Kalaburagi Ganapati: ಬದುಕು ಕಟ್ಟಿಕೊಟ್ಟ ಗಣಪ! ಇದು ನಿಜಕ್ಕೂ ದೇವರು ನೀಡಿದ ವರ!

ನಿರುದ್ಯೋಗಿ ಯುವಕರು ಹಾಗೂ ಮಹಿಳೆಯರಿಗೆ ತರಬೇತಿ ನೀಡಿ ಅವರಿಗೂ ಉದ್ಯೋಗ ನೀಡುವ ಮೂಲಕ ಆಸರೆಯಾಗಿದ್ಧಾರೆ ಎಂಬಿಎ ಪದವೀಧರ ಸಂಗಮೇಶ್.

ಜೀವನವೇ ಗಣಪ!

"ಜೀವನವೇ ಗಣಪ!"

  • Share this:
    ಕಲಬುರಗಿ: ಗಣಪತಿ, ವಿಘ್ನ ವಿನಾಶಕ, ಮಂಗಳಮೂರುತಿ ಹೀಗೆ ನೂರಾರು ಹೆಸರುಗಳಿಂದ ಕರೆಯಲ್ಪಡುವ ಗಣೇಶನ ಹೆಸರಿಗೆ (Ganesh Chaturthi 2022) ತಕ್ಕಂತೆ ವಿವಿಧ ಗಾತ್ರದ ಮೂರ್ತಿ, ವಿವಿಧ ಶೈಲಿಯ ಆಕಾರ. ಚೌತಿ ಹಬ್ಬಕ್ಕೆ ಇಷ್ಟೆಲ್ಲ ಅದ್ದೂರಿಯ ಪ್ರಿಪರೇಷನ್ ಕಂಡು ಬರ್ತಿರೋದು ಕಲಬುರಗಿ ಜಿಲ್ಲೆಯಲ್ಲಿ. ಅದೂ ಕೂಡಾ ಪಕ್ಕಾ ಪರಿಸರ ಸ್ನೇಹಿ (Eco Friendly Ganapati) ಜೇಡಿ ಮಣ್ಣಿನ ಗಣಪ. ಕಲಬುರಗಿಯ ಇಡೀ ಮಳಿಗೆಯೊಂದರಲ್ಲಿ ಗಣಪತಿಗಳದ್ದೇ ಪಾರಮ್ಯ. ಸಾಲಾಗಿ ಜೋಡಿಸಿಟ್ಟಿರೋ ಈ ಜೇಡಿಮಣ್ಣಿನ ಹಿಂದಿನ ಕಲಾ ಚತುರ ಎಂಬಿಎ ಪದವೀಧರ ಸಂಗಮೇಶ್.

    ರಾಸಾಯನಿಕ, ಪಿಒಪಿಗಳನ್ನು ಬಳಸಿ ಪರಿಸರ ಮಾಲಿನ್ಯ ಮಾಡುವ ಗಣಪನಿಗಿಂತಲೂ ನಮ್ಮ ಪೂರ್ವಜರು ಮಾಡುತ್ತಿದ್ದ ಜೇಡಿ ಮಣ್ಣಿನ ಗಣಪತಿ ಮೂರ್ತಿಯನ್ನೇ ತಯಾರಿಸುತ್ತಿದ್ದಾರೆ. ಜೊತೆಗೆ ನಿರುದ್ಯೋಗಿ ಯುವಕರು ಹಾಗೂ ಮಹಿಳೆಯರಿಗೆ ತರಬೇತಿ ನೀಡಿ ಅವರಿಗೂ ಉದ್ಯೋಗ ನೀಡುವ ಮೂಲಕ ಆಸರೆಯಾಗಿದ್ಧಾರೆ.

    ನೇಚರ್ ಫ್ರೆಂಡ್ಲಿ ಗಣೇಶ
    ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಸಂಗಮೇಶ್ ‘ಸ್ವಗ್ರಾಮ‘ ಹೆಸರಿನಲ್ಲಿ ವಿನೂತನ ಯೋಜನೆಯೊಂದನ್ನು ರೂಪಿಸಿದ್ದಾರೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮುಕ್ತ ಗಣೇಶ ಚತುರ್ಥಿ ಆಚರಣೆಗೆ ಶ್ರಮಿಸುತ್ತಿದ್ದಾರೆ.

    ಇದನ್ನೂ ಓದಿ: Kalaburagi Rotti Mahadevi: ರೊಟ್ಟಿ ಮಾಡೋ ಮಹಾತಾಯಿ ಕಲಬುರಗಿಯ ಮಹಾದೇವಿ! ಇವರ ಸಕ್ಸಸ್ ಕಥೆ ಕೇಳಿ

    ನೇಚರ್ ಫ್ರೆಂಡ್ಲಿ ಗಣೇಶ ಚತುರ್ಥಿ ಆಚರಣೆ ಬಗ್ಗೆ ಕಳೆದ 6 ತಿಂಗಳಿನಿಂದ ಜನರಲ್ಲಿ ಹಲವು ಬಗೆಯ ಜಾಗೃತಿ ಮೂಡಿಸಿದ ಇವರು, ಜನರಿಗಾಗಿ ಜೇಡಿ ಮಣ್ಣಿನ ಗಣಪನನ್ನು ತಯಾರಿಸಿದ್ದಾರೆ.  ಅದಕ್ಕಾಗಿಯೇ ಬೆಳಗಾವಿಯಿಂದ ಹಾಗೂ ಪಕ್ಕದ ಬೀದರ್ ಜಿಲ್ಲೆಯಿಂದ ಜೇಡಿ ಮಣ್ಣನ್ನು ತಂದು ಮಣ್ಣಿನ ಗಣಪತಿ ತಯಾರಿಕೆಯಲ್ಲಿ ತೊಡಗಿದ್ದಾರೆ.

    ಗಜಮುಖನಿಗೆ ವಿವಿಧ ಬೆಲೆ
    ಹೀಗೆ ತಯಾರಿಸಲಾದ ವಿವಿಧ ಗಾತ್ರಗಳ ವಿಗ್ರಹಗಳನ್ನು 50ರೂ. ಯಿಂದ ಹಿಡಿದು 16 ಸಾವಿರದವರೆಗೆ ಬೆಲೆ ನಿಗದಿ ಮಾಡಲಾಗಿದೆ. ಜೊತೆಗೆ ಈ ಮೂರ್ತಿಯನ್ನು ಹಬ್ಬ ಮುಗಿದ ಮೇಲೆ ಮನೆಯಲ್ಲೇ ನೀರಿಗೆ ಹಾಕಬಹುದಾಗಿದೆ. ಅಥವಾ ಮಣ್ಣನ್ನು ಗಿಡ ಬೆಳೆಸುವದಕ್ಕೂ ಉಪಯೋಗಿಸ ಬಹುದಾಗಿದೆ.

    ಇದನ್ನೂ ಓದಿ: Kalaburagi: ಮರವೇ ದವಾಖಾನೆ! ಕಲಬುರಗಿಯಲ್ಲೊಂದು ಸಂಜೀವಿನಿ ಮರ!

    ಒಟ್ಟಿನಲ್ಲಿ ಕಲರ್ ಫುಲ್ ಗಣಪನಿಗಿಂತಲೂ ಪರಿಸರ ಸ್ನೇಹಿ ಗಣಪನೇ ಶ್ರೇಷ್ಟ ಅನ್ನೋದನ್ನ ಸಾರ್ವಜನಿಕರೂ ತೋರಿಸಿಕೊಡಬೇಕಿದೆ.

    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
    Published by:guruganesh bhat
    First published: