ಕಲಬುರಗಿ: ಕೈಯ್ಯಲ್ಲಿ ಮೈಕು, ಅದೇನೋ ಅನೌನ್ಸ್ಮೆಂಟು, ಅರೆ, ಈ ಹೊಲದಲ್ಲಿ ಅದೇನಪ್ಪ ಅಂತಹ ವಿಶೇಷ ಪ್ರಕಟಣೆ ಅಂತೀರಾ? ಯೆಸ್, ಇಂತಹ ಪ್ರಕಟಣೆಗೆ ಜನರಲ್ಲ, ಪ್ರಾಣಿ ಪಕ್ಷಿಗಳೆಲ್ಲ ಓಟಕ್ಕಿಳಿಯುತ್ತವೆ. ತಾನು ಬೆಳೆದ ಬೆಳೆಯಲ್ಲ (Farmers Crop) ಸೇಫ್ ಆಗ್ತವೆ. ಅದೆಲ್ಲ ಹೇಗೆ ಅಂತೀರಾ? ಹೇಳ್ತೀವಿ ನೋಡಿ.
ಹೌದು, ತಾವು ಕಷ್ಟಪಟ್ಟು ಬೆಳೆದ ಬೆಳೆಗಳು ಪ್ರಾಣಿ ಪಕ್ಷಿಗಳ ಪಾಲಾಗುತ್ತಿರುವುದನ್ನು ತಪ್ಪಿಸಲು ಕಲಬುರಗಿ ರೈತರು ಹೊಸ ಐಡಿಯಾ ಹೂಡಿದ್ದಾರೆ. ಹೀಗೆ ತಮ್ಮ ಹೊಲ, ಗದ್ದೆ, ಜಮೀನಿನ ಬಳಿ ಮೈಕ್ ಸದ್ದು ಮಾಡ್ತಾ ಹೋದ್ರೆ ಸಾಕು ಅದೆಂತಹ ಪ್ರಾಣಿ, ಪಕ್ಷಿಯೂ ಹತ್ತಿರ ಸುಳಿಯದು.
ಕೃಷಿಕರಿಂದ ಬಹು ಬೇಡಿಕೆ
ಹೀಗಂತೂ ಕಲಬುರಗಿಯಾದ್ಯಂತ ಶಬ್ದ ಮೊಳಗಿಸೋ ಈ ಸಾಧನದ್ದೇ ಅಬ್ಬರ. ಪ್ರತಿಯೊಬ್ಬ ಕೃಷಿಕರು ಇದನ್ನ ಮುಗಿಬಿದ್ದು ಕೊಂಡೊಯ್ಯುತ್ತಿದ್ದಾರೆ. ಒಂದೇ ಸಮನೆ ಶಬ್ದ ಮೊಳಗುವ ಇದರ ಶಬ್ದ ಕೇಳಿ ಪ್ರಾಣಿ ಪಕ್ಷಿಗಳು ಅದ್ಯಾರೋ ಅಟ್ಟಾಡಿಸಿಕೊಂಡು ಬಂದ್ರು ಅಂದ್ಕೊಂಡು ಓಟಕ್ಕಿಳಿಯುತ್ತವೆ.
ಇದನ್ನೂ ಓದಿ: Kalaburagi: 60 ಕಂಬಗಳ ದೇಗುಲದಲ್ಲಿ ಬ್ರಹ್ಮನ ಹೆಸರು! ವಿಷ್ಣು ಮಹೇಶ್ವರರ ಸಾನಿಧ್ಯ!
ಈ ಶಬ್ದ ಸಾಧನವು ರೈತರಿಗೆ ತುಂಬಾ ಸಹಕಾರಿಯಾಗಿದ್ದು ಒಂದು ಸಲ ರೈತರು ರೆಕಾರ್ಡ್ ಮಾಡಿದ್ರೆ ಸಾಕು ಮತ್ತೆ ಮತ್ತೆ ಸೌಂಡ್ ಮಾಡುತ್ತದೆ. ಜೊತೆಗೆ ಮಾರ್ಧ್ವನಿಸುತ್ತವೆ ಕೂಡ. ಇದರಿಂದ ಪ್ರಾಣಿ ಪಕ್ಷಿಗಳು ಭಯಗೊಂಡು ಓಡಿ ಹೋಗುತ್ತವೆ. ಜೊತೆಗೆ ಸುಲಭವಾಗಿ ಇದನ್ನ ಬಳಸಬಹುದಾಗಿದೆ.
ಕಲಬುರಗಿಯಾದ್ಯಂತ ಶಬ್ದ ಮೊಳಗಿಸೋ ಈ ಸಾಧನದ್ದೇ ಅಬ್ಬರ. ಪ್ರತಿಯೊಬ್ಬ ಕೃಷಿಕರು ಇದನ್ನ ಮುಗಿಬಿದ್ದು ಕೊಂಡೊಯ್ಯುತ್ತಿದ್ದಾರೆ.
ಹಿಂದೆಲ್ಲ ಬೇಲಿ, ಸೀರೆ ಕಟ್ಟಿದ್ರೂ ಆಗ್ದೇ ಹೋಗ್ತಿದ್ದ ಪ್ರಯೋಜನ, ಈಗ ಈ ಚಿಕ್ಕ ಶಬ್ದ ಸಾಧನದಿಂದ ಸಾಧ್ಯವಾಗಿದೆ. ಹಾಗಾಗಿ ರೈತರು ಈ ಹೊಸ ಬಗೆಯ ಐಡಿಯಾಕ್ಕೆ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: Kalaburagi: ಎಕರೆಗೆ 10 ಕ್ವಿಂಟಲ್ ತೊಗರಿ ಬೆಳೆದು ಸಕ್ಸಸ್ ಕಂಡ ಕೃಷಿಕ!
ಒಟ್ಟಿನಲ್ಲಿ ರೈತರು ತಮ್ಮ ಬೆಳೆಗಳನ್ನ ಉಳಿಸುವುದಕ್ಕಾಗಿ ಮಾಡುವ ಸಾಹಸ ಅಷ್ಟಿಷ್ಟಲ್ಲ. ಅಂತಹ ರೈತರಿಗೆ ಈ ಸಾಧನವು ಉಪಕಾರವಾಗುತ್ತಿರುವುದು ಖುಷಿಯ ಸಂಗತಿಯೇ ಸರಿ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ