• Home
  • »
  • News
  • »
  • kalburgi
  • »
  • Kalaburagi Mirchi: ಕಲಬುರಗಿ‌ ಮಿರ್ಚಿ ಸಖತ್ತೋ ಸಖತ್ತು! ತಿಂದವರಿಗೆ ಗಮ್ಮತ್ತೋ ಗಮ್ಮತ್ತು!

Kalaburagi Mirchi: ಕಲಬುರಗಿ‌ ಮಿರ್ಚಿ ಸಖತ್ತೋ ಸಖತ್ತು! ತಿಂದವರಿಗೆ ಗಮ್ಮತ್ತೋ ಗಮ್ಮತ್ತು!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ "

ಸಂಜೆ ವೇಳೆಯಂತೂ ಮಹಾದೇವ ಭಜ್ಜಿ ಹೋಟೇಲ್ ಫುಲ್ ರಶ್ ಆಗಿರುತ್ತೆ. ಎಷ್ಟೆಂದರೆ ದಿನಕ್ಕೆ 50 ಕೆಜಿಗೂ ಅಧಿಕ ಕಡಲೆ ಹಿಟ್ಟು ಖಾಲಿಯಾಗುತ್ತೆ.

  • Share this:

    ವಾವ್! ನೋಡ್ತಿದ್ರೇನೆ ಬಾಯಲ್ಲಿ ನೀರೂರುತ್ತೆ! ಕುದಿಯುವ ಎಣ್ಣೆಲಿ ಮೆಣಸು ಬೇಯ್ತಿದ್ರೆ ಆಸೆಯ ಕಣ್ಣುಗಳು ಆ ಕಡೆನೇ ಇರುತ್ತೆ. ಇನ್ನು ಭಜ್ಜಿ ಜೊತೆ ನೆಚ್ಚಿಕೊಳ್ಳೋಕೆ ಕೊಡೋ ಆ ಚಟ್ನಿನಾ? ಅಬ್ಬ! ಅದೇನು ಟೇಸ್ಟಿ, ಅದೇನು ಸ್ಪೈಸಿ! ಸಾಯಂಕಾಲ ಈ ಭಜ್ಜಿ ಸಿಕ್ರೆ, ಅತ್ತ ಹೊತ್ತು ಮುಳುಗೋದು ಗೊತ್ತಾಗಲ್ಲ, ಇತ್ತ ಪ್ಲೇಟಿಗೆ ಹಾಕಿದ ಭಜ್ಜಿಯೂ ಲೆಕ್ಕಕ್ಕೆ ಸಿಗಲ್ಲ!ಇದು ಎಲ್ಲ ಕಡೆ ಇರೋ ಭಜ್ಜಿ ಥರಾನೇ ಅಂದ್ಕೋಬೇಡಿ, ಕಲಬುರಗಿ ಈ ಅಂಗಡೀಲಿ ಸಿಗೋ ಭಜ್ಜಿ (Kalaburagi Mirchi) ಸಖತ್ ಟೇಸ್ಟಿ. ಹಂಗಾಗಿಯೇ ನೋಡಿ, ಕಮಲಾಪುರ ತಾಲೂಕಿನ (Kamalapur Taluk) ಮಹಾಗಾಂವ್ ಕ್ರಾಸ್ ಬಳಿ ಇರುವ ಮಹಾದೇವ ಬಜ್ಜಿ ಅಂಗಡಿಯ ಮಿರ್ಚಿ ಭಜ್ಜಿ ತಿನ್ನೋಕೆ ಜನ ಕ್ಯೂ ನಿಲ್ತಾರೆ.


    ಒಂದು ದಿನಕ್ಕೆ  50 ಕೆಜಿಗೂ ಅಧಿಕ ಕಡಲೆ ಹಿಟ್ಟು ಖಾಲಿ!
    ಸಂಜೆ ವೇಳೆಯಂತೂ ಮಹಾದೇವ ಭಜ್ಜಿ ಹೋಟೇಲ್ ಫುಲ್ ರಶ್ ಆಗಿರುತ್ತೆ. ಎಷ್ಟೆಂದರೆ ದಿನಕ್ಕೆ 50 ಕೆಜಿಗೂ ಅಧಿಕ ಕಡಲೆ ಹಿಟ್ಟು ಖಾಲಿಯಾಗುತ್ತೆ.


    ಮಹಾದೇವ ಅವರು ಮಿರ್ಚಿ ಬಳಸುವ ಪದಾರ್ಥಗಳನ್ನೇ ಒಮ್ಮೆ ನೋಡಿ..


    *ಹಸಿಮೆಣಸಿನಕಾಯಿ
    *ಅಕ್ಕಿ ಹಿಟ್ಟು
    *ಅಡುಗೆ ಎಣ್ಣೆ
    *ಜೀರಿಗೆ
    *ಖಾರದ ಪುಡಿ
    *ರುಚಿಗೆ ತಕ್ಕಷ್ಟು ಉಪ್ಪು
    *ಸ್ವಲ್ಪ ಅರಿಶಿಣ


    ಇದನ್ನೂ ಓದಿ: Guleda Lakkamma: ಚಪ್ಪಲಿಯಿಂದ ಮುಖ, ಮೈಕೈ ಸವರಿಕೊಂಡ್ರೆ ಒಳ್ಳೇದು ಮಾಡುವ ದೇವರು!


    ಮಹಾಗಾಂವ್, ಕಮಲಾಪುರ ಕಡೆಯ ಜನರು ಕೂಡಾ ಆ ಕಡೆ ಹೋದ್ರೆ ಕಾದು ನಿಂತು ಭಜ್ಜಿ ಸವಿಯುತ್ತಾರೆ. ಪಾರ್ಸೆಲ್ ತಗೊಂಡು ಮನೆಗೊಯ್ತಾರೆ. ಮಹಾದೇವ ಬಜ್ಜಿ ಹೋಟೆಲ್ ಇಷ್ಟು ಫೇಮಸ್ ಆಗಲು ಕಾರಣವೆಂದರೆ ಇಲ್ಲಿ ಕಾಪಾಡಿಕೊಂಡು ಬಂದಿರುವ ಶುದ್ದತೆ. ಒಟ್ಟಾರೆ ಇಲ್ಲಿ ಸಿಗೋ ಮಿರ್ಚಿ ಬಜ್ಜಿ ರುಚಿ ಬೇರೆಲ್ಲೂ ಸಿಗೋದಿಲ್ಲ!


    ಇದನ್ನೂ ಓದಿ: Banana Farming: ಕಲಬುರಗಿ ಬಾಳೆ ಇರಾಕ್​ಗೆ ರಫ್ತು! 20 ಲಕ್ಷ ಆದಾಯ ಗಳಿಸಿದ ರೈತ


    ನೀವೂ ಈಕಡೆ ಬಂದ್ರೆ ಮರೆಯಬೇಡಿ!
    ನೋಡಿದ್ರಲ್ಲ, ಕೇವಲ ಮಿರ್ಚಿ ಭಜ್ಜಿಯಲ್ಲೇ ಮಹಾದೇವ ಅವರು ಸಖತ್ ಫೇಮಸ್ ಆಗಿದ್ದಾರೆ. ಜೊತೆಗೆ ವ್ಯಾಪಾರವು ಅವರ ಬದುಕಿನ ಕೈ ಹಿಡಿದಿದೆ. ನೀವು ಈ ಕಡೆ ಬಂದ್ರೆ ಒಮ್ಮೆ ಇಲ್ಲಿನ ಮಿರ್ಚಿ ಸವಿದು ನೋಡೋಕೆ ಮರೆಯಬೇಡಿ ಆಯ್ತಾ!


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: