• Home
  • »
  • News
  • »
  • kalburgi
  • »
  • Kalaburagi: ಕಲಬುರಗಿಯ ಕಲ್ಲುನಾಡಿನ ಕಲಿಗಳು, 'ಶಿಕ್ಷಿತ'ರಿಂದ ಊರಿಡೀ ಹಚ್ಚಹಸಿರು!

Kalaburagi: ಕಲಬುರಗಿಯ ಕಲ್ಲುನಾಡಿನ ಕಲಿಗಳು, 'ಶಿಕ್ಷಿತ'ರಿಂದ ಊರಿಡೀ ಹಚ್ಚಹಸಿರು!

ಇವ್ರೆಲ್ಲರೂ ವೃತ್ತಿಯಲ್ಲಿ ವೈದ್ಯರು, ವಕೀಲರು, ಶಿಕ್ಷಕರು, ಸರ್ಕಾರಿ ನೌಕರಸ್ಥರು. ಕೈತುಂಬಾ ಸಂಪಾದನೆ ಗಳಿಸುವವರು. ಆದ್ರೆ ನಮ್ ಊರಿಗಾಗಿ ಏನಾದ್ರೂ ಮಾಡ್ಬೇಕು ಎಂಬ ಒಂದೇ ಒಂದು ಇಚ್ಛೆಯಿಂದ ಕಲಬುರಗಿಯ ರಸ್ತೆಬದಿಗಳಲ್ಲಿ ಹಚ್ಚ ಹಸಿರಾಗುವಂತೆ ಮಾಡಿದ್ದಾರೆ.

"ಇವ್ರೆಲ್ಲರೂ ವೃತ್ತಿಯಲ್ಲಿ ವೈದ್ಯರು, ವಕೀಲರು, ಶಿಕ್ಷಕರು, ಸರ್ಕಾರಿ ನೌಕರಸ್ಥರು. ಕೈತುಂಬಾ ಸಂಪಾದನೆ ಗಳಿಸುವವರು. ಆದ್ರೆ ನಮ್ ಊರಿಗಾಗಿ ಏನಾದ್ರೂ ಮಾಡ್ಬೇಕು ಎಂಬ ಒಂದೇ ಒಂದು ಇಚ್ಛೆಯಿಂದ ಕಲಬುರಗಿಯ ರಸ್ತೆಬದಿಗಳಲ್ಲಿ ಹಚ್ಚ ಹಸಿರಾಗುವಂತೆ ಮಾಡಿದ್ದಾರೆ."

ಇವ್ರೆಲ್ಲರೂ ವೃತ್ತಿಯಲ್ಲಿ ವೈದ್ಯರು, ವಕೀಲರು, ಶಿಕ್ಷಕರು, ಸರ್ಕಾರಿ ನೌಕರಸ್ಥರು. ಕೈತುಂಬಾ ಸಂಪಾದನೆ ಗಳಿಸುವವರು. ಆದ್ರೆ ನಮ್ ಊರಿಗಾಗಿ ಏನಾದ್ರೂ ಮಾಡ್ಬೇಕು ಎಂಬ ಒಂದೇ ಒಂದು ಇಚ್ಛೆಯಿಂದ ಕಲಬುರಗಿಯ ರಸ್ತೆಬದಿಗಳಲ್ಲಿ ಹಚ್ಚ ಹಸಿರಾಗುವಂತೆ ಮಾಡಿದ್ದಾರೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಕಣ್ರೆಪ್ಪೆಗಳನ್ನೇ ತೆರೆಯಲಾಗದಷ್ಟು ಕಟು ಬಿಸಿಲು, ಆದ್ರೆ ಈ ಬಿಸಿಲನ್ನೂ ತಡೆಯುತ್ತೇವೆ ಎಂದು ರಸ್ತೆಬದಿಗಳಲ್ಲಿ ತಲೆಯೆತ್ತಿ ನಿಂತ ಮರಗಳು, ಅರೇ ಇಷ್ಟೊಂದು ಮರಗಳು ಹೀಗೆ ಸಾಲಾಗಿ ನಿಂತಿರೋಕೆ ಹೇಗೆ ಸಾಧ್ಯ? ಯಾರು ಕಾರಣ ಅಂದ್ರಾ? ಅವರೇ ನೋಡಿ ಕಲಬುರಗಿಯ (Kalaburagi) ಕಲ್ಲುನಾಡಿನ ಕಲಿಗಳು. ಇವ್ರೆಲ್ಲರೂ ವೃತ್ತಿಯಲ್ಲಿ ವೈದ್ಯರು, ವಕೀಲರು, ಶಿಕ್ಷಕರು, ಸರ್ಕಾರಿ ನೌಕರಸ್ಥರು. ಕೈತುಂಬಾ ಸಂಪಾದನೆ (Salary) ಗಳಿಸುವವರು. ಆದ್ರೆ ನಮ್ ಊರಿಗಾಗಿ ಏನಾದ್ರೂ ಮಾಡ್ಬೇಕು ಎಂಬ ಒಂದೇ ಒಂದು ಇಚ್ಛೆಯಿಂದ ಕಲಬುರಗಿಯ ರಸ್ತೆಬದಿಗಳಲ್ಲಿ ಹಚ್ಚ ಹಸಿರಾಗುವಂತೆ (Greenery) ಮಾಡಿದ್ದಾರೆ.


    ಇದನ್ನೂ ಓದಿ: Kalaburagi: ಸರ್ಕಾರಿ ಶಾಲೆ ಕಟ್ಟಲು ಜೋಳಿಗೆ ಹಿಡಿದ ಸ್ವಾಮೀಜಿ; ಸಂಗ್ರಹವಾಯ್ತು 40 ಲಕ್ಷ!


    ಡಾ. ನಾಗನಾಥ ಯಾದಗಿರಿ ಅವರ ನೇತೃತ್ವದಲ್ಲಿ ರಚನೆಯಾದ ಕಲಬುರಗಿ ಕಲಿಗಳು ತಂಡ, ಕಳೆದ ಐದು ವರ್ಷದಿಂದ ಕಲ್ಬುರ್ಗಿ ಜಿಲ್ಲೆಯ ಹಲವೆಡೆ ಒಂದು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟಿದೆ. ಆ ಮರಗಳೀಗ ಬಾನೆತ್ತರಕ್ಕೆ ಬೆಳೆದು ಜನರಿಗೆ ನೆರಳು, ಸ್ವಚ್ಛ ಗಾಳಿ ನೀಡ್ತಿವೆ. ಸ್ವಂತ ದುಡ್ಡಿನಲ್ಲಿ ಸಸಿಗಳನ್ನು ಖರೀದಿಸಿ ರಸ್ತೆಬದಿಗಳಲ್ಲಿ ನೆಟ್ಟು ಬೆಳೆಸ್ತಿದ್ದಾರೆ.


    ಇದನ್ನೂ ಓದಿ: Custard Apple: ತನ್ನಿಂದ ತಾನೇ ಬೆಳೆಯುತ್ತೆ ಸೀತಾಫಲ! ರುಚಿಯೂ ಸೂಪರ್ ಟೇಸ್ಟಿ


    ಕಲ್ಲುನಾಡಿನ ಕಲಿಗಳು ತಂಡವು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಕಲಬುರಗಿಯಲ್ಲಿ ಹಸಿರು ಜಾಲವನ್ನು ವಿಸ್ತರಿಸ್ತಿದೆ. ಸದ್ಯ ಕಲಬುರಗಿಯ 150ಕ್ಕೂ ಹೆಚ್ಚು ನಾಗರಿಕರು ಈ ತಂಡ ಸೇರಿದ್ದಾರೆ. ತಾವಾಯ್ತು ತಮ್ಮ ಕೆಲಸವಾಯ್ತು ಅಂತಿರದೇ ಊರಿನ ತಾಪಮಾನ ಇಳಿಸೋಕೆ ಪ್ರಯತ್ನ ನಡೆಸ್ತಿರೋ ಕಲಬುರಗಿ ಕಲಿಗಳ ಪ್ರಯತ್ನಕ್ಕೆ ಭೇಷ್ ಅನ್ನೋಣ, ನಾವೂ ನಮ್ಮೂರಲ್ಲಿ ಇಂತಹುದೇ ಪ್ರಯತ್ನ ಶುರುಮಾಡೋಣ ಅಲ್ವಾ?


    ವರದಿ:ಶ್ರೀಕಾಂತ್ ಬಿರಾಳ,ನ್ಯೂಸ್18 ಕನ್ನಡ ಕಲಬುರಗಿ

    Published by:Precilla Olivia Dias
    First published: