ಕಲಬುರಗಿ: ರೊಟ್ಟಿ ತಟ್ಟುತ್ತಿರೋ ಮಹಿಳೆಯರು, ಬಂದಿರೋ ಭಕ್ತರಿಗೆ ಅನ್ನ, ಪಲ್ಯ ಬಡಿಸುತ್ತಿರೋ ಸ್ವಯಂ ಸೇವಕರು. ಹೀಗೆ ಶರಣ ಬಸವೇಶ್ವರ ಜಾತ್ರೆಗೆ (Sharana Basaveshwara Jatra) ಬಂದವರ ಹಸಿವು ತಣಿಸುವ ಪುಣ್ಯದ ಕೆಲಸಕ್ಕೀಗ ಶತಮಾನದ ಹರುಷ! ಇಂತಹ ಅಪರೂಪದ ಅನ್ನದಾಸೋಹದ (Annadana) ಬಗೆ ನೋಡ್ಕೊಂಡು ಬರೋಣ ಬನ್ನಿ.
ಕಲಬುರಗಿ ಆರಾಧ್ಯದೈವ ಶ್ರೀ ಶರಣ ಬಸವೇಶ್ವರರ ತತ್ವ ಆದರ್ಶಗಳನ್ನು ಪಾಲಿಸುವುದರ ಜೊತೆ ಜೊತೆಗೆ ಪ್ರತಿ ವರ್ಷ ಶರಣ ಬಸವೇಶ್ವರರ ಜಾತ್ರೆಗೆ ಇಲ್ಲೊಂದು ಬಡಾವಣೆ ಭಕ್ತರು ಅನ್ನದಾಸೋಹ ಆಯೋಜಿಸುತ್ತಾ ಬಂದಿದ್ದಾರೆ. ಸತತ ಐದು ದಿವಸಗಳ ಕಾಲ ರೊಟ್ಟಿ, ಪಲ್ಯ, ಅನ್ನ ಸಾಂಬಾರು ಉಣಬಡಿಸುತ್ತಾ ಭಕ್ತರ ಮನ ಗೆದ್ದಿದ್ದಾರೆ.
ಅನ್ನ ದಾಸೋಹ
ಇದೀಗ ಕಲಬುರಗಿ ಶರಣರ 201 ನೇ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಅದ್ದೂರಿಯಾಗಿ ಜರುಗುತ್ತಿದ್ದು, ಲಕ್ಷಾಂತರ ಭಕ್ತಗಣ ಮಹಾರಥೋತ್ಸವಕ್ಕೆ ಸಾಕ್ಷಿಯಾಗುತ್ತಾರೆ. ಹೀಗೆ ಕಲಬುರಗಿಗೆ ಆಗಮಿಸುವ ಭಕ್ತರ ಸೇವೆಯಲ್ಲಿ ಜಗತ್ ಬಡಾವಣೆಯ ಭಕ್ತರು ತೊಡಗಿಸಿಕೊಂಡಿದ್ದಾರೆ. ಇಲ್ಲಿಗೆ ಆಗಮಿಸೋ ಭಕ್ತರ ಹಸಿವು ತಣಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ.
ಶತಮಾನದ ಹರುಷ
ನಗರದ ಅಪ್ಪನ ಕೆರೆ ಬಳಿ ಇರುವ ಶ್ರೀಸಿದ್ದಾರೂಡ ಮಠದಲ್ಲಿ ಐದು ದಿನಗಳ ಕಾಲ ಅನ್ನ ಸಂತರ್ಪಣೆ ಮೂಲಕ ಆಗಮಿಸುವ ಭಕ್ತರ ಪ್ರೀತಿಗೂ ಪಾತ್ರರಾಗುತ್ತಿದ್ದಾರೆ. ಹೀಗೆ ಆಯೋಜಿಸಿಕೊಂಡು ಬಂದಿರುವ ಅನ್ನ ದಾಸೋಹಕ್ಕೆ ಈ ವರ್ಷಕ್ಕೆ 100 ವರ್ಷಗಳು ಸಂದಿವೆ!
ಇದನ್ನೂ ಓದಿ: Kalaburagi: ಎದುರು ಮನೆಯಲ್ಲಿ ಗಂಡು ಮಗು ಹುಟ್ಟಿದ್ರೆ ಈ ಮನೆಲಿ ಇಡೀ ತಿಂಗಳು ಹಬ್ಬ!
ಭಕ್ತರಿಗೂ ಖುಷಿ
ಶರಣ ಬಸವೇಶ್ವರರ ಜಾತ್ರೆಗೆ ಕಲಬುರಗಿ, ಕಲ್ಯಾಣ ಕರ್ನಾಟಕ ಭಾಗವಲ್ಲದೆ ಪಕ್ಕದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಬರುತ್ತಾರೆ. ಭಕ್ತಾದಿಗಳಿಗೆ ಜಾತ್ರೆ ಪ್ರಾರಂಭವಾದಾಗಿನಿಂದ ಹಿಡಿದು ಐದು ದಿನಗಳವರೆಗೆ ಜಗತ್ ಬಡಾವಣೆ ಭಕ್ತರ ಈ ಅನ್ನದಾನ ಸೇವೆ ಭಕ್ತರ ಹಸಿವು ತಣಿಸುತ್ತಿದೆ. ನೂರು ವರ್ಷಗಳು ಸಂದರೂ ಅದೇ ನಿಸ್ವಾರ್ಥ ಮನೋಭಾವದ ಸೇವೆ, ಊಟೋಪಚಾರಗಳೆಲ್ಲವೂ ಬರೋ ಭಕ್ತರಿಗೂ ಅಷ್ಟೇ ಖುಷಿ ನೀಡುತ್ತಿದೆ.
ಇದನ್ನೂ ಓದಿ: Kalaburagi: ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರ, ಜಾತಿ-ಧರ್ಮದ ಹಂಗಿಲ್ಲದೇ ಅನಾಥ ಶವಗಳಿಗೆ ಮುಕ್ತಿ ಕೊಡುವ ಯುವಕರು!
ಒಟ್ಟಿನಲ್ಲಿ ಜಗತ್ ಬಡಾವಣೆಯ ಶರಣ ಭಕ್ತ ಬಳಗ ತ್ರಿವಿಧ ದಾಸೋಹಿ ಶರಣ ಬಸವೇಶ್ವರರ ನೆನೆಪಲ್ಲಿ ಸಾವಿರಾರು ಭಕ್ತರಿಗೆ ಶತಮಾನದಿಂದ ಅನ್ನ ದಾಸೋಹ ಏರ್ಪಡಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ವಿಚಾರವೇ ಸರಿ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ