• Home
  • »
  • News
  • »
  • kalburgi
  • »
  • Kalaburagi: ವಕೀಲರಾಗುವ ಆಸೆ ಇದೆಯೇ? ಇಲ್ಲಿದೆ ನೋಡಿ ಒಳ್ಳೆಯ ಅವಕಾಶ

Kalaburagi: ವಕೀಲರಾಗುವ ಆಸೆ ಇದೆಯೇ? ಇಲ್ಲಿದೆ ನೋಡಿ ಒಳ್ಳೆಯ ಅವಕಾಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2022–23ನೇ ಸಾಲಿನ ಮೂರು ವರ್ಷದ ಎಲ್​ಎಲ್​ಬಿ ಕೋರ್ಸ್​ಗೆ ಅರ್ಜಿ ಸಲ್ಲಿಸುವುದು ಹೇಗೆ? ಪ್ರವೇಶಾತಿ ಪಡೆಯಲು ಏನೆಲ್ಲ ಅರ್ಹತೆಗಳ ಅಗತ್ಯವಿದೆ? ನಿಮಗೆಂದೇ ಎಲ್ಲ ವಿವರ ಇಲ್ಲಿದೆ ನೋಡಿ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಕಾನೂನು ಪದವಿ ಪಡೆದು ವಕೀಲ ವೃತ್ತಿಯ ಕನಸು ಕಂಡಿದ್ದೀರಾ? ಹಾಗಾದ್ರೆ ಇಲ್ಲಿದೆ ಒಂದೊಳ್ಳೆ ಸದಾವಕಾಶ.  ಕಲಬುರಗಿಯ (Kalaburagi News) ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನಲ್ಲಿ 2022–23ನೇ ಸಾಲಿನ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ ಪ್ರವೇಶಾತಿ ಆರಂಭವಾಗಿದ್ದು, ಅರ್ಹ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಕಲಬುರಗಿಯ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನಲ್ಲಿ 2022–23ನೇ ಸಾಲಿನ ಮೂರು ವರ್ಷದ ಎಲ್​ಎಲ್​ಬಿ ಕೋರ್ಸ್​ಗೆ ಅರ್ಜಿ (Kalaburagi Vijnaneshwara Law College) ಸಲ್ಲಿಸುವುದು ಹೇಗೆ? ಪ್ರವೇಶಾತಿ ಪಡೆಯಲು ಏನೆಲ್ಲ ಅರ್ಹತೆಗಳ ಅಗತ್ಯವಿದೆ? ನಿಮಗೆಂದೇ ಎಲ್ಲ ವಿವರ ಇಲ್ಲಿದೆ ನೋಡಿ.


    ಯಾರೆಲ್ಲ ಅರ್ಹರು?
    ಪ್ರವೇಶಾತಿ ಪಡೆದುಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು 30 ವರ್ಷ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಗರಿಷ್ಠ 35 ವರ್ಷ ಮೀರಿರಬಾರದು ಎಂದು ಮಾಹಿತಿ ನೀಡಲಾಗಿದೆ.


    ಇದನ್ನೂ ಓದಿ: Puneeth Rajkumar Temple: ಅಭಿಮಾನಿಯಿಂದ ಅಪ್ಪು ದೇವಸ್ಥಾನ ನಿರ್ಮಾಣ! ಬ್ರಹ್ಮ, ವಿಷ್ಣು, ಮಹೇಶ್ವರ ಎಲ್ಲಾ ನೀವೇ ಎಂದ ಫ್ಯಾನ್ಸ್


    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವತ್ತು?
    ಆಸಕ್ತರು ನವೆಂಬರ್ 17ರ ಒಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.


    ಇದನ್ನೂ ಓದಿ: Kalaburagi Viral Video: ಕತ್ತಲಾಗುತ್ತಿದ್ದಂತೆ ಕಾಣಿಸಿಕೊಂಡ ದೈತ್ಯ ಹೆಬ್ಬಾವು!


    ಸಂಪರ್ಕಿಸಿ
    ಪ್ರವೇಶಾತಿ ಪಡೆಯಲು ಆಸಕ್ತಿ ಉಳ್ಳವರು ಹೆಚ್ಚಿನ ಮಾಹಿತಿಗಾಗಿ ಈ ಅಧಿಕೃತ ವ್ಯಕ್ತಿಗಳನ್ನು ಸಂಪರ್ಕಿಸಬಹುದು ಎಂದು ಕಲಬುರಗಿಯ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜು ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.


    ಮಲ್ಲಿಕಾರ್ಜುನ : 90083 49323
    ರೇಣುಕಾ ಸಾಸನಮರಿ : 98801 91382
    ವಾಣಿ ಮರಡಿ: 78924 27674

    Published by:ಗುರುಗಣೇಶ ಡಬ್ಗುಳಿ
    First published: