• Home
 • »
 • News
 • »
 • kalburgi
 • »
 • Kalaburagi: ತೊಗರಿ ಕಣಜದಲ್ಲಿ ಹತ್ತಿ ಹಿರಿಮೆ, ಎಲ್ಲೆಲ್ಲೂ 'ಬಿಳಿ ಬಂಗಾರ'ದ್ದೇ ಹವಾ!

Kalaburagi: ತೊಗರಿ ಕಣಜದಲ್ಲಿ ಹತ್ತಿ ಹಿರಿಮೆ, ಎಲ್ಲೆಲ್ಲೂ 'ಬಿಳಿ ಬಂಗಾರ'ದ್ದೇ ಹವಾ!

ರೈತರ ಕೈಹಿಡಿದ ಬಿಳಿ ಬಂಗಾರ

"ರೈತರ ಕೈಹಿಡಿದ ಬಿಳಿ ಬಂಗಾರ"

ಹತ್ತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಅತಿವೃಷ್ಟಿಯಿಂದಾಗಿ ಕೆಲ ಭಾಗಗಳಲ್ಲಿ ಹತ್ತಿ ಬೆಳೆ ಹಾಳಾಗಿದೆಯಾದ್ರೂ ರಾಜ್ಯದಲ್ಲಿ ಈ ವರ್ಷ ಹತ್ತಿ 21.05 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದೆ.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ಹೊಲದ ತುಂಬಾ ಬೆಳ್ಳನೆಯ ಹತ್ತಿ, ಎಲ್ಲಿ ನೋಡಿದ್ರೂ ಹಾಲಿನಷ್ಟೇ ಬಿಳುಪಿನ ರಾಶಿ ಇದು ಬಿಳಿ ಬಂಗಾರ (Kalaburagi Cotton) ಅಂತಾ ಹೆಸರಾಗಿರೋ ಹತ್ತಿ ಈಗ ಕಲಬುರಗಿ ತೊಗರಿಯನ್ನ (Tur Dal Farming In Kalaburagi) ಆಕ್ರಮಿಸಿದೆ. ಯಾರದ್ದೇ ಜಮೀನು (Kalaburagi Farmers) ಹೊಕ್ಕಿ ನೋಡಿದ್ರೂ ಈಗ ಹತ್ತಿಯದ್ದೇ (Cotton Rate) ಸುದ್ದಿ! ಹಾ.. ಬಿಳಿ ಬಂಗಾರಕ್ಕೆ ಬಂಗಾರದ ರೇಟು ಬಂದಿರೋದಕ್ಕೇ ನೋಡಿ ಇವ್ರೆಲ್ಲ ತೊಗರಿ ಬಿಟ್ಟು ಹತ್ತಿ ನೆಚ್ಚಿಕೊಂಡಿದ್ದಾರೆ.


  ನಿಜ, ತೊಗರಿಯ ಕಣಜ ಕಲಬುರಗಿಯಲ್ಲಿ ಈಗ ಬದಲಾವಣೆಯ ನೀರು ಹರಿಯುತ್ತಿದೆ. ರೈತರು ತೊಗರಿ ಬದಲು ಹತ್ತಿ ಬೆಳೆಯತೊಡಗಿದ್ದಾರೆ. ಈ ವರ್ಷವಂತೂ ಕಲಬುರಗಿಯ ರೈತರು ತೊಗರಿ ಬೆಳೆಯನ್ನ ಬೆಳೆಯದೇ ಅತಿ ಹೆಚ್ಚು ಹತ್ತಿ ಬೆಳೆಯನ್ನು ಬೆಳೆದಿದ್ದಾರೆ. ಇದಕ್ಕೆಲ್ಲ ಕಾರಣ ಹತ್ತಿಗೆ ಸಿಗುತ್ತಿರುವ ಬಂಗಾರದ ಬೆಲೆ. ಹತ್ತಿಯ ಡಿಮ್ಯಾಂಡ್ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಹತ್ತಿಯ ಬೆಲೆ ಕ್ವಿಂಟಾಲ್ಗೆ ಒಂಬತ್ತು ಸಾವಿರದ ಗಡಿ ದಾಟಿದೆ. ಇದರಿಂದ ಅನ್ನದಾತನ ಮುಖದಲ್ಲಿ ಮಂದಹಾಸ ಮೂಡಿದೆ.


  ಹತ್ತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಅತಿವೃಷ್ಟಿಯಿಂದಾಗಿ ಕೆಲ ಭಾಗಗಳಲ್ಲಿ ಹತ್ತಿ ಬೆಳೆ ಹಾಳಾಗಿದೆಯಾದ್ರೂ ರಾಜ್ಯದಲ್ಲಿ ಈ ವರ್ಷ ಹತ್ತಿ 21.05 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆ ಹೊಂದಲಾಗಿದೆ.


  ಇದನ್ನೂ ಓದಿ: Elephant Revenge: 6 ತಿಂಗಳ ಬಳಿಕ ಸೇಡು ತೀರಿಸಿಕೊಂಡ ಕಾಡಾನೆ! ಹಾಸನದ ಕುಟುಂಬ ಕಂಗಾಲು


  ರಾಜ್ಯಾದ್ಯಂತ 7.26 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದ್ದು. ಒಂದು ಹೆಕ್ಟೇರ್​ಗೆ 503 ಕೆಜಿಯಷ್ಟು ಇಳುವರಿ ಬರುವ ನಿರೀಕ್ಷೆಯಿದೆ. ಕಳೆದ ವರ್ಷ 6.21 ಲಕ್ಷ ಹೆಕ್ಟೇರ್​ನಲ್ಲಿ ಬೆಳೆದಿದ್ದ ಹತ್ತಿ, ಈ ಬಾರಿ ಒಟ್ಟು ಇಳುವರಿ 19.40 ಲಕ್ಷ ಟನ್​ನಷ್ಟು ಇಳುವರಿ ಏರಿಕೆ ಆಗಿರುವುದೇ ತೊಗರಿ ನಾಡಲ್ಲಿ ಹತ್ತಿಯ ಕಾರುಬಾರನ್ನು ತೋರಿಸ್ತಿದೆ.


  ಇದನ್ನೂ ಓದಿ: Kalaburagi: ಕಲಬುರಗಿಯ ಕಲ್ಲುನಾಡಿನ ಕಲಿಗಳು, 'ಶಿಕ್ಷಿತ'ರಿಂದ ಊರಿಡೀ ಹಚ್ಚಹಸಿರು!


  ಕಲಬುರಗಿ ಜಿಲ್ಲೆಯ ಅಫಜಲಪುರ ಹಾಗೂ ಜೇವರ್ಗಿ ಭಾಗದಲ್ಲಿ ಅತಿ ಹೆಚ್ಚಿನ ಹತ್ತಿಯನ್ನು ಬೆಳೆಯಲಾಗ್ತಿದೆ. ಒಟ್ಟಿನಲ್ಲಿ ಸದ್ಯ ತೊಗರಿ ನಾಡಿನ ರೈತರು ಬದುಕು ಹತ್ತಿಯತ್ತ ಸಾಗಿದೆ. ಸದ್ಯ ಹತ್ತಿ ಬೆಳೆಯಿಂದ ಜೇಬು ತುಂಬುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.


  ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: