಹಾನಿಯಾಗಿದೆ. ಜಂಟಿ ಸಮೀಕ್ಷೆ ಮಾಡಿ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ಜಿಲ್ಲಾಧಿಕಾರಿ ಯಶವಂತ ಎ. ಗುರುಕರ್ ತಿಳಿಸಿದರು.

    ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ
    Published by:guruganesh bhat
    First published: