• Home
  • »
  • News
  • »
  • kalburgi
  • »
  • Kalaburagi Susla: ಈ ಸುಸಲಾ ತಿಂದ್ರೆ ನೀವು ನೀವಾಗಿರಲ್ವಂತೆ!

Kalaburagi Susla: ಈ ಸುಸಲಾ ತಿಂದ್ರೆ ನೀವು ನೀವಾಗಿರಲ್ವಂತೆ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇಲ್ಲಿರೋ ನಾಲ್ಕೈದು ಹೋಟೆಲ್​ಗಳಲ್ಲೂ ಸೇಮ್ ಟೆಸ್ಟ್. ಹಾಗಾಗಿ ಪ್ರತಿ ಹೋಟೆಲ್​ನಲ್ಲೂ ದಿನಕ್ಕೆ 10ರಿಂದ 15 ಚೀಲ ಮಂಡಕ್ಕಿ ಚುರುಮುರಿ ಖಾಲಿಯಾಗುತ್ತೆ.

  • Share this:

    ಉಪ್ಪು, ಖಾರ ಬೆರೆತ ಸುಸಲ, ನೋಡಿದ್ರೆ ಸಾಕು ಬಾಯಲ್ಲಿ ನೀರೂರುತ್ತೆ! ದಿನ ಬೆಳಗಾದ್ರೆ ಸಾಕು, ಇಷ್ಟಪಟ್ಟು ಈ ಸುಸಲಾ ತಿನ್ನೋಕು ಜನ ಕಾದು ಕುಳಿತಿರ್ತಾತೆ. ಕಲಬುರಗಿಯ ಈ ಸುಸಲಾ ಅಷ್ಟೊಂದು ಟೇಸ್ಟಿ, ಅಷ್ಟೊಂದು ಸ್ಪೈಸಿ. ಹಂಗಾಗಿಯೇ ನೋಡಿ ತಿಂಡಿ ರಸಿಕರು ನಂಗೂ ಒಂದ್ ಸುಸಲಾ ಅಂತಾ ಕೇಳ್ದೇ ಇರೋ ದಿನಾನೇ ಇಲ್ಲ ಕಣ್ರೀ! ಹೌದು, ಕಲಬುರಗಿ ಜಿಲ್ಲೆಯ (Kalaburgi News) ಕಮಲಾಪುರ ತಾಲೂಕಿನ ಕುರಿಕೋಟಾ ಬ್ರಿಡ್ಜ್ ಬಳಿ ಇರೋ ಐದಾರು ಹೋಟೆಲ್​ಗಳು ಕೇವಲ ಸುಸಲಾಗೆ (Kalaburagi Kamalapur Susla) ಫೇಮಸ್ ಆಗಿವೆ. ಹೀಗಾಗಿ ಇಲ್ಲಿ ತಯಾರಿಸುವ ಸುಸಲಾಕ್ಕೆ ಕುರಿಕೋಟಾ ಸುಸಲಾ ಅಂತಾನೆ ಕರೀತಾರೆ. ಇಲ್ಲಿಗೆ ರಾಜ್ಯ ಮಾತ್ರವಲ್ಲ ಹೊರರಾಜ್ಯದ ಜನರೂ ಈ ಕಡೆ ಬಂದ್ರೆ ಇಲ್ಲಿಗೆ ಆಗಮಿಸಿ ಇಲ್ಲಿನ ಸುಸಲಾ ಸವಿಯದೆ ಇರಲಾರರು. ಅಷ್ಟರ ಮಟ್ಟಿಗೆ ಪ್ರಖ್ಯಾತಿಯನ್ನು ಪಡೆದಿದೆ ಇಲ್ಲಿ ತಯಾರಾಗುವ ಸುಸಲಾ.


    ಇಲ್ಲಿರೋ ನಾಲ್ಕೈದು ಹೋಟೆಲ್​ಗಳಲ್ಲೂ ಸೇಮ್ ಟೇಸ್ಟ್. ಹಾಗಾಗಿ ಪ್ರತಿ ಹೋಟೆಲ್​ನಲ್ಲೂ ದಿನಕ್ಕೆ 10ರಿಂದ 15 ಚೀಲ ಮಂಡಕ್ಕಿ ಚುರುಮುರಿ ಖಾಲಿಯಾಗುತ್ತೆ.


    ಇದನ್ನೂ ಓದಿ: Kalaburagi Rose: ಕಲಬುರಗಿ ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ದಿನಕ್ಕೆ 3 ಸಾವಿರ ಆದಾಯ!


    ಸುಸಲಾದ ಕಡಾಯಿ ಖಾಲಿ!
    ಕುರಿಕೋಟಾ ಬ್ರಿಡ್ಜ್ ಬಳಿಯ ಹೋಟೆಲ್​ಗಳು ಹೆದ್ದಾರಿಗೆ ಹೊಂದಿಕೊಂಡಿವೆ. ಇಲ್ಲಿಗೆ ಕಲಬುರಗಿಯ ವಿವಿಧೆಡೆಯಿಂದ ಆಗಮಿಸುವ ಪ್ರಯಾಣಿಕರು ಇಲ್ಲಿ ತಯಾರಿಸುವ ಮಂಡಕಿ ಸುಸಲಾ ಬೇರೆ ಬೇರೆ ಕಡೆಗೆ ಪಾರ್ಸಲ್ ಕೂಡಾ ಕೊಂಡೊಯ್ತಾರೆ. ಅಷ್ಟೇ ಏಕೆ? ಕೇವಲ ಐದರಿಂದ ಹತ್ತು ನಿಮಿಷದಲ್ಲಿ ಸುಸಲಾದ ಕಡಾಯಿ ಖಾಲಿಯಾಗಿತ್ತೆ ಅಂತಾರೆ ಹೋಟೆಲ್ ಮಾಲಿಕರು.


    ಇದನ್ನೂ ಓದಿ: Guleda Lakkamma: ಚಪ್ಪಲಿಯಿಂದ ಮುಖ, ಮೈಕೈ ಸವರಿಕೊಂಡ್ರೆ ಒಳ್ಳೇದು ಮಾಡುವ ದೇವರು!


    ಹೇಗೆ ತಯಾರಿಸ್ತಾರೆ ಗೊತ್ತೇ?
    ಟೇಸ್ಟ್ ಬರಲಿ ಅಂತಾ ಇಲ್ಲಿನ ಹೊಟೇಲ್ ಮಾಲಿಕರು ಯಾವುದೇ ಟೇಸ್ಟಿಂಗ್ ಪೌಡರ್ ಬಳಸಲ್ವಂತೆ. ರುಚಿಗೆ ತಕ್ಕಂತೆ ಉಪ್ಪು, ಪುಟಾಣಿ ಪೌಡರ್, ಈರುಳ್ಳಿ, ಅರಶಿನ, ಹಸಿಮೆಣಸಿನಕಾಯಿ, ಟೊಮ್ಯಾಟೊ, ಕೊತ್ತಂಬರಿ ಸೊಪ್ಪು ಬಳಸಿ ಸುಸಲಾವನ್ನು ತಯಾರಿಸ್ತಾರೆ. ಹೀಗೆ ಕಲಬುರಗಿಯ ಕುರಿಕೋಟಾ ಸುಸಲಾ ಈ ಭಾಗದ ಜನರ ಪಂಚಪ್ರಾಣವೇ ಆಗ್ಬಿಟ್ಟಿದೆ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: