Kalaburagi: ಟ್ರಾಫಿಕ್ ಸಮಸ್ಯೆ ಟಾಟಾ ಹೇಳಲು ಕಲಬುರಗಿ ರೆಡಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕಲಬುರಗಿ ಮಹಾನಗರದಲ್ಲಿ ದಿನಂಪ್ರತಿ ತಲೆನೋವಾಗಿ ಪರಿಣಮಿಸಿದ್ದ ಟ್ರಾಫಿಕ್ ಸಮಸ್ಯೆಯನ್ನು ತಕ್ಕಮಟ್ಟಿಗೆ ತಹಬದಿಗೆ ತರುವಲ್ಲಿ ನೂತನ ಪೊಲೀಸ್ ಆಯುಕ್ತರು ಸಫಲರಾಗಿದ್ದಾರೆ.

 • Share this:

  ಕಲಬುರಗಿ: ಮಹಾನಗರಗಳಲ್ಲಿ ರಸ್ತೆಗಿಳಿಯೋದೆ ಕಷ್ಟ ಕಣ್ರೀ! ಅದೇನ್ ಟ್ರಾಫಿಕು, ಅದೇನ್ ಜನದಟ್ಟಣೆ ಅಂತೀರ? ಹಾಗಂತ ಹೊರಗಡೆ ಹೋಗ್ದೇ ಇರೋದಕ್ಕೆ ಆಗುತ್ತಾ? ನಿಜ, ಹೀಗಂತ, ಅನಿವಾರ್ಯವಾಗಿ ರಸ್ತೆಯಲ್ಲಿ ಗೊಣಗಿಕೊಂಡೇ ಡ್ರೈವಿಂಗ್ ಮಾಡೋದು ಮಾಮೂಲು. ಬಿಸಿಲನಾಡಿನ (Kalaburagi News) ಬಿಸಿಲ ಝಳಕ್ಕೆ ಟ್ರಾಫಿಕ್​ನಲ್ಲಿ (Kalaburagi Traffic) ಒದ್ದಾಡೋದು ಸಾಹಸವೇ ಸರಿ. ಆದ್ರೆ ಇದೆಲ್ಲಕ್ಕೂ ಫುಲ್ ಸ್ಟಾಪ್ ಹಾಕಲೆಂದೇ ನೂತನ ಕಮೀಷನರ್ ಮಾಸ್ಟರ್ ಪ್ಲ್ಯಾನ್ ಜಾರಿ ಮಾಡಿದ್ದಾರೆ.


  ಯೆಸ್, ಬಿಸಿಲನಾಡು ಕಲಬುರಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ನಗರಗಳಲ್ಲಿ ಒಂದು. ಅವೈಜ್ಞಾನಿಕ ರಸ್ತೆ ಸಂಚಾರದಿಂದಾಗಿ ಸದಾ ಜನದಟ್ಟಣೆಯಿಂದ ಗಿಜಿಗುಡುತ್ತಿದ್ದ ಈ ನಗರದಲ್ಲಿ ಇದೀಗ ಸಂಚಾರ ವ್ಯವಸ್ಥೆ ಕೊಂಚಮಟ್ಟಿಗೆ ತಹಬಂದಿಗೆ ಬಂದಿರುವುದು ಜನರು ನಿಟ್ಟುಸಿರು ಬಿಡುವಂತಾಗಿದೆ.


  ಹೊಸ ಪ್ಲ್ಯಾನ್ ಹಿಂದೆ ಯಾರಿದ್ದಾರೆ?
  ಇದಕ್ಕೆ ಮುಖ್ಯ ಕಾರಣ ಕಲಬುರಗಿಯ ನೂತನ ಕಮಿಷನರ್ ಚೇತನ್ ಆರ್ ಮತ್ತು ಅವರ ಟೀಂ. ಈ ಸೂಪರ್ ಕಾಪ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೆ ನಗರದ ಸಂಚಾರ ವ್ಯವಸ್ಥೆಯಲ್ಲಿ ಮಾಡಿದ ಬದಲಾವಣೆ ನಿಜಕ್ಕೂ ಗ್ರೇಟ್ ಎನಿಸಿಕೊಂಡಿದೆ.


  ಸಂಚಾರ ನಿಯಮಕ್ಕೆ ಆದ್ಯತೆ
  ಅಷ್ಟಕ್ಕೂ ನೂತನ ಕಮೀಷನರ್ ಮಾಡಿದ್ದೇನೆಂದರೆ, ಒನ್ ವೇ, ಟ್ರಾಫಿಕ್ ಸಿಗ್ನಲ್ ಇತ್ಯಾದಿ ಕಡೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅಧಿಕಾರಿ, ಸಿಬ್ಬಂದಿ ಹಾಗೂ ಆಟೋ ಡ್ರೈವರ್​ಗಳ ಜೊತೆ ಸಭೆ ನಡೆಸಿ ಟ್ರಾಫಿಕ್ ಪೊಲೀಸರನ್ನು ಫೀಲ್ಡಿಗಿಳಿಸಿದ್ದಾರೆ. ಮೊದಲ ಒಂದೆರಡು ದಿನ ಎಲ್ಲೆಲ್ಲಿ ಸಂಚಾರ ದಟ್ಟಣೆ ಆಗುತ್ತದೆ. ಎಲ್ಲೆಲ್ಲಿ ಸಂಚಾರ ನಿಯಮ ಪಾಲಿಸುವುದಿಲ್ಲ ಎಂಬುದನ್ನು ಡಿಸಿಪಿ ನೇತೃತ್ವದಲ್ಲಿ ಸ್ಥಳ ಗುರುತಿಸಿ ಅಂತಹ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.


  ಟ್ರಾಫಿಕ್ ನಿಯಮ ಕುರಿತು ಜಾಗೃತಿ
  ಅಂತೆಯೇ ಇದೀಗ ನಗರದ ಪ್ರಮುಖ ವೃತ್ತಗಳಾದ ಸರ್ದಾರ್ ವಲ್ಲಭಭಾಯಿ ಪಟೇಲ್, ರಾಮ ಮಂದಿರ, ಖರ್ಗೆ ಪೆಟೋಲ್ ಬಂಕ್, ರಾಜಾಪುರ, ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಖಾದ್ರಿ ಚೌಕ್, ಸೂಪರ್ ಮಾರ್ಕೆಟ್ ಮುಂತಾದ ಕಡೆ ಅಗತ್ಯವಿರುವಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸಂಜೆ ವೇಳೆ ಟ್ರಾಫಿಕ್ ನಿಯಮಗಳ ಕುರಿತು ವಾಹನ ಸಂಚಾರ ಮಾಡುವವರಿಗೆ ಹಾಗೂ ಪಾದಾಚಾರಿಗಳಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತಿದೆ.


  ಮುಂದಿನ ಯೋಜನೆ ಹೀಗಿದೆ
  ಈಗಿರುವ ಸಿಬ್ಬಂದಿ ಮೂಲಕವೇ ಸಣ್ಣ ಪುಟ್ಟ ಸುಧಾರಣೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪಾಲಿಕೆ, ಮಾಲ್ ಹಾಗೂ ಕೆಎಸ್ಆರ್​ಟಿಸಿ ಜೊತೆ ಸಭೆ ನಡೆಸಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಯೋಜನೆ ಕಮೀಷನರ್ ಮುಂದಿದೆ.


  ಇದನ್ನೂ ಓದಿ: Temple: ಇಲ್ಲಿ ಮದ್ವೆ ಆಗ್ಬೇಕು ಅಂದ್ರೆ ದೇವಿ ಅಪ್ಪಣೆ ಬೇಕೇ ಬೇಕು!
  ಶಾಲಾ-ಕಾಲೇಜುಗಳಲ್ಲಿ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸುವ ಜೊತೆಗೆ ಸಾರ್ವಜನಿಕರಲ್ಲೂ ಟ್ರಾಫಿಕ್ ನಿಯಮ ಪಾಲನೆಗೆ ಒತ್ತು ನೀಡುವಂತೆ ಉತ್ತೇಜಿಸುವ ಇರಾದೆಯಲ್ಲಿ ನೂತನ ಕಮೀಷನರ್ ಇದ್ದಾರೆ.


  ಇದನ್ನೂ ಓದಿ: Farmer Problem: ಕುಸಿದ ಈರುಳ್ಳಿ ಬೆಲೆ, ರೈತನ ಕಣ್ಣಲ್ಲೇ ಕಣ್ಣೀರು ತರಿಸಿದ ಬೆಳೆ


  ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಕಲಬುರಗಿ ನಗರ ಸಂಚಾರ ದಟ್ಟಣೆಗೆ ಜನ ಬೇಸತ್ತು ಹೋಗಿದ್ರು. ಆದ್ರೀಗ ಚೇತನ್ ಅವರು ಕಮೀಷನರ್ ಆಗಿ ಅಧಿಕಾರ ವಹಿಸುತ್ತಲೇ ಬದಲಾವಣೆ ಆರಂಭವಾಗಿದ್ದು, ವಾಹನ ಸವಾರರು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.


  ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: