Kalaburagi Diamond Market: ಆಗ ವಜ್ರದ ಮಾರುಕಟ್ಟೆ, ಈಗ ಖಾಲಿಖಾಲಿ! ಕಲಬುರಗಿಯ ಹಿರಾಪುರವನ್ನು ನೀವೇ ನೋಡಿ

ಬಹುಮನಿ ಸುಲ್ತಾನರ ಕಾಲದಲ್ಲಿ ವಜ್ರ, ಚಿನ್ನ, ಮುತ್ತು, ಹವಳಗಳನ್ನು ಮಾರಾಟ ಮಾಡಲಾಗುತ್ತಿದ್ದ ಗ್ರಾಮದ ಬೀದಿಗಳನ್ನು ನೀವೇ ನೋಡಿ.

ಕಲಬುರಗಿಯಲ್ಲಿ ವಜ್ರದ ಮಾರುಕಟ್ಟೆ!

"ಕಲಬುರಗಿಯಲ್ಲಿ ವಜ್ರದ ಮಾರುಕಟ್ಟೆ!"

 • Share this:
  ಕಲಬುರಗಿ: ಕೆಲವೊಂದು ಊರಿನ ಹೆಸರಿಗೆ ಇತಿಹಾಸವಿರುತ್ತದೆ. ಅಂತಹ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ (Kalaburagi) ಈ ಗ್ರಾಮವೂ ಒಂದು. ಇತಿಹಾಸ ಪ್ರಸಿದ್ಧ ಹೆಸರನ್ನು ಹೊಂದಿರುವಂತಹ ಗ್ರಾಮ, ಈ ಗ್ರಾಮದಲ್ಲಿ ವಜ್ರದ ಮಾರುಕಟ್ಟೆ ಇತ್ತು ಎನ್ನಲಾಗಿದೆ. ಹೌದು, ನಗರದ ಹೊರವಲಯದಲ್ಲಿರುವ ಹಿರಾಪುರವೇ (Hirapur Kalaburagi) ಐತಿಹಾಸಿಕ ಗ್ರಾಮ. ಹಿರಾಪುರ ಗ್ರಾಮ ಈ ಹಿಂದೆ ವಜ್ರದ ವ್ಯಾಪಾರಕ್ಕೆ ಹೆಸರಾಗಿತ್ತು. ಅಲ್ಲದೆ ಇಲ್ಲಿ ಚಿನ್ನ, ಮುತ್ತು, ಹವಳ, ವಜ್ರದ ವ್ಯಾಪಾರ ನಡೆಯುವ ಪ್ರಮುಖ ಮಾರುಕಟ್ಟೆ ಸ್ಥಳವಾಗಿತ್ತು. ಹೀರಾ (ವಜ್ರ) ವ್ಯಾಪಾರ ಹೆಚ್ಚು ನಡೆಯುತ್ತಿದ್ದ ಕಾರಣಕ್ಕೆ ಇದಕ್ಕೆ ಹಿರಾಪುರ ಎಂಬ ಹೆಸರು ಬಂದಿದೆ ಎಂದು ಹಿರಿಯರು ಹೇಳುತ್ತಾರೆ.

  ಇಲ್ಲಿ ಹಿರಾಬೀಬಿ ಮಸೀದಿ ಇರುವ ಕಾರಣಕ್ಕೆ ಇದಕ್ಕೆ ಹೀರಾಪುರ ಎಂಬ ಹೆಸರು ಬಂದಿರಬಹುದು ಎಂಬುದು ಕೆಲವರ ನಂಬಿಕೆ. ಆದರೆ ಇಂದಿನ ಹಿರಾಪುರ ಚಿನ್ನ, ಬೆಳ್ಳಿ, ಮುತ್ತು, ಹವಳ ಹಾಗೂ ವಜ್ರದ ವ್ಯಾಪಾರ ನಡೆಯುವ ಮುಖ್ಯ ಬಜಾರ್ ಆಗಿತ್ತಂತೆ. ಸದ್ಯ ಇದನ್ನು ಹೀರಾ ಬಜಾರ್ ಎಂತಲೂ ಕರೆಯುತ್ತಿದ್ದರು.

  ಆದಿಲ್ ಶಾಹಿ ಕಾಲದ ನೆನಪು
  1490 ರಿಂದ 1686 ರವರೆಗೆ ವಿಜಯಪುರವನ್ನಾಳಿದ ಆದಿಲ್ ಶಾಹಿ ವಂಶಸ್ಥರು ವ್ಯಾಪಾರಕ್ಕೆ ಇಲ್ಲಿಗೇ ಬರುತ್ತಿದ್ದರು. ಆದಿಲ್‌ಶಾಹಿ ವಂಶಸ್ಥರು, ಸಗನಾಡಿನ ದೊರೆಗಳು ಸೇರಿದಂತೆ ಹಲವು ರಾಜರು ಇಲ್ಲಿ ವ್ಯಾಪಾರಕ್ಕಾಗಿ ಆಗಮಿಸುತ್ತಿದ್ದರಂತೆ.

  ಇದನ್ನೂ ಓದಿ: Kalaburagi Rotti Mahadevi: ರೊಟ್ಟಿ ಮಾಡೋ ಮಹಾತಾಯಿ ಕಲಬುರಗಿಯ ಮಹಾದೇವಿ! ಇವರ ಸಕ್ಸಸ್ ಕಥೆ ಕೇಳಿ

  ಬಹಮನಿ ಸಾಮ್ರಾಜ್ಯದ ಇತಿಹಾಸ ಅದರ ಮೊದಲ ದೊರೆ ಅಲ್ಲಾವುದ್ದೀನ್ ಹಸನ್ ಬಹಮನ್ ಶಾನಿಂದ ಆರಂಭಗೊಳ್ಳುತ್ತದೆ. ಆತನ ನಂತರ ಮೊದಲನೆಯ ಮಹ್ಮದ್ ಶಾ- ಅಲಾವುದ್ದೀನ್ ಮುಜಾಹಿದ್ ಶಾ, ಮೊದಲನೆಯ ದೌಡ್ ಶಾ, ಎರಡನೆಯ ಮಹಮದ್ ಶಾ ಸೇರಿದಂತೆ ಕೊನೆ ಸುಲ್ತಾನ್ ತಾಜುದ್ದೀನ್ ಫಿರೋಜ್ ಶಹಾ ಕಲಬುರಗಿಯನ್ನಾಳಿದ ಪ್ರಮುಖರು. ನಂತರ ಬೀದರ್ ಪ್ರದೇಶ ಸೇರಿದಂತೆ ಒಟ್ಟು 18 ಬಹಮನಿ ದೊರೆಗಳು ಈ ಪ್ರದೇಶವನ್ನಾಳಿದ್ದರು.

  ದೇಗುಲ, ದರ್ಗಾ, ಮಸೀದಿ
  ಇಲ್ಲಿ ಅನೇಕ ಗುಮ್ಮಟ, ಮಸೀದಿ, ದರ್ಗಾ ಹಾಗೂ ಜನರ ಕುಡಿವ ನೀರಿನ ಅನುಕೂಲಕ್ಕಾಗಿ ಅನೇಕ ಬಾವಿ, ಕೆರೆಗಳನ್ನು ನಿರ್ಮಾಣ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಂದು ಈ ಸುಲ್ತಾನರು ನಿರ್ಮಿಸಿದ ಅನೇಕ ಬಾವಿಗಳು ಇಂದಿಗೂ ಹೀರಾಪುರದಲ್ಲಿ ಕಾಣಬಹುದಾಗಿದೆ. ಇಲ್ಲಿನ ಹಿರಾಬೀಬಿ ಮಸೀದಿ ಎದುರು ಹಾಗೂ ಶಂಕರಲಿಂಗೇಶ್ವರ ಗುಡಿ ಎದುರು ಸೇರಿದಂತೆ ಗ್ರಾಮದ ಇತರೆಡೆ ಈ ರಾಜರು ನಿರ್ಮಿಸಿದ ಬಾವಿಗಳು ಇಂದಿಗೂ ಜನರ ನೀರಿನ ದಾಹ ತಣಿಸುತ್ತಿವೆ.

  Hirapur Kalaburagi
  ಹಿರಾಪುರಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಚಾಂದಬೀಬಿ ಸುಲ್ತಾನಳು 1585ರಲ್ಲಿ ನಿರ್ಮಿಸಿದ ಸುಂದರವಾದ ಹಿರಾಬೀಬಿ ಮಸೀದಿ ಹಾಗೂ ಸೈಯದ್ ಅಬೀಬ್ ಶಾ ವಲಿ ದರ್ಗಾಗಳು ಗ್ರಾಮದಲ್ಲಿವೆ. ಹಿರಾಪುರದಲ್ಲಿ ಐತಿಹಾಸಿಕ ಶಂಕರಲಿಂಗೇಶ್ವರ ದೇವಾಲಯ, ನಗರೇಶ್ವರ ಗುಡಿ ಇದೆ.

  ಇದನ್ನೂ ಓದಿ: Kalaburagi: ಮರವೇ ದವಾಖಾನೆ! ಕಲಬುರಗಿಯಲ್ಲೊಂದು ಸಂಜೀವಿನಿ ಮರ!

  ಇಲ್ಲಿನ ಬಸವಣ್ಣಪ್ಪ ದೇವರ ಜಾತ್ರೆ ಬಹಳ ಅದ್ಧೂರಿಯಾಗಿ ಜರುಗುತ್ತದೆ. ಇಲ್ಲಿ ಹಿರಾಬಿಬಿ ಮಸೀದಿ ಎದುರು ಅಬಿಬ್ ಶಹಾವಲಿ ದರ್ಗಾ ಇದ್ದು, ರಂಜಾನ್ ವೇಳೆ ಇಲ್ಲಿ ಅದ್ದೂರಿಯಾಗಿ ಉರೂಸ್ ಆಚರಿಸಲಾಗುತ್ತದೆ. ಗ್ರಾಮದಲ್ಲಿ ಹಜರತ್ ದಾವಲ್ ಮಲಿಕ್ ದರ್ಗಾ ಸಹ ಇದೆ. ಹೀಗೆ ಹೀರಾಪುರ ವ್ಯಾಪಾರದ ಪ್ರಮುಖ ಕೇಂದ್ರ ಹಾಗೂ ಇಲ್ಲಿ ವಜ್ರದ ವ್ಯಾಪಾರ ನಡೆಯುತ್ತಿರುವುದು ಇತಿಹಾಸದಲ್ಲಿ ಸಹ ದಾಖಲಾಗಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

  ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ
  Published by:guruganesh bhat
  First published: